Raja Manjunath Nayaka 29th birthday celebration through service work
ಮಾನ್ವಿ : ತಾಲೂಕಿನ ಪೋತ್ನಾಳ ಗ್ರಾಮದ ಸರ್ವ ಜಾತಿ ಜನಾಂಗದ ಪ್ರೀತಿಯ ಯುವ ನಾಯಕ ಯುವಕರ ಕಣ್ಮಣಿ ಕಷ್ಟ ಅಂತ ಬಂದರೆ ಜೊತೇಲಿ ನಿಂತು ಧೈರ್ಯ ತುಂಬುವ ಮೂಲಕ ಚಿಕ್ಕ ವಯಸ್ಸಿನಲ್ಲೇ ಅಪಾರ ಅಭಿಮಾನ ಬಳಗ ಹೊಂದಿರುವ ಭವಿಷ್ಯದ ನಾಯಕ ದಿವಂಗತ ಶ್ರೀನಿವಾಸ್ ನಾಯಕ ಅವರ ತಮ್ಮನಾದ ಯುವ ಕಾಂಗ್ರೆಸ್ ಮುಖಂಡ ರಾಜ ಮಂಜುನಾಥ್ ನಾಯಕ ರವರ 29 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ರಾಜ್ಯ ಮಟ್ಟದ ಸಂಗ್ರಣಿ ಕಲ್ಲು ಎತ್ತುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮುಖಂಡರು ಕೇಕ್ ಕತ್ತರಿಸುವ ಮೂಲಕ ಶುಭ ಹಾರೈಸಿದರು. ನಂತರದಲ್ಲಿ ಕಾರ್ಯಕ್ರಮದ್ದೇಶಿಸಿ ಮಾತನಾಡಿ ಇಂದಿನ ಆಧುನಿಕ ಯುಗದ ಭರಾಟೆಯಿಂದಾಗಿ ಹಿಂದಿನ ಕಾಲದ ಗ್ರಾಮೀಣ ಕ್ರೀಡೆ ನಶಿಸಿ ಹೋಗುತ್ತಿದೆ. ಈಗಿನ ಕಾಲದ ವೇಟ್ ಲಿಫ್ಟಿಂಗ್ ಹಿಂದಿನ ಕಾಲದಲ್ಲಿಯೂ ಇತ್ತು. ಅದನ್ನು ಸಂಗ್ರಾಣಿ ಕಲ್ಲು ಎತ್ತುವ ಕ್ರೀಡೆ ಎಂದೇ ಕರೆಯುತ್ತಿದ್ದರು. ಇಂತಹ ಸಾಹಸ ಪ್ರದರ್ಶನ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಇರುವುದು ಗಮನ ಸೆಳೆಯುವಂತಾಗಿದೆ ಎಂದರು.
ಸಂಗ್ರಣಿ ಕಲ್ಲು ಎತ್ತುವ ಸ್ಪರ್ಧೆ :
ಈ ಸ್ಪರ್ಧೆಯಲ್ಲಿ ರಾಯಚೂರು ಜಿಲ್ಲೆಯ ವಿವಿಧ ಭಾಗಗಳಿಂದ ಪೈಲ್ವಾನಗಳು ಆಗಮಿಸಿದರು
ಮಧ್ಯಾಹ್ನ 2ಗಂಟೆ ಗೆ ಸ್ಪರ್ಧೆ ಆರಂಭಗೊಂಡು, ರೋಚಕ ಕ್ಷಣಕ್ಕೆ ಸಾಕ್ಷಿ ಆಯಿತು.ಯುವ ಸಮುದಾಯ ಕೆಕೆ, ಸಿಳ್ಳೆ ಹೊಡೆಯುವ ಮೂಲಕ ಸ್ಪರ್ಧಿಗಳಲ್ಲಿ ಉತ್ಸಾಹ ಮೂಡಿಸಿತು. ವಿವಿಧ ಭಾಗಗಳಿಂದ ಆಗಮಿಸಿದ ಪೈಲ್ವಾನ್ಗಳು ತಮ್ಮ ಶಕ್ತಿ ಅನುಸಾರ ಭಾರವಾದ ಕಲ್ಲು ಎತ್ತಿ ಪ್ರದರ್ಶನ ಮಾಡಿದರು. ಸ್ಪರ್ಧೆಗಳು ಮುಗಿದ ನಂತರ ವಿಜೇತರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಪ್ರಥಮ ಬಹುಮಾನ ನಾಗನದೊಡ್ಡಿ ಪ್ರತಾಪ ನಾಯಕ 10,000. ದ್ವಿತೀಯ ಬಹುಮಾನ ಗುಡೆಬಲ್ಲೂರು ಸುರೇಶ 5000. ತೃತೀಯ ಬಹುಮಾನ ಕುಕನೂರು ಹಂಪಯ್ಯ ನಾಯಕ 3000 ಸಾವಿರ ರೂ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡ ಪಕ್ಷದ ಕೆ. ಕರಿಯಪ್ಪ, ಕಾಂಗ್ರೆಸ ಮುಖಂಡ ಬಾಲಸ್ವಾಮಿಕೊಡ್ಲಿ, ಕಾಂಗ್ರೆಸ್ ಮುಖಂಡ ವಕೀಲ ಶಿವರಾಜ್ ನಾಯಕ, ಜೆಡಿಎಸ ರಾಜ್ಯ ಘಟಕದ ಉಪಾಧ್ಯಕ್ಷ ರಾಜ ರಾಮಚಂದ್ರ ನಾಯಕ, ರಾಜಾ ಸುಭಾಷ ನಾಯಕ, ಡಾ. ಬಸವರಾಜಪ್ಪ ಪೋತ್ನಾಳ, ಡಾ. ಗುರುಶರ್ಮಾ, ಮೈಕಲ್ ಕೊಡ್ಲಿ, ನಾಗರಾಜ್ ನಾಯಕ ಕುರುಕುಂದ, ಬಿಜೆಪಿ ಮುಖಂಡ ವಿರೂಪಾಕ್ಷಿ ಗೌಡ, ಯಂಕೋಬ ನಾಯಕ ಕರ್ಲಕುಂಟಿ, ಹನುಮಂತ ಖರಾಬದಿನ್ನಿ, ಬಸವರಾಜ್ ಗುಜ್ಜಲ್, ಬಸವರಾಜ್ ಜೆ ಪಿ, ಸಿದ್ದಯ್ಯ ಸ್ವಾಮಿ, ಗ್ರಾ. ಪಂ ಸದಸ್ಯ ಅಶೋಕ, ರವಿಗೌಡ ಖರಾಬದಿನ್ನಿ, ವಕೀಲ ಹನುಮೇಶ ಜಿನ್ನೂರು, ಸೇರಿದಂತೆ ಪಕ್ಷದ ಮುಖಂಡರು ಹಾಗೂ ಅಭಿಮಾನಿಗಳು, ಕ್ರೀಡಾ ಅಭಿಮಾನಿಗಳು ಗ್ರಾಮಸ್ಥರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.