Letter from Mujahid Marched to the Chief Minister to develop a student-friendly website of the Education Department

ರಾಯಚೂರು : ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ ನಲ್ಲಿ ಶಾಲಾ ಕಾಲೇಜು ವಿಧ್ಯಾರ್ಥಿಗಳು ವಿಧ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಬೇಕು ಆದರೆ ಆನ್ಲೈನ್ ಅರ್ಜಿ ಸಲ್ಲಿಸಲು ಒಬ್ಬ ವಿಧ್ಯಾರ್ಥಿಗೆ ಒಂದು ಫೊನ್ ನಂಬರ್ ಬೇಕು ಎಂಬ ನಿಯಮ ಕಾನೂನು ಬಾಹಿರವಾಗಿದೆ ಈ ನಿಯಮ ತಕ್ಷಣ ತೆಗೆದು ವಿಧ್ಯಾರ್ಥಿ ವೇತನ ಅರ್ಜಿ ದಿನಾಂಕವನ್ನು ವಿಸ್ತರಿಸಬೇಕು ಎಂದು ದೇವಸೂಗೂರು ಬ್ಲಾಕ್ ಕಾಂಗ್ರೆಸ್ (ಅ.ಘ) ಕಾರ್ಯದರ್ಶಿಯಾದ ಮುಜಾಹಿದ್ ಮರ್ಚೆಡ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ, ಈಗಾಗಲೆ ಪ್ರತಿ ವರ್ಷದಂತೆ ಈ ವರ್ಷದ ಶೈಕ್ಷಣಿಕ ವರ್ಷದ ವಿದ್ಯಾರ್ಥಿವೇತಕ್ಕೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಎಸ್.ಎಸ್.ಪಿ.ಪೋರ್ಟಲ್ ಮುಖಾಂತರ ಅರ್ಜಿ ಕರೆದಿದ್ದು ದಿನಾಂಕ ಮುಗಿಯಲು ಸಹ ಬಂದಿದೆ ಇದರಿಂದ ಶಾಲಾ ಕಾಲೇಜು ವಿಧ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಮತ್ತು ಬಹಳಷ್ಟು ವಿದ್ಯಾರ್ಥಿಗಳು ವಿಧ್ಯಾರ್ಥಿ ವೇತನದಿಂದ ವಂಚಿತರಾಗುತಿದ್ದಾರೆ, ಮುಖ್ಯವಾಗಿ ಗ್ರಾಮೀಣ ಭಾಗದ ವಿಧ್ಯಾರ್ಥಿಗಳ ಪಾಲಕರು ಬಡಕುಟುಂಬಗಳಿಂದ ಇದ್ದು ಅವರ ಪಾಲಕರ ಹತ್ತಿರ ಒಂದೇ ಒಂದು ಮೋಬೈಲ್ ಬಳಕೆ ಮಾಡಲು ಬಹಳ ಕಷ್ಟಕರವಾಗಿದೆ ಅದನ್ನು ರೀಚಾರ್ಜ್ ಮಾಡಲು ಸಾಲಸೂಲ ಮಾಡಿ ಮೊಬೈಲ್ ಬಳಕೆ ಮಾಡುತಿದ್ದಾರೆ, ಒಂದು ವಿದ್ಯಾರ್ಥಿಗೆ ಒಂದು ಮೋಬೈಲ್ ನಂಬರ್ ಬೇಕೆಂಬ ನಿಯಮದಿಂದ ಹಾಗೂ ಒ.ಟಿ.ಪಿ.ಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ.
ಕಾರಣ ಸರ್ಕಾರವು ವಿಧ್ಯಾರ್ಥಿಗಳ ಶಿಕ್ಷಣದ ಹಿತದೃಷ್ಟಿಯಿಂದ ಮತ್ತು ಪಾಲಕರ ಆರ್ಥಿಕ ಪರಿಸ್ಥಿತಿಯನ್ನು ಅರಿತು ವಿಧ್ಯಾರ್ಥಿಗಳ ಶಾಲಾ ದಾಖಲೆಯ ಸಮಯದಲ್ಲಿಯೆ ಎಲ್ಲಾ ದಾಖಲೆಗಳನ್ನು ಪಡೆದುಕೊಂಡು ಎಸ್.ಎ.ಟಿ.ಎಸ್. ವೆಬ್ಸೈಟ್ ಮತ್ತು ವಿಶ್ವ ವಿದ್ಯಾಲಯದ ವೆಬ್ಸೈಟ್ ನಲ್ಲಿಯೆ ವಿದ್ಯಾರ್ಥಿ ವೇತನದ ವ್ಯವಸ್ಥೆ ಮಾಡಬೇಕು ಇದರಿಂದ ಒಂದೆ ವೆಬ್ಸೈಟ್ ನಲ್ಲಿಯೆ ಎಲ್ಲಾ ದಾಖಲೆಗಳು ಅಂದರೆ ವಿದ್ಯಾರ್ಥಿಗಳ ಜಾತಿ-ಆದಾಯ ವಿವರ, ಅಂಕಗಳ ವಿವರ, ಅವರ ವೈಯಕ್ತಿಕ ವಿವರ, ಬ್ಯಾಂಕ್ ವಿವರ ಹಾಗೂ ಅಂಕಗಳ ವಿವರಗಳು ಇರುವುದರಿಂದ ವಿಧ್ಯಾರ್ಥಿಗಳು ಮತ್ತು ಪೋಷಕರು ಆನ್ಲೈನ್ ಸೆಂಟರ್ಗಳಿಗೆ ಅಲೆದಾಡುವುದು ಮತ್ತು ಇತರೆ ಒಬ್ಬ ವಿದ್ಯಾರ್ಥಿಗೆ ಒಂದೇ ಮೋಬೈಲ್ ನಂಬರ ನಂತಹ ಮತ್ತು ಸರ್ವರ್ ಸಮಸ್ಯೆಗಳಿಂದ ಉಳಿಸಬಹುದು ಇದರಿಂದ ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗುವುದಿಲ್ಲ ಮತ್ತು ಯಾರಿಗೂ ಮೋಸ ಆಗುವುದಿಲ್ಲ, ಆದರೆ ವಿಪರ್ಯಾಸ ಅಂದರೆ ಪ್ಯಾನ್ ಕಾರ್ಡ್, ಬ್ಯಾಂಕಿಂಗ್, ರೇಷನ್ ಕಾರ್ಡ್, ಕಂದಾಯ ಇಲಾಖೆ ಹೀಗೆ ಹಲವಾರು ಇಲಾಖೆಯ ಸೇವೆಗಳಿಗೆ ವ್ಯವಸ್ಥಿತ ವೆಬ್ಸೈಟ್ ಗಳು ಒಂದಕ್ಕೊಂದು ಇಂಟರಲಿಂಕ್ ಆಗಿ ಆಧಾರ ಸರ್ವರ್ ಜೊತೆ ಆಧಾರ ಮಾಹಿತಿ ಪಡೆದು ಅಲ್ಲಿಂದಲೆ ಎಲ್ಲಾ ಮಾಹಿತಿಯನ್ನು ಪಡೆದುಕೊಂಡು ಕಾರ್ಯನಿರ್ವಹಿಸುತ್ತಿವೆ ಆದರೆ ಶಿಕ್ಷಣ ಇಲಾಖೆಯು ಮಾತ್ರ ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಾ ಸಮಸ್ಯೆಗಳ ಸುಳಿಯಲ್ಲಿ ಮಕ್ಕಳನ್ನು ಹಾಗೂ ಪಾಲಕರನ್ನು ಸಿಲುಕಿಸಿ ಮಕ್ಕಳ ಶಿಕ್ಷಣದ ಜೊತೆ ಆಟವಾಡುತ್ತಿವೆ, ಕಾರಣ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಒತ್ತು ನೀಡಿ ವಿಧ್ಯಾರ್ಥಿಗಳಿಗೆ ಅನುಕೂಲಕರ ವೆಬ್ಸೈಟ್ ಅನ್ನು ಅಭಿವೃದ್ಧಿ ಪಡಿಸಲು ರಾಯಚೂರು ಜಿಲ್ಲೆಯ ದೇವಸೂಗೂರು ಕಾಂಗ್ರೆಸ್ (ಅ.ಘ) ಕಾರ್ಯದರ್ಶಿ ಇಂಜಿನಿಯರ್ ಮುಜಾಹಿದ್ ಮರ್ಚೆಡ್ ಮಾನ್ಯ ಮುಖ್ಯಮಂತ್ರಿ ಹಾಗೂ ಸಚಿವರಿಗೆ ರಾಯಚೂರು ಜಿಲ್ಲಾಧಿಕಾರಿಗಳ ಮುಖಾಂತರ ಪತ್ರಬರೆದಿರುತ್ತಾರೆ.