Breaking News

ಮಳೆ ಸಮೃದ್ದಿಯಾದರೇ ಸುಗ್ಗಿ ಮಾಡ್ತಾರೇ, ಜ್ಞಾನ ಸಮೃದ್ದಿಯಾದರೇ ಗುರುವಂದನೆ ಮಾಡ್ತಾರೇ : ಗಿರಡ್ಡಿ,,,

If there is plenty of rain, then the harvest is done, if there is plenty of knowledge, then one worships the Guru: Girardi

ಜಾಹೀರಾತು


ವರದಿ : ಪಂಚಯ್ಯ ಹಿರೇಮಠ,

ಕೊಪ್ಪಳ : ಮಳೆ ಸಮೃದ್ದಿಯಾದರೇ ಸುಗ್ಗಿ ಮಾಡ್ತಾರೇ, ಜ್ಞಾನ ಸಮೃದ್ದಿಯಾದರೇ ವಿದ್ಯಾರ್ಥಿಗಳು ಇಂತಹ ಗುರುವಂದನೆ ಕಾರ್ಯಕ್ರಮ ಮಾಡ್ತಾರೆ ಎಂದು ರಾಯಚೂರು- ಕೊಪ್ಪಳ RDCC ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಐ. ಎಸ್ ಗಿರಡ್ಡಿ ಹೇಳಿದರು.

ಅವರು ಕುಕನೂರು ತಾಲೂಕಿನ ರಾಜೂರು, ಆಡೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ರವಿವಾರದಂದು 2001-02 ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ತಂದೆ ತಾಯಿ ಭೌತಿಕ ಜನ್ಮ ನೀಡಿದರೇ, ಶಿಕ್ಷಕರು ಮಕ್ಕಳಿಗೆ ಭೌದ್ದಿಕ ಜನ್ಮ ನೀಡತಾರೆ, ಶಿಕ್ಷಕರಿಂದ ಸಂಸ್ಕಾರ, ವಿದ್ಯೆ, ಬುದ್ದಿ ಇವುಗಳೆಲ್ಲವು ವಿದ್ಯಾರ್ಥಿಗಳಿಗೆ ಪ್ರಾಪ್ತವಾಗುತ್ತವೆ ಎಂದು ಹೇಳಿದರು.

ದೇಶದುದ್ದಕ್ಕೂ ಇಂದು ನಾವು ಅಗಾದ ಪ್ರತಿಭೆಗಳನ್ನು ಕಾಣ್ತಿರೋದು ಶಿಕ್ಷಕರಿಂದ ಎನ್ನುವದನ್ನು ನಾವು ಮೊದಲು ಮನಗಾಣಬೇಕಿದೆ. ಶಿಕ್ಷಕರು ಎಲ್ಲರಿಗೂ ಒಂದೇ ಪಾಠ ಮಾಡ್ತಾರೇ ಆದರೆ ಶಿಕ್ಷಣದ ಹಸಿವು ಇರೋರು ಮಾತ್ರ ಶಿಕ್ಷಣದಲ್ಲಿ ಉತ್ತಮ ವಿದ್ಯಾರ್ಥಿಗಳಾಗಿ ಉನ್ನತ ಹುದ್ದೆ ಸೇರ್ತಾರೇ.

ಎಲ್ಲರ ಮನೋಭಿಲಾಷೆ ಒಂದೇ ಆಗಿರುವದಿಲ್ಲಾ ಪ್ರಾಥಮಿಕ ಹಂತದಲ್ಲಿ ದಡ್ಡರಿದ್ದವರು, ಪ್ರೌಢ ಹಂತದಲ್ಲಿ ಬದಲಾವಣೆಯಾಗಿ, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾದ ನಿದರ್ಶನಗಳು ಸಾಕಷ್ಟಿವೆ. ಆದ್ದರಿಂದ ಇಲ್ಲಿ ಯಾರು ದಡ್ಡರಲ್ಲಾ, ಎಲ್ಲರಲ್ಲೂ ಒಂದು ಪ್ರತಿಭೆ ಅಡಗಿರುತ್ತೆ ಆದ್ದರಿಂದ ಗುರುತಿಸಿಕೊಂಡು ಯಶಸ್ವಿಯಾಗಬೇಕು ಎಂದು ಕರೆ ನೀಡಿದರು.

ನಂತರದಲ್ಲಿ ದೇವರಡ್ಡಿ ಮೂಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿ ಗುರು ಎನ್ನುವ ಎರಡಕ್ಷರದಲ್ಲಿ ತುಂಬಾ ಶಕ್ತಿ ಅಡಗಿದೆ. ಗುರುವಿಲ್ಲದೇ ಗುರಿ ತಲುಪಲು ಸಾಧ್ಯವಿಲ್ಲಾ,
ಜಗತ್ತಿನಗೆ ಶ್ರೇಷ್ಠ ವ್ಯಕ್ತಿಗಳನ್ನು ಕೊಡುಗೆ ನೀಡಿದ ಶಕ್ತಿ ಯಾವುದಾದರು ಇದ್ದರೇ ಅದು ಒಬ್ಬ ಗುರುವಿನಿಂದ ಮಾತ್ರ ಸಾಧ್ಯ, ಆದ್ದರಿಂದ ಇಂತಹ ಗುರುಗಳ ಸ್ಮರಣೆ ಅತ್ಯವಶ್ಯವಾಗಿದ್ದು ನಾವು ನಮ್ಮ ಸಹಪಾಠಿಗಳು ನಮ್ಮ ಗುರುವೃಂದಕ್ಕೆ ಇಂದು ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.

ನಂತರದಲ್ಲಿ ಶರಣಪ್ಪ ತೊಂಡಿಹಾಳ ಮಾತನಾಡಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವನ್ನು ದೇವರಿಗೆ ಹೋಲಿಸಲಾಗಿದೆ. ಅವರನ್ನು ನಾವು ಅಂದಿಗೂ ಇಂದಿಗೂ ಗುರು ದೇವೋ ಭವಃ ಎಂದೇ ಸಂಬೋಧಿಸುತ್ತೇವೆ. ಇಂತಹ ಗುರುಗಳಿಂದ ನಾವು ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸುತ್ತಿದ್ದು ನಾವು ಅವರಿಗೆ ಎಷ್ಟು ಕೃತಜ್ಞರಾದರೂ ಕಡಿಮೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ ರಾಜೂರು- ಆಡ್ನೂರ ಅಭಿನವ ಪಂಚಾಕ್ಷರ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳನ್ನು ಹಾಗೂ ಶಿಕ್ಷಕರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಅಗಲಿದ ಗುರುಗಳಿಗೆ ಸಂತಾಪ ಸೂಚಿಸಲಾಯಿತು. ವೇದಿಕೆಯಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಈ ವೇಳೆ ಶಿಕ್ಷಕರಾದ ವ್ಯಾಸರಾಮಾಚಾರ್ಯ, ಕೆ. ವಿ. ಎಸ್ ಮಂಗಳಪ್ಪ, ಲಕ್ಷ್ಮಣ ನಾಯಕ, ಡಿ. ದೊಡ್ಡಬಸಪ್ಪ, ಶರಣಪ್ಪ ವೀರಾಪೂರ, ಜಯಶ್ರೀ ಭಜೇಂತ್ರಿ, ಸಂಗಮ್ಮ ಭಾವಿಕಟ್ಟಿ, ದೇವಣ್ಣ ವೀರಭದ್ರಪ್ಪ, ನೀಲಕಂಠಪ್ಪ ಕಂಬಳಿ, ಅಮರೇಶ ಶಿವರಡ್ಡಿ, ಗವಿಸಿದ್ದಪ್ಪ ಪಟ್ಟೇದ್, ಅಮರಗೌಡ ಪಾಟೀಲ್ ಸೇರಿದಂತೆ SDMC ಅಧ್ಯಕ್ಷರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಹಳೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.