Ambedkar competitive exam – Suresh Chalawadi call for students and young people.
ಗದಗ,25 :ಡಿವಿಪಿ ರಾಜ್ಯ ಘಟಕ ವಿದ್ಯಾರ್ಥಿ ಯುವ ಜನರಿಗಾಗಿ ಡಾ.ಬಿ ಆರ್.ಅಂಬೇಡ್ಕರ್ ಅವರ ಜೀವನಾಧಾರಿತ ಸ್ಪರ್ಧಾತ್ಮಕ ಪರೀಕ್ಷೆಯನ್ನು ಹಮ್ಮಿಕೊಂಡಿದ್ದು ಕಾರಣ ವಿದ್ಯಾರ್ಥಿ ಯುವ ಸಮುದಾಯ ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ವಾಯ್.ಚಲವಾದಿ ಕರೆ ನೀಡಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕ ಪ್ರಸಕ್ತ ಸಾಲಿನ ಡಾ.ಬಿ ಆರ್.ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಚಾಲನೆ ನೀಡಿದೆ.ಅದರ ಭಾಗವಾಗಿ ಜಿಲ್ಲೆಯ ವಿದ್ಯಾರ್ಥಿ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ www.mydvp.org ಅಂತರ್ಜಾಲದಲ್ಲಿ ನೊಂದಣಿ ಮಾಡಿಸಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಓದುವದರ ಮೂಲಕ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ನಡೆದು ಬಂದ ದಾರಿ ಅವರ ಸಿದ್ದಾಂತ ಹಾಗೂ ವಿಚಾರಧಾರೆಗಳನ್ನ ತಾವೆಲ್ಲರೂ ಅರ್ಥೈಸಿಕೊಳ್ಳಬೇಕು.ಅದರಿಂದಾಗಿ ದೇಶಕ್ಕೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊಡುಗೆಗಳೇನು ಹಾಗೂ ಭಾರತೀಯ ಸಂವಿಧಾನ ರಚಿಸುವಲ್ಲಿ ಅವರು ಪಟ್ಟ ಶ್ರಮದ ಬಗ್ಗೆ ವಿದ್ಯಾರ್ಥಿ ಯುವ ಜನರು ತಿಳಿದುಕೊಂಡು ಸಮ ಸಮಾಜದ ಪರಿಕಲ್ಪನೆಯೊಂದಿಗೆ ಉತ್ತಮವಾದ ಸಮಾಜವನ್ನು ಕಟ್ಟಬೇಕೆಂಬ ಮಹದಾಸೆಯಿಂದ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಈ ಪರೀಕ್ಷೆಯನ್ನು ಹಮ್ಮಿಕೊಂಡಿದೆ.
ಸಾಕಷ್ಟು ವಿದ್ಯಾರ್ಥಿಗಳು ಈಗಾಗಲೇ ನನಗೆ ಕಾಲ್ ಮಾಡಿ ಪರೀಕ್ಷೆ ಆನ್ಲೈನ್ ಮೂಲಕ ವಿರುತ್ತದೆಯೇ ಎಂದು ಪ್ರಶ್ನಿಸುತ್ತಿದ್ದಾರೆ.ಪರೀಕ್ಷೆಯ ಅರ್ಜಿ ಸಲ್ಲಿಸುವ ದಿನಾಂಕ ಮುಗಿದ ನಂತರ ತಮಗೆ ಅಂತರ್ಜಾಲದಲ್ಲಿ ಪ್ರವೇಶಪತ್ರ ಪ್ರಕಟವಾಗುತ್ತದೆ.ತಮ್ಮ ಜಿಲ್ಲೆಯಲ್ಲಿಯೇ ಪರೀಕ್ಷಾ ಕೇಂದ್ರಗಳಿರುತ್ತವೆ ಕಾರಣ ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳು ಖುದ್ದಾಗಿ ಹಾಜರಾಗಿ ಪರೀಕ್ಷೆ ಬರೆಯಬೇಕು ಹಾಗೂ ಪರೀಕ್ಷೆ ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ ಪರೀಕ್ಷೆಯಲ್ಲಿ ನಾಲ್ಕು ತಪ್ಪು ಉತ್ತರಗಳಿಗೆ ಒಂದು ಅಂಕವನ್ನು ಕಡಿತಗೊಳಿಸಲಾಗುವದು ಎಂದು ಸ್ಪಷ್ಟ ಪಡಿಸಿದರು.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನ ಹಾಗೂ ಸಂವಿಧಾನವನ್ನ ಅರ್ಥೈಸಿಕೊಳ್ಳುವ ಸುವರ್ಣಾವಕಾಶ ಯುವ ಸಮುದಾಯಕ್ಕೆ ಒದಗಿ ಬಂದಿದೆ.ಈ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ 3ಲಕ್ಷ ದ್ವಿತೀಯ ಸ್ಥಾನ ಪಡೆದ ಅಭ್ಯರ್ಥಿಗಳಿಗೆ 2 ಲಕ್ಷ ಹಾಗೂ ತ್ರತೀಯ ಶ್ರೇಣಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ 1 ಲಕ್ಷ ರೂ.ನಗದು ಬಹುಮಾನ ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕ ಘೋಷಿಸಿದೆ.ಕಾರಣ ಗದಗ ಜಿಲ್ಲೆಯ ವಿದ್ಯಾವಂತ ಯುವ ಸಮುದಾಯ ಮೂರು ಬಹುಮಾನಗಳನ್ನ ನಮ್ಮ ಜಿಲ್ಲೆಯ ಮಡಿಲಿಗೇರಿಸಿಕೊಳ್ಳಬೇಕೆಂದು ಹೇಳಿದರು.
ಕಳೆದ 3 ವರ್ಷಗಳಿಂದ ಪರಿಷತ್ ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತಾ ಬಂದಿರುತ್ತದೆ.ಈ ಕಾರ್ಯಕ್ಕೆ ರಾಜ್ಯದಾದ್ಯಂತ ವ್ಯಾಪಕವಾದ ಬೆಂಬಲ.ಪ್ರಶಂಸೆ ವ್ಯಕ್ತವಾಗಿದ್ದು ಆದಕಾರಣ ಜಿಲ್ಲೆಯ ವಿದ್ಯಾರ್ಥಿ ಯುವ ಸಮುದಾಯ ತಮ್ಮ ಅತ್ಯಮೂಲ್ಯವಾದ ಸಮಯವನ್ನ ವ್ಯರ್ಥ ಮಾಡದೇ ಜ್ಞಾನದ ಸಂಕೇತವಾದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಹೆಚ್ಚು ಅಧ್ಯಯನ ಮಾಡಿ ಪರೀಕ್ಷೆಯಲ್ಲಿ ವಿಜಯಶಾಲಿಯಾಗಬೇಕೆಂದು ಹೇಳಿದರು.