Breaking News

ಕರ್ನಾಟಕ ರಾಜ್ಯ ಬೇಡರ ಸಮಿತಿ ಹಾಗೂ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹ

Dharni Satyagraha by Karnataka State Bader Committee and Raitha Sangh and Green Sena Taluk Committee

ಜಾಹೀರಾತು

ಮಾನ್ವಿ : ಪಟ್ಟಣದ ಶಾಸಕರ ಭವನದ ಹತ್ತಿರ ಕರ್ನಾಟಕ ರಾಜ್ಯ ಬೇಡರ ಸಮಿತಿ ಹಾಗೂ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿ ವತಿಯಿಂದ ನಕಲಿ ರಸಗೊಬ್ಬರ ಕ್ರಿಮಿನಾಶಕ ಮಾರಾಟ ಮಾಡಿ ರೈತರಿಗೆ ಮೋಸ ಮಾಡಿರುವ ಮಲ್ಲದಗುಡ್ಡ ಕ್ಯಾಂಪ್ ನಲ್ಲಿರುವ ಶ್ರೀನಿವಾಸ್ ಆಗ್ರೋ ಟ್ರೇಡರ್ಸ್ ಹಾಗೂ ಅಮೋಘ ಸಿದ್ಧೇಶ್ವರ ಕುರಿ ಸಂಗೋಪನಾ ಉಣ್ಣೆ ಉತ್ಪಾದಕರ ಸಹಕಾರ ಸಂಘ ಇವರ ಲೈಸೆನ್ಸ್ ರದ್ದುಪಡಿಸಿ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಹಾಗೇ ನೊಂದ ರೈತರಿಗೆ ಪರಿಹಾರ ಒದಗಿಸಬೇಕು ಮತ್ತು ಹಿರೇಕೊಟ್ನೆಕಲ್ ರೈತರ ಹೊಲಗಳಿಗೆ ಬಂಡಿ ದಾರಿಯನ್ನು ರದ್ದು ಮಾಡಲಾಗಿದೆ ಸರ್ಕಾರ ಸುತ್ತೋಲೆ ಪ್ರಕಾರ ತೆರವುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧ್ಯಕ್ಷ ಕೆ.ವೈ.ಬಸವರಾಜ ನಾಯಕ ಮಾತನಾಡಿ ಮಸ್ಕಿ ತಾಲೂಕಿನ ಹಾಲಾಪೂರ ಹೋಬಳಿಯ ಶ್ರೀನಿವಾಸ್ ಆಗ್ರೋ ಟ್ರೇಡರ್ಸ್ ಮತ್ತು ಅಮೋಘ ಸಿದ್ಧೇಶ್ವರ ಕುರಿ ಸಂಗೋಪನಾ ಉಣ್ಣೆ ಉತ್ಪಾದಕರ ಸಹಕಾರ ಸಂಘ ನಿಯಮಿತ ಈ ಎರಡೂ ಅಂಗಡಿಯ ಮಾಲೀಕರಾದ ಬಿ. ವಾಸು ಹಾಗೂ ಮಲ್ಲಯ್ಯ ಗೋರ್ಕಲ್ ಇವರು ಆ ಭಾಗದ ರೈತರಿಗೆ ನಕಲಿ ರಸಗೊಬ್ಬರ ಕ್ರಿಮಿನಾಶಕ ಮಾರಾಟ ಮಾಡಿ ರೈತರಿಗೆ ಮೋಸ ಮಾಡಿರುವ ಈ ಅಂಗಡಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು, ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗಯೇ ಅಂಗಡಿ ಮಾಲೀಕ ಜೊತೆಗೆ ಶಾಮೀಲಾಗಿರುವ ಕೃಷಿ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ವಜಾಗೊಳಿಸಿ ತನಿಖೆಗೆ ನಡೆಸಬೇಕು ಮತ್ತು ಅನ್ಯಾಯಕ್ಕೆ ಒಳಗಾದ ರೈತರಿಗೆ ಸೂಕ್ತವಾದ ಪರಿಹಾರ ನೀಡ ಬೇಕು, ಜಿಲ್ಲೆಯಾದ್ಯಂತ ರಸಗೊಬ್ಬರ ಹಾಗೂ ಕ್ರಿಮಿನಾಶಕ ಅಂಗಡಿಗಳು ಜೇಡರ ಬಲೆಯಂತೆ ಹಬ್ಬಿಕೊಂಡಿವೆ. ಇದನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಿ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗಯೇ ಹಿರೇಕೊಟ್ನೆಕಲ್ ಗ್ರಾಮದ ರೈತರ ಹೊಲಗಳಿಗೆ ಹೋಗುವ ಬಂಡಿ ದಾರಿಯನ್ನು ರದ್ದು ಮಾಡಲಾಗಿದ್ದು ಅದನ್ನು ಸರ್ಕಾರದ ಸುತ್ತೋಲೆ ಪ್ರಕಾರ ತೆರವುಗೊಳಿಸುವಂತೆ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಮಸ್ಕಿ ತಾಲೂಕಿನ ತಹಶೀಲ್ದಾರ್ ಮಲ್ಲಪ್ಪ ಮತ್ತು ಮಾನ್ವಿ ತಹಸೀಲ್ದಾರ್ ರಾಜು ಪಿರಂಗಿ ಹಾಗೂ ಸಹಾಯಕ ಕೃಷಿ ನಿರ್ದೇಶಕರಾದ ಗುರುನಾಥ ಭೂಸನೂರ್ ರವರಿಗೆ ಮನವಿ ಪತ್ರ ಸಲ್ಲಿಸಿವ ಮೂಲಕ ಒತ್ತಾಯಿಸಿದರು.ಮನವಿ ಸ್ವೀಕರಿಸಿದ ಮಸ್ಕಿ ತಹಶೀಲ್ದಾರ್ ಮಲ್ಲಪ್ಪ ಅವರು ಮಾತನಾಡಿ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬೇಡರ ಸಮಿತಿಯ ರಾಜ್ಯಾಧ್ಯಕ್ಷ ಅಂಬಣ್ಣ ನಾಯಕ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಸವರಾಜ ನಾಯಕ ಹಿರೇಕೊಟ್ನೆಕಲ್, ಕಾರ್ಯಕಾರಿ ಸಮಿತಿಯ ಸದಸ್ಯ ಜಲ್ಲಿ ಆಂಜನೇಯ ನೀರಮಾನ್ವಿ, ಮಾರೆಪ್ಪ ನಾಯಕ ಬಲ್ಲಟಗಿ, ತಾಲೂಕ ಅಧ್ಯಕ್ಷರ ಹೊಳೆಯಪ್ಪ ಉಟಕನೂರು, ವೀರೇಶ ನಾಯಕ, ಅಯ್ಯಪ್ಪ ನಾಯಕ ನಲ್ಗಂದಿನ್ನಿ, ನರಸಯ್ಯ ನಾಯಕ ಮ್ಯಾಕಲ್, ಬಸನಗೌಡ ನಾಯಕ ಉಟಕನೂರು ಹಾಗೂ ವಿವಿಧ ಗ್ರಾಮದ ರೈತರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.