Part of the reservoirs were filled up by: MLA M.R. Man Junath.
ವರದಿ : ಬಂಗಾರಪ್ಪ .ಸಿ .
ಹನೂರು :- ಜಲಾಶಯಗಳು ಉತ್ತಮ ಮಳೆಯಾದರೆ ಎಲ್ಲಾವು ಭರ್ತಿಯಾಗುತ್ತವೆ ಇದರಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ರೈತರ ಮುಗದಲ್ಲಿ ಮಂದಹಾಶ ತುಂಬಿದರೆ ಅವರ ಬೆಳೆಗಳಿಗೆ ನೀರು ಬಿಡಲು ಅನುಕೂಲವಾಗುತ್ತದೆ ಎಂದು ಶಾಸಕರಾದ ಎಮ್ ಆರ್ ಮಂಜುನಾಥ್ ತಿಳಿಸಿದರು .
ತಾಲೂಕಿನ ಹೂಗ್ಯ0ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಿನತ್ ಡ್ಯಾಂ ಜಲಾಶಯ ಭರ್ತಿ ಆದ ಹಿನ್ನೆಲೆ ಭಾಗಿನ ಅರ್ಪಿಸಿ ನಂತರ ಮಾತನಾಡಿದ ಅವರು ಕ್ಷೇತ್ರದಲ್ಲಿ ಉತ್ತಮ ಮಳೆ ಆಗುತ್ತಿದೆ. ಮಿನ್ಯತ್ ಡ್ಯಾಂ ಸೇರಿದಂತೆ ಎಲ್ಲಾ ಜಲಾಶಯಗಳು ಭರ್ತಿಗೊಂಡಿರುವುದು ಒಳ್ಳೆಯ ವಿಚಾರ. ಸಕಲ ಜೀವರಾಶಿಗಳಿಗೂ ಅತ್ಯಂತ ಅವಶ್ಯಕತೆ ಇರುವ ನೀರನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ .
ಮುಂದಿನ ದಿನಗಳಲ್ಲಿ ನಮ್ಮ ರೈತರಿಗೆ ಉತ್ತಮ ಮಳೆಯಾಗಿ ಸುಬಿಕ್ಷವಾಗಿ ಬೆಳೆ ಆಗಲಿ ಎಂಬ ಉದ್ದೇಶ ದಿಂದ ಇಂದು ದೇವರ ನೆನೆದು ಜಲಾಶಯಕ್ಕೆ ಬಾಗಿನ ಅರ್ಪಿಸುತ್ತಿರುವುದು ತುಂಬಾ ಸಂತಸದ ವಿಷಯವಾಗಿದೆ.
ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಲಿ ಎಂಬುದು ನಮ್ಮ ಆಶಯ ಸಂಗ್ರಹವಾದ ನೀರನ್ನು ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕಾಲುವೆಗಳ ಹೂಳು ತೆಗೆಸಿ ರೈತರಿಗೆ ನೀರಿನ ಸಮಸ್ಯೆ ಉಲ್ಬಣ ಆಗದ ರೀತಿಯಲ್ಲಿ ಕಾರ್ಯಕ್ರಮ ರೂಪಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಎಇ ಪ್ರತಾಪ್, ಇಓ ಉಮೇಶ್, ಪಿಡಿಓ ಪುಷ್ಪಲತಾ, ಹನೂರು ರಾಜೂಗೌಡ. ಸಿದ್ದರಾಜು. ಮುನಿಯಪ್ಪ ಯರಂಬಾಡಿ ಮಹೇಶ್ ಚಿನ್ನ ವೆಂಕಟ ಎಸ್.ಆರ್ ಮಹಾದೇವ್ ಉದ್ದನೂರು ಗಿರಿ ಪ್ರಮೋದ್ ಸೇರಿದಂತೆ ಇನ್ನಿತರು ಹಾಜರಿದ್ದರು.