Breaking News

ಗೊಂಡಬಾಳ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನದ ಪೂರ್ವಭಾವಿ ಸಭೆ.

Pre-meeting of Gondaba Alumni Friendship Association.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

*ಶ್ರೀ ಜಗದ್ಗುರು ಅನ್ನದಾನೇಶ್ವರ ಪ್ರೌಢಶಾಲೆ ಗೊಂಡಬಾಳ. ಶಾಲೆಯಲ್ಲಿ ಇಂದು ರವಿವಾರ ದಿನಾಂಕ:-27.10.2024 ರಂದು ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನದ ಪೂರ್ವಭಾವಿ ಸಭೆಯು ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರ ಹಾಗೂ ಗ್ರಾಮದ ಗುರುಹಿರಿಯರಾದ ಲಿಂಗಜ್ಜ ಜಾಗೀರ್ದಾರ್ ಮಾಜಿ ತಾಲೂಕು ಪಂಚಾಯಿತಿ ಸದಸ್ಯರು, ಶಿವಪುತ್ರಪ್ಪ ಕುಂಬಾರ ಗ್ರಾಮದ ಹಿರಿಯರು, ದೊಡ್ಡ ನಿಂಗಜ್ಜ ಹಳ್ಳಿಕೇರಿ. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಈಶಪ್ಪ ಹಲಗೇರಿ ಮಾಜಿ ಅಧ್ಯಕ್ಷರು ಜ. ಅ. ಪ್ರೌಢ ಶಾಲೆ ಗೊಂಡಬಾಳ ಈ ಗಣ್ಯರು ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿಕೊಂಡಿದ್ದರು.ಶಾಲೆಯ ಮುಖ್ಯೋಪಾಧ್ಯಾಯರಾದ ಜಿ,ಡಿ ಲಮಾಣಿರವರು 1983 ರಿಂದ ನೂತನ ಇಲ್ಲಿಯವರೆಗಿನ ಎಲ್ಲಾ ಹಳೆಯ ಹತ್ತನೇ ತರಗತಿಯ ನಂತರದ ವಿದ್ಯಾರ್ಥಿಗಳ ತಂಡದವರ ನೇತೃತ್ವದಲ್ಲಿ ನಡೆಯಿತು. ಸಭೆಯ ನಿರೂಪಣೆಯನ್ನು ಶಾಲೆಯ ಶಿಕ್ಷಕರಾದ ರಾಜಪ್ಪ ರವರು, ಪ್ರಾಥಮಿಕ ನುಡಿಯನ್ನು ಶಿಕ್ಷಕರಾದ ಸುರೇಶ ಕೊತ್ತಂಬರಿ ರವರು ಹಾಗೂ ಈ ಕಾರ್ಯಕ್ರಮದ ವಂದನಾರ್ಪಣೆಯನ್ನು ರಾಚಪ್ಪ ರವರು, ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಶಾಲೆಯ ಮುಖ್ಯೋಪಾಧ್ಯರಾದ ಜಿ,ಡಿ ಲಮಾಣಿರವರು ಕಾರ್ಯಕ್ರಮದ ಕುರಿತು ಹಳೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಮಾಡಲು ಚರ್ಚಿಸಿದಾಗ ಎಲ್ಲರೂ ಸೋಮಶೇಖರಯ್ಯ ಇನಾಮ್ ದಾರ ಅವರು ಅಧ್ಯಕ್ಷರಾಗಿ, ಬಸವನಗೌಡ ಪೊಲೀಸ್ ಪಾಟೀಲ್ ರವರು ಉಪಾಧ್ಯಕ್ಷರಾಗಿ, ಚಿದಾನಂದಯ್ಯ ಬನ್ನಿಮಠ ರವರು ಕಾರ್ಯದರ್ಶಿಯಾಗಿ,ಮಹಿಳಾ ಪ್ರತಿನಿಧಿಗಳಾಗಿ ಗಿರಿಜಮ್ಮ ರವರನ್ನು ಸಭೆಯಲ್ಲಿ ಹಾಜರಿದ್ದವರ ಸಮ್ಮತಿಯ ಆದಾರದ ಮೇಲೆ ಆಯ್ಕೆ ಮಾಡಲಾಯಿತು. ಈ ಘಟ್ಟವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸುರೇಶ್ ಕೊತಂಬರಿ ಗುರುಗಳಾದ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಶತಮಾನೋತ್ಸವ ಹಾಗೂ ಅದರ ಸಂಪೂರ್ಣ ಇತಿಹಾಸವನ್ನು ಕುರಿತು ಮಾತನಾಡಿದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *