Is this a government planning program or a party program?

ಸರ್ಕಾರಿ ಕಾರ್ಯಕ್ರಮದ ವೇದಿಕೆಲ್ಲಿ ಕಾಂಗ್ರೆಸ್ ಮುಖಂಡರು,,!
ವರದಿ : ಪಂಚಯ್ಯ ಹಿರೇಮಠ,
ಕೊಪ್ಪಳ : ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ಬುಧವಾರದಂದು ನೂತನ ಆರೋಗ್ಯ ಕೇಂದ್ರ ಉಧ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾರಂಭೋತ್ಸವವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ಅವರ ನೆರವೇರಿಸಿದರು.
ಆದರೆ ಈ ಕಾರ್ಯಕ್ರಮಗಳು ಸರ್ಕಾರ ಆಯೋಜನೆ ಕಾರ್ಯಕ್ರಮಗಳೋ ಅಥವಾ ಪಕ್ಷದ ಆಯೋಜನೆ ಕಾರ್ಯಕ್ರಮವೋ,,,?
ಕಾರ್ಯಕ್ರಮದ ವೇದಿಕೆಯಲ್ಲಿ ಸರ್ಕಾರಿ ಅಧಿಕಾರಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಮುಖಂಡರೇ ಹೆಚ್ಚಾಗಿದ್ದರು.
ಇಂತಹ ಕಾರ್ಯಕ್ರಮಗಳ ವೇದಿಕೆಯಲ್ಲಿ ಕೇವಲ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಜನ ಪ್ರತಿನಿಧಿಗಳು, ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಮಾತ್ರ ಸಿಮೀತವಾಗಬೇಕಿದ್ದ ವೇದಿಕೆಯ ತುಂಬೆಲ್ಲಾ ಕಾಂಗ್ರೆಸ್ ಮುಖಂಡರೇ ತುಂಬಿದ್ದು ಇದೇನು ಸರ್ಕಾರಿ ಆಯೋಜನೆ ಕಾರ್ಯಕ್ರಮವೋ ಇಲ್ಲಾ ಕಾಂಗ್ರೆಸ್ ಪಕ್ಷದ ಆಯೋಜನೆ ಕಾರ್ಯಕ್ರಮವೋ ಎಂದು ಸಾರ್ವಜನಿಕರಿಗೆ ಗೊಂದಲ ಉಂಟಾಗಿ ಮುಜುಗರವನ್ನುಂಟು ಮಾಡಿತು ಎಂದು ಹೆಸರು ಹೇಳಲಿಚ್ಚಿಸದ ಮುಖಂಡರೊಬ್ಬರು ಪ್ರಶ್ನಿಸಿದರು.
ಕ್ಷೇತ್ರದ ಅಭಿವೃದ್ದಿಯಲ್ಲಿ ರಾಜ್ಯದ ಜನತೆಯ ಗಮನ ಸೆಳೆಯುತ್ತಿರುವ ಹಾಗೂ ಇದ್ದರೇ ಇಂತಹ ಒಬ್ಬ ಶಾಸಕರಿರಬೇಕು ಎಂದು ಸುತ್ತ ಮುತ್ತಲಿನ ನಾಗರಿಕರು ನಮ್ಮ ಗ್ರಾಮಗಳನ್ನು ನಿಮ್ಮ ಕ್ಷೇತ್ರಕ್ಕೆ ಸೆರ್ಪಡೆ ಮಾಡಿಕೊಳ್ಳಿ ಎಂದು ಶಾಸಕ ಬಸವರಾಜ ರಾಯರಡ್ಡಿಯವರಿಗೆ ಮನವಿ ಸಲ್ಲಿಸಿ ದುಂಬಾಲು ಬಿಳುತ್ತಿದ್ದಾರೆ.
ಮತ್ತು ಅವಳಿ ತಾಲೂಕಿನಲ್ಲಿ ಅಭಿವೃದ್ದಿ ಸುನಾಮಿ ಅಪ್ಪಳಿಸುತ್ತಿದೆ. ರಾಜ್ಯದ ಸಿಎಂ ಕ್ಷೇತ್ರವು ಇಷ್ಟೋಂದು ಅಭಿವೃದ್ದಿ ಇಲ್ಲಾ ಎನ್ನುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರ ಮಾತಾಗಿದೆ.
ಆದರೆ ಇವೆಲ್ಲದರ ಮಧ್ಯೆ ಪಕ್ಷದ ಮುಖಂಡರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ವೇದಿಕೆ ಮುಂಬಾಗದಲ್ಲಿ ಕುಳಿತುಕೊಳ್ಳುವುದು ಔಚಿತ್ಯವಾಗುತ್ತದೆ ಎನ್ನುವುದು ಪ್ರಜ್ಞಾವಂತರ ಮಾತಾಗಿದ್ದವು.