Vidyarthi Chetana Ayush Seva Programme
ಮಾನ್ವಿ :ಪಟ್ಟಣದ ಮೆಟ್ರಿಕ್ ನಂತರದ ಪರಿಶಿಷ್ಟ ವರ್ಗಗಳ ಬಾಲಕಿಯರ ವಸತಿ ನಿಲಯದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಇಲಾಖೆ ಹಾಗೂ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಚಿಕಲಪರ್ವಿ ಮತ್ತು ತಾಲೂಕು ಯುನಾನಿ ಆಸ್ಪತ್ರೆಯ ಸಂಯೋಗದಲ್ಲಿ 2024-25 ನೇ ಸಾಲಿನ ವಿಶೇಷ ಘಟಕ ಯೋಜನೆ (ಎಸ್‍ಸಿಎಸ್‍ಪಿ/ಟಿಎಸ್‍ಪಿ) ಅಡಿ ವಿದ್ಯಾರ್ಥಿ ಚೇತನ ಆಯುಷ ಸೇವಾ ಕಾರ್ಯಕ್ರಮಕ್ಕೆ ಪರಿಶಿಷ್ಟ ಪಂಗಡ ಇಲಾಖೆಯ ಅಧಿಕಾರಿ ಮಹಾಲಿಂಗಪ್ಪ ಇಂಗಳದಾಳ್ ಅವರು ಸಸಿಗೆ ನೀರು ಹಾಕುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಶಕ್ತಿವರ್ಧಕ ಖರ್ಜುರ ಪಾನಕ ಹಾಗೂ ಆರೋಗ್ಯ ಮತ್ತು ಆಹಾರ ಆಯುರ್ವೇದ ಔಷಧಿಗಳ, ಮನೆಮದ್ದು ಕುರಿತು ಉಪನ್ಯಾಸ ನೀಡಿ ಸಾಮಾನ್ಯ ವೈದ್ಯಕೀಯ ತಪಾಸಣೆ ಶಿಬಿರವನ್ನು ಜರುಗಿಸಲಾಯಿತು.
ಈ ಸಂದರ್ಭದಲ್ಲಿ ವಸತಿ ನಿಲಯ ಮೇಲ್ವಿಚಾರಕಿ ವಿಜಯಲಕ್ಷ್ಮಿ , ವೈದ್ಯಾಧಿಕಾರಿಗಳಾದ ಡಾ. ರಾಜೇಂದ್ರ ಬೆನಕನಾಳ, ಡಾ. ನಬಿ ಮೊಯಿನುದ್ದೀನ್. ಹಾಗೂ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ಮತ್ತು ಉಪನ್ಯಾಸಕರಾದ ಆಂಜನೇಯ ನಸಲಾಪುರ ಹಾಗೂ ಆಯುಷ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.