MLA for Mahadevpur rain damaged area Srinivas visit verification.

ಗುಡೇಕೋಟೆ:- ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಊರಿಗೆ ಅಡ್ಡಲಾಗಿ ಕಟ್ಟಿದ್ದ ಕುಂಟೆ ಹೊಡೆದು ಏಕಾಏಕಿ ಊರಿಗೆ ನುಗ್ಗಿದ ನೀರು ಊರಿಗೆ ಊರೇ ಜಲ ದಿಗ್ಬಂಧನಗೊಂಡ ಮಹಾದೇವಪುರ ಗ್ರಾಮಕ್ಕೆ ಜಿಟಿ ಜಿಟಿ ಮಳೆಯಲ್ಲಿ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೂಡ್ಲಿಗಿ ತಾಲೂಕು ಮಹದೇವಪುರ ಗ್ರಾಮದ ಗಾಣಿಗರ ಓಣಿ,ಹರಿಜನ ಕಾಲೋನಿ,ಕುಂಬಾರ ಓಣಿಗಳ ಮನೆಗಳಿಗೆ ನೀರು ನುಗ್ಗಿ ಮನೆಗಳಲ್ಲಿ ನೀರು ತುಂಬಿ ಜಲಾವೃತಗೊಂಡಿದ್ದು ಇದರಿಂದ ಗ್ರಾಮದ ನಿವಾಸಿಗಳು ಹೊರಬರಲಾಗದೆ ಪರದಾಡುವಂತೆ ಹಾಗಿತ್ತು. ಗ್ರಾಮದ ಹೊರವಲಯದಲ್ಲಿ ಗುಡ್ಡದಿಂದ ಬರುವ ನೀರನ್ನು ಮಾರಿಗುಡಿ ಕೆರೆಗೆ ಹೋಗುಲು ಅಡ್ಡಲಾಗಿ ಕುಂಟೆಯನ್ನು ಕಟ್ಟಿ ಆ ಮೂಲಕ ಕೆರೆಗೆ ನೀರು ಹೋಗುತ್ತಿತ್ತು. ಈಗ ಕಟ್ಟಿರುವ ಕುಂಟೆಯು ಒಡೆದು ಹೋಗಿದ್ದೆ ಇಷ್ಟೆಲ್ಲಾ ಅವಾಂತರಕ್ಕೆ ಸಾಕ್ಷಿಯಾಗಿತ್ತು.ಈ ಕುಂಟೆಯನ್ನು ಕಳಪೆ ಕಾಮಗಾರಿಯಿಂದ ಕಟ್ಟಿರುವುದೇ ಇದಕ್ಕೆಲ್ಲಾ ಅತಿವೃಷ್ಟಿ ಸಂಭವಿಸಲು ಕಾರಣ ಎಂಬುದು ಸ್ಥಳೀಯರ ಆರೋಪವಾಗಿದೆ.
ಸ್ಥಳೀಯರ ಸಮಸ್ಯೆಗಳನ್ನು ಹಾಲಿಸಿದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ಸ್ಥಳೀಯ ಮುಖಂಡರೊಂದಿಗೆ ಖುದ್ದಾಗಿ ಭೇಟಿ ನೀಡಿ ಊರಿನ ಮಧ್ಯ ಹರಿಯುವ ನೀರನ್ನು ತಪ್ಪಿಸುವುದು ಹೇಗೆ ಎಂಬ ನಿಟ್ಟಿನಲ್ಲಿ ಸುಧೀರ್ಘವಾಗಿ ಅಧಿಕಾರಿಗಳ ಜೊತೆ ಚರ್ಚಿಸಿ ಗ್ರಾಮಸ್ಥರಿಗೆ ದೈರ್ಯ ತುಂಬಿದರು. ಇಂತಹ ವೈಜ್ಞಾನಿಕ ಕಾಮಗಾರಿಗಳಿಗೆ ಕಡಿವಾಣ ಹಾಕುವ ಕೆಲಸ ಮುಂದಿನ ದಿನಗಳಲ್ಲಿ ಮಾಡಲಾಗುವುದು. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಅತಿ ಶೀಘ್ರದಲ್ಲಿ ನೀರು ಊರೊಳಗೆ ಬಾರದ ಹಾಗೆ ಶಾಶ್ವತ ಪರಿಹಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ತಹಶೀಲ್ದಾರ್ ಎಂ.ರೇಣುಕಾ,ಸಣ್ಣ ನೀರಾವರಿ ಇಲಾಖೆ ಎಇಇ ಅಧಿಕಾರಿ, ಹಾಗೂ ಕಾಂಗ್ರೆಸ್ ಮುಖಂಡ ದಿನ್ನೆ ಮಲ್ಲಿಕಾರ್ಜುನ್,ಮಾಜಿ ತಾಪಂ ಸದಸ್ಯ ವೀರೇಶ್,ಹಾಲಸಾಗರ ಮಾರೇಶ್,ಕೆ.ರಾಯಪುರ ಕೃಷ್ಣಮೂರ್ತಿ, ಗಂಗಾಧರ,ಪಂಪಾನಾಯ್ಕ, ಪೇಂಟ್ ತಿಪ್ಪೇಸ್ವಾಮಿ, ಹುಲಿಕುಂಟೆ ಓಬಯ್ಯ, ಗುಡೇಕೋಟೆ ಪಿಎಸ್ಐ ಸುಬ್ರಮಣ್ಯಂ, ಹಾಗೂ ಊರಿನ ಹಿರಿಯರು, ಗ್ರಾಮಸ್ಥರು,ಉಪಸ್ಥಿತರಿದ್ದರು.