Breaking News

ಜೀವನ ಜಾನಪದ ಜಾತ್ರೆ ಸಾಂಸ್ಕೃತಿಕಕಾರ್ಯಕ್ರಮ

Jeevan Folk Fair Cultural Program

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಿಂಧನೂರು,ಅ.24 :ನಗರದ ಟೌನ್ ಹಾಲ್ ನಲ್ಲಿ ಅ.27 ಕ್ಕೆ ಜೀವನ ಜಾನಪದ ಜಾತ್ರೆ ಸಾಂಸ್ಕೃತಿಕ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿ ಎಂದು ಗವಿ ಸಿದ್ದೇಶ್ವರ ಸಾಂಸ್ಕೃತಿಕ ಜಾನಪದ ಕಲಾ ಸಂಘ ಸಿಂಧನೂರು ತಾಲೂಕು ಅಧ್ಯಕ್ಷ ಹನುಮೇಶ ಬಾಗೋಡಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದರು.ಗವಿ ಸಿದ್ದೇಶ್ವರ ಸಾಂಸ್ಕೃತಿಕ ಜಾನಪದ ಕಲಾ ಸಂಘ ಸಿಂಧನೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದು ನಗರದ ಟೌನ್ ಹಾಲ್ ನಿಂದ ಮೆರವಣಿಗೆ ವೀರಗಾಸೆ, ಡೊಳ್ಳು ಕುಣಿತ,ಚಿಲಿಪಿಲಿ ಗೊಂಬೆ, ಹಗಲು ವೇಷ,ತಾಷಾರೊಂಡಲ ಸೇರಿದಂತೆ 6 ಕಲಾ ತಂಡಗಳೊಂದಿಗೆ ಪ್ರಾರಂಭವಾಗಿ ಕನಕದಾಸ ವೃತ್ತ, ಚೆನ್ನಮ್ಮ ಸರ್ಕಲ್ ಮೂಲಕ ಮರಳಿ ಟೌನ್ ಹಾಲ್ ಬರುವುದು. ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಕೊಪ್ಪಳ ಗವಿ ಮಠದ ಅಭಿನವ ಗವಿ ಸಿದ್ದೇಶ್ವರ ಮಹಾ ಸ್ವಾಮಿಗಳು ವಹಿಸುವರು ಎಂದರು‌.
ಸಂಘಟನೆ ಪ್ರಧಾನ ಕಾರ್ಯದರ್ಶಿ ಹಾಗೂ ವೀರಗಾಸೆ ಕಲಾವಿದ ಬಸವರಾಜ ಮಾತನಾಡಿ ವೇದಿಕೆಯಲ್ಲಿ ಭಾವಗೀತೆ, ತತ್ಪಪದ,ಏಕತಾರಿ,ಸೋಬಾನ ಪದ ,ಲಾವಣಿ ಹಾಡು, ಕನ್ನಡ ಗೀತೆ, ಸುಗಮ‌ ಸಂಗೀತ ,ಡೊಳ್ಳಿನ ಪದ,ಜಾನಪದ ನೃತ್ಯ ಪ್ರದರ್ಶನ ನಡೆಯುವವು ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ 10 ಜನರಿಗೆ ಕಲಾ ಭೂಷಣ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದರು .
ಇದೆ ಸಂದರ್ಭದಲ್ಲಿ ಗುತ್ತೆದಾರ ಬಸವರಾಜ ಕುರುಕುಂದ,ಅಯ್ಯಪ್ಪ ಕುನ್ನಟಗಿ, ನಾಗರಡ್ಡಿ,ಮುನ್ನ ಉಪಸ್ಥಿತರಿದ್ದರು.

About Mallikarjun

Check Also

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಜಿಲ್ಲಾಡಳಿತದಿಂದ ಹೆಲ್ಪ್ಲೈನ್ ಆರಂಭ

Social, educational survey: District administration launches helpline ಕೊಪ್ಪಳ ಸೆಪ್ಟೆಂಬರ್ 23 (ಕರ್ನಾಟಕ ವಾರ್ತೆ): ಸೆಪ್ಟೆಂಬರ್ 22 ರಿಂದ …

Leave a Reply

Your email address will not be published. Required fields are marked *