Successfully held taluk level construction worker’s workshop.
ಹನೂರು : ಪ್ರತಿಯೊಬ್ಬರಿಗೂ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಬೆಕಾಗಿದೆ ,ಸರ್ಕಾರವು ಎಲ್ಲಾ ಕಟ್ಟಡ ಮಾಲಿಕರಿಂದ ಪರವಾನಗಿ ನೀಡುವ ರೂಪದಲ್ಲಿ ಇಂತಿಷ್ಟು ಹಣ ಕಟ್ಟಬೇಕಾಗಿದೆ ಎಂದು
ಗೌರವಾನ್ವಿತ ನ್ಯಾಯದೀಶರಾದ ಈಶ್ವರ್ ರವರು ತಿಳಿಸಿದರು .
ಹನೂರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಬ್ರಿಟಿಷರ ಆಳ್ವಿಕೆಯ ನಂತರ ನಮ್ಮ ದೇಶದಲ್ಲಿ ಆಳ್ವಿಕೆ ಮಾಡಲು ಕಾನೂನಿನ ಅಗತ್ಯವಿತ್ತು ಅದನ್ನು ರೂಪಿಸುವಲ್ಲಿ ಅಂಬೇಡ್ಕರ್ ಪಾತ್ರ ಬಹುಮುಖ್ಯ , ಸಂವಿಧಾನದ ಪ್ರಕಾರವೆ ನಿಮಗೆ ಕರ್ತವ್ಯವನ್ನು ಕೊಟ್ಟಿದೆ ನಮಗೆ ಬೇಕಾದ ರೀತಿಯಲ್ಲಿ ದುಡಿಯಬಹುದು ಎಲ್ಲಾ ಸಮುದಾಯದವರು ಕಾನೂನಿನಡಿಯಲ್ಲಿ ಬಂದು ಸಮಾನತೆಯನ್ನು ಕಾಪಾಡಬೇಕು .ಎಲ್ಲಾರು ನಮ್ಮದೇಶದ ಕಾನೂನನ್ನು ಗೌರವಿಸಿ ಪಾಲಿಸಬೇಕಾದ ಕೆಲಸ ನಮ್ಮದಾಗಿದೆ. ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳಬಾರದು ,ಅದರಿಂದ ಅವರ ಭವಿಷ್ಯ ಹಾಳಾಗುತ್ತದೆ , ವಿದ್ಯಾಬ್ಯಾಸ ನೀಡಲು ಸರ್ಕಾರದಿಂದ ಅನುಕೂಲ ಕಲ್ಪಿಸಲಾಗಿದೆ . ಎಂದು ತಿಳಿಸಿದರು.
ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಡಾ ಸವಿತ ಮಾತನಾಡಿ ನಮ್ಮ ಇಲಾಖೆಯ ವತಿಯಿಂದ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಅಯೋಜಿಸುರುವ ಕಾರ್ಯಗಾರ ಉದ್ಯೋಗದಾತರಾದ ನಿಮಗೆ ಕಾರ್ಮಿಕರ ನಿಧಿಯಿಂದ ಪರಿಹಾರ ನೀಡುವ ಮೂಲಕ ,ಕಾರ್ಮಿಕರಿಗೆ ಸಿಗುವಂತ ಎಲ್ಲಾ ಸವಲತ್ತುಗಳನ್ನು ನಿಜವಾದ ಪಲನುಭವಿಗಳಿಗೆ ತಲುಪಿಸಬೇಕು , ನಮ್ಮ ಇಲಾಖೆಯಿಂದ ಹನ್ನೂಂದು ಕಾರ್ಮಿಕ ಸಂಘಗಳಿಗೆ ಸ್ಮಾರ್ಟ್ ಕಾರ್ಡು ನೀಡಿದ್ದೆವೆ , ಎಲ್ಲಾರಿಗೆ ಅವರದೆ ಆದ ಮಂಡಳಿಯನ್ನು ರಚಿಸಲಾಗಿದೆ ,ಭದ್ರತೆಯಿಲ್ಲದೆ ಡಿಲಿವರಿ ಬಾಯ್ಸ್ ಗಳಿಗೂ ಸಹ ಸರ್ಕಾರದ ಅನುದಾನ ನಿಡಲಾಗುವುದು . ದುಡಿಯುವ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು .ಸಣ್ಣ ಮಕ್ಕಳ ದುಡಿಮೆ ಅಪರಾಧವಾಗಿದೆ , ಗರಿಷ್ಠ ಪ್ರಮಾಣದ ಕಾರ್ಮಿಕರು ನಮ್ಮ ದೇಶದ ಬೆನ್ನೆಲಬು ಇಂತಹ ಸಂದರ್ಭಗಳಲ್ಲಿ ಸಮಗ್ರವಾಗಿ ಅವರಿಗೆ ಮಾಹಿತಿ ನೀಡಬೇಕು ಎಂದರು .
ಇದೇ ಸಮಯದಲ್ಲಿ ತಹಶಿಲ್ದಾರ್ ಗುರುಪ್ರಸಾದ್ ಮಾತನಾಡಿ ಜೀತ ಪದ್ದತಿಯನ್ನು ನಿರ್ಮೂಲನೆ ಮಾಡಬೇಕು ,ಸ್ವಂತ ಉದ್ಯೋಗವಂತಾರಾಗ ಬೇಕೆಂದರು ಅಲ್ಲದೆ ಶ್ರೀ ಮತಿ ಮೊಹಿನಿ ಆದೀಲ್ ಪಾಷ ರವರಿಗೆ ಐದು ಲಕ್ಷ ಅನುದಾನವನ್ನು ಕಾರ್ಮಿಕ ಇಲಾಖೆಯಿಂದ ನೀಡಲಾಗಿದೆ .ಮತ್ತು
ಶಾಲಾ ಬಿಟ್ಟ ಮಕ್ಕಳಿಗೆ ಇಲಾಖೆಯಿಂದ ಅನುದಾನವನ್ನು ನೀಡಿ ಎಂಟು ಮಕ್ಕಳಿಗೆ ಎಪ್ ಡಿ ಮಾಡಿದ್ದಾರೆ ಎಂದರು .
ಇದೇ ಸಮಯದಲ್ಲಿ ಹನೂರು ಕಾರ್ಮಿಕ ನಿರೀಕ್ಷಕರಾದ ಪ್ರಸಾದ್ ,ಸುನಿಲ್ ,ತಾಲ್ಲೂಕು ವ್ಯಾಪ್ತಿಯ ಕಟ್ಟಡ ಕಾರ್ಮಿಕರು ಸೇರಿದಂತೆ ಮೇಸರಿಗಳು ಹಾಜರಿದ್ದರು .