Young men and women are workers for a day towards new society
ಮಾನ್ವಿ: ಪಟ್ಟಣದ ಲೋಯಾಲ ಸಮಾಜ ಕೇಂದ್ರದಲ್ಲಿ ನವ ಸಮಾಜದೆಡೆಗೆ ಯುವಕ, ಯುವತಿಯರು ಎನ್ನುವ ವಿಷಯದ ಕುರಿತು ನಡೆದ ತರಬೇತಿ ಕಾರ್ಯಗಾರವನ್ನು ಸಂವಿಧಾನ ಪಿಠೀಕೆಯನ್ನು ಭೋಧಿಸುವ ಮೂಲಕ ಉದ್ಘಾಟಿಸಿ ಹಾನಗಲ್ ಲೊಯೋಲ ವಿಕಾಸ ಕೇಂದ್ರದ ನಿರ್ದೆಶಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಫಾ.ಜೆರಾಲ್ಡ್ ಮಾತನಾಡಿ ಇಂದಿನ ಯುವಕ,ಯುವತಿಯರಿಗೆ ಅತ್ಮ ವಿಶ್ವಾಸವನ್ನು ಮೂಡಿಸುವುದು,ಉತ್ತಮ ವ್ಯಕ್ತಿತ್ವವನ್ನು ಬೆಳೆಸುವುದು,ನಾಯಕತ್ವದ ಗುಣಗಳನ್ನು ಬೆಳೆಸುವುದು ,ವೃತ್ತಿ ಮಾರ್ಗದರ್ಶನ ನೀಡುವುದು , ಯುವಕ ,ಯುವತಿಯರಲ್ಲಿರುವ ಕಲೆ,ಹಾವ್ಯಸಗಳನ್ನು ಹೋರಹೊಮ್ಮುವುದಕ್ಕೆ ಉತ್ತಮವಾದ ವೇದಿಕೆಯನ್ನು ಕಲ್ಪಿಸುವುದು ಪ್ರತಿಯೊಬ್ಬರು ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳನ್ನು ಅಳವಡಿಸಿಕೊಂಡು ಪಾಲಿಸುವುದಕ್ಕೆ ಅಗತ್ಯವಾದ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಯುವಸಮೂದಾಯದ ಅಧ್ಯಕ್ಷರಾಗಿ ಚೀಕಲಪರ್ವಿಯ ಎಲಿಯಾಸ್, ಉಪಾಧ್ಯಕ್ಷರಾಗಿ ಸಿದ್ದಪ್ಪ ಅಮರಾವತಿಯವರನ್ನು ಆಯ್ಕೆ ಮಾಡಲಾಯಿತು.
ತಾಲೂಕಿನ ವಿವಿಧ ಗ್ರಾಮಗಳ ೪೦ಕ್ಕೂ ಹೆಚ್ಚು ಯುವಕ,ಯುವತಿಯರು ತರಬೇತಿಯಲ್ಲಿ ಭಾಗವಹಿಸಿದರು. ಲೋಯಾಲ ಸಮಾಜ ಕೇಂದ್ರದ ನಿರ್ದೆಶಕರಾದ ಫಾ.ಡಾನ್ ಲೋಬೋ,ಫಾ.ಅವಿನಾಶ ಸೇರಿದಂತೆ ಇನ್ನಿತರರು ಭಾಗವಹಿಸಿದರು.