Breaking News

ಮಹಿಳೆಯರು ಸ್ವಾವಲಂಬಿಗಳಾಗಿ : ಫಾ.ವಿನೋದ ಪೌಲ್

Women as self-reliant: Fr.Vinoda Paul

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಾನ್ವಿ: ಪಟ್ಟಣದ ಲೊಯೋಲ ಸಮಾಜ ಸೇವಾ ಕೇಂದ್ರದಲ್ಲಿ ಲೊಯೋಲ ಸಮಾಜ ಸೇವಾ ಕೇಂದ್ರ ಹಾಗೂ ರಾಯಚೂರು ಎಸ್.ಬಿ.ಐ ಗ್ರಾಮೀಣ ತರಬೇತಿ ಕೇಂದ್ರದ ಸಹಯೋಗದಲ್ಲಿ ತಾಲೂಕಿನ ಗ್ರಾಮೀಣಾ ಭಾಗದ ಮಹಿಳೆಯರಿಗೆ ೧೦ ದಿನಗಳ ಜೂಟ್/ಸ್ಲಿಂಗ್ ಬ್ಯಾಗಗಳ ತಯಾರಿಕೆ ತರಬೇತಿ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮವನ್ನು ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಾ. ವಿನೋದ ಪೌಲ್ ಅವರು ಈ ದಿನಮಾನಗಳಲ್ಲಿ ಮಹಿಳೆ ಯಾವುದಾದರೂ ಒಂದು ಕೈ ಕೆಲಸವನ್ನು ಕಲಿತಿರಬೇಕು ಹಾಗೂ ಮಹಿಳೆಗೆ ಅಸಾಧ್ಯವಾದ ಕಲಿಕೆ ಯಾವುದು ಇಲ್ಲ. ನೀವು ಕಲಿತ ವಿದ್ಯೆ ಯಾವತ್ತು ನಿಮ್ಮಂದ ದೂರ ಹೋಗಲ್ಲ ಬದಲಾಗಿ ಸದಾ ನಿಮ್ಮ ಬಳಕೆಗೆ ಬರುತ್ತದೆ. ಸರ್ಕಾರವು ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ನಿಷೇಧಿಸಿರುವುದರಿಂದ ಜೂಟ ಬ್ಯಾಗ ಅಥವಾ ಸ್ಲಿಂಗ್ ಬ್ಯಾಗಗಳಿಗೆ ಉತ್ತಮ ಬೇಡಿಕೆ ಜೊತೆಗೆ ಮಾರುಕಟ್ಟೆ ಇರುವುದರಿಂದ ನೀವು ಒಳ್ಳೆಯ ಮತ್ತು ಕ್ವಾಲಿಟಿಯ ವಸ್ತುಗಳನ್ನು ತಯಾರಿಸುವುದರಿಂದ ನಿಮ್ಮ ವಸ್ತುಗಳಿಗೆ ಬೇಡಿಕೆ ಜಾಸ್ತಿಯಾಗುತ್ತದೆ ಎಂದು ಕಿವಿಮಾತು ಹೇಳಿದರು. ನಂತರ ಎಲ್ಲಾ ಶಿಬಿರಾರ್ಥಿಗಳಿಗೆ ಕಲಿಕಾ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಲೊಯೋಲ ಸಮಾಜ ಸೇವಾ ಕೇಂದ್ರದ ನಿರ್ದೇಶಕರಾದ ಫಾ.ಡಾನ್ ಲೋಬೋ. ರಾಯಚೂರು ಎಸ್.ಬಿ.ಐ ಗ್ರಾಮೀಣ ತರಬೇತಿ ಕೇಂದ್ರದ ಸಿಬ್ಬಂಧಿಗಳಾದ ಶ್ರೀ ನರೇಶ ಕುಮಾರ, ತಿಮ್ಮಪ್ಪ ಹಾಗೂ ಶಿಭಿರಾರ್ಥಿಗಳ ಮೌಲ್ಯಮಾಪಕರಾಗಿ ಆಗಮಿಸಿದ್ದ ಶ್ರೀ ಬಸವರಾಜ, ಶ್ರೀ ಅಬ್ದುಲ್ ಮತ್ತು ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About Mallikarjun

Check Also

ಪದವಿ ಶಿಕ್ಷಣ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ವೇದಿಕೆ ಮಾಡಿಕೊಳ್ಳಿ : ಡಾ.ಸೋಮರಾಜು

Make graduate education a platform for building a bright future: Dr. Somaraju ಗಂಗಾವತಿ: ಹೆಚ್.ಆರ್.ಶ್ರೀ ರಾಮುಲು …

Leave a Reply

Your email address will not be published. Required fields are marked *