Breaking News

ಅನ್ನದಾತರಿಗೆ ಕಂಟಕವಾಗಿರುವ ನಕಲಿ ಗೊಬ್ಬರ ಕ್ರಿಮಿನಾಶಕ ದಂಧೆ, ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಫಲ

Officials have failed to control fake fertilizer sterilizer business which is a thorn in the side of food producers

ಜಾಹೀರಾತು
20241023 095325 COLLAGE 769x1024





ಮಾನ್ವಿ : ತುಂಗಭದ್ರಾ ಅಚ್ಚು ಕಟ್ಟು ಪ್ರದೇಶದಲ್ಲಿ ವ್ಯಾಪಕವಾಗಿ ಭತ್ತವನ್ನು ಬೆಳೆಯಲಾಗುತ್ತದೆ. ಸತತ ಭತ್ತದ ಬೆಳೆ ಬೆಳೆಯುವುದರಿಂದ ಭೂಮಿ ಬರಡಾಗಿದೆ. ಕೃತಕ ಗೊಬ್ಬರ ಹಾಕುವ ಮೂಲಕ ರೈತರು ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಈ ಮಧ್ಯೆ ನಕಲಿ ರಸ ಗೊಬ್ಬರ ಕ್ರಿಮಿನಾಶಕ ಸೇರಿದಂತೆ ಕೃಷಿ ಆಧಾರಿತ ಪರಿಕರಗಳ ಮಾರಾಟದಿಂದ ಅನ್ನದಾತರ ಬದುಕು ಮೂರಾಬಟ್ಟೆಯಾಗಿದೆ. ಎಕರೆಗೆ 40-50 ಕ್ವಿಂಟಾಲ್ ಭತ್ತವನ್ನು ಬೆಳೆಯುವ ರೈತರು ಪ್ರತಿ ವರ್ಷ ಆದಾಯಕ್ಕಿಂತ ಸಾಲಗಾರರಾಗುತ್ತಿದ್ದಾರೆ.

IMG 20241023 WA0155

ಕಳೆದ 20 ವರ್ಷಗಳಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರಾಯಚೂರು ಕೊಪ್ಪಳ ಬಳ್ಳಾರಿ ಜಿಲ್ಲೆಗಳಲ್ಲಿ ವ್ಯಾಪಕವಾದಂತಹ ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟವಾಗುತ್ತಿದ್ದು, ಹಣದ ಆಸೆಗೆ ಕೆಲ ವ್ಯಾಪಾರಿಗಳು ನಕಲಿ ಗೊಬ್ಬರ ಕ್ರಿಮಿನಾಶಕ ಮಾರಾಟ ಮಾಡುವ ಮೂಲಕ ಹಣ ವಂಚಿತರಾಗುತ್ತಿದ್ದು, ಇದರಿಂದ ಅನ್ನದಾತನಿಗೆ ಸಾಲದ ಹೊರೆ ಹೆಚ್ಚಾಗುತ್ತಿದೆ.

ಇತ್ತೀಚೆಗೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಾಲಪುರ್ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಮಲ್ಲದಗುಡ್ಡ ಕ್ಯಾಂಪ್, ಡೊಣ್ಮರಡಿ, ಡೊಣ್ಮರಡಿ ಕ್ಯಾಂಪ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಮೋಘಸಿದ್ದೇಶ್ವರ ಕುರಿ ಸಂಗೋಪನ ಉಣ್ಣೆ ಉತ್ಪಾದಕರ ಸಹಕಾರ ಸಂಘ ಹಾಗೂ ಶ್ರೀನಿವಾಸ್ ಆಗ್ರೋ ಟ್ರೇಡರ್ಸ್ ಮಾಲೀಕರಾದ ಬಿ, ವಾಸು ಎನ್ನುವರು ಕಳಪೆ ಗೊಬ್ಬರ ಕ್ರಿಮಿನಾಶಕ ಮಾರಾಟ ಮಾಡಿ ರೈತರಿಗೆ ಅನ್ಯಾಯ ಮಾಡಿದ್ದಾರೆ ಹೀಗಾಗಿ ಬಿ, ವಾಸು ಮಾರಾಟ ಮಾಡಿದ ರಸಗೊಬ್ಬರ ಮತ್ತು ಕ್ರಿಮಿನಾಶಕದಿಂದ ರೈತರ ಬೆಳೆಗಳು ಸಂಪೂರ್ಣನಷ್ಟ ಆಗಿರುತ್ತದೆ. ಸರಿಯಾಗಿ ಬೆಳೆ ಬಂದಿರುವುದಿಲ್ಲ ಹಾಗೆಯೇ ಕ್ರಿಮಿನಾಶಕ ಸಿಂಪಡಿಸಿದರು ಕೂಡ ಕೀಟಗಳು ಹತೋಟಿಗೆ ಬಂದಿರುವುದಿಲ್ಲ ಹೀಗಾಗಿ ಕಳಪೆ ಕ್ರಿಮಿನಾಶಕ ರಸ ಗೊಬ್ಬರ ಕೊಟ್ಟಂತ ಅಂಗಡಿ ಮಾಲೀಕರ ವಿರುದ್ಧ ರೈತರು ಕೃಷಿ ಅಧಿಕಾರಿಗಳಿಗೆ ಮನವಿ ಮಾಡಿದರು ಕೂಡ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರದಲ್ಲಿ ಕರ್ನಾಟಕ ರಾಜ್ಯ ಬೇಡರ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರಾದ ಜೆಲ್ಲಿ ಆಂಜನೇಯ್ಯ ನೀರಮಾನ್ವಿ ಮಾತನಾಡಿ ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರು ಸಂದರ್ಭದಲ್ಲಿ ರೈತರಿಗೆ ರಾಸಾಯನಿಕ ಗೊಬ್ಬರ ಕ್ರಿಮಿನಾಶಕ ಅವಶ್ಯಕವಾಗಿದ್ದು, ಇದನ್ನು ಸಾಲ ಸೋಲ ಮಾಡಿ ರೈತರು ಖರೀದಿ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ನಕಲಿ ಗೊಬ್ಬರ ಮತ್ತು ಕ್ರಿಮಿನಾಶಕಗಳ ಅಧಿಕ ಮಾರಾಟವಾಗುತ್ತವೆ. ಕೃಷಿ ಇಲಾಖೆ ಕೃಷಿ ಜಾಗೃತ ದಳದವರು ದಾಳಿ ಮಾಡಿ ಪ್ರಕರಣವನ್ನು ದಾಖಲು ಮಾಡಿದರಾದರೂ ತಾರ್ಕಿಕ ಹಂತ ತಲುಪಿಸುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ಅಕ್ರಮ ದಂಧೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಮುಂದೆ ಅಕ್ರಮ ದಂಧೆ ಮಾಡದಂತೆ ಕಡಿವಾಣ ಹಾಕುವಲ್ಲಿ ಜಿಲ್ಲಾಡಳಿತ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡುಬರುತ್ತಿದೆ ಎಂದರು.
ರೈತರ ಸಂಘಟನೆ ಕರ್ನಾಟಕ ರಾಜ್ಯ ಬೇಡರ ಸಮಿತಿ (ರಿ)ಬೆಂಗಳೂರು ರಾಜ್ಯಾಧ್ಯಕ್ಷರಾದ ಅಂಬಣ್ಣ ನಾಯಕ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ರೈತರ ಜೊತೆಗೂಡಿ ತಹಸೀಲ್ದಾರ್ ರಾಜು ಪಿರಂಗಿ ಅವರಿಗೆ ಹಾಗೂ ಕೃಷಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿವ ಮೂಲಕ ಅಧಿಕಾರಿಗಳಿಗೆ ನಕಲಿ ರಸಗೊಬ್ಬರ ಮಾರಾಟ ಮಾಡಿದ ಅಮೋಘಸಿದ್ದೇಶ್ವರ ಕುರಿ ಸಂಗೋಪನ ಉಣ್ಣೆ ಉತ್ಪಾದಕರ ಸಹಕಾರ ಸಂಘ ಹಾಗೂ ಶ್ರೀನಿವಾಸ್ ಆಗ್ರೋ ಟ್ರೇಡರ್ಸ್ ಅಂಗಡಿ ಸೀಜ್ ಮಾಡಬೇಕೆಂದು ಖಡಕ್ ಎಚ್ಚರಿಕೆ ನೀಡಿದರು ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಾರೆ ನಿಮ್ಮ ಇಲಾಖೆಯ ವಿರುದ್ಧ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಬಸವರಾಜ ನಾಯಕ ಕೊಟ್ನೇಕಲ್, ತಾಲೂಕು ಅಧ್ಯಕ್ಷರಾದ ಹೊಳೆಯಪ್ಪ ಉಟಕನೂರು, ಆಂಜನೇಯ ನಸಲಾಪುರ, ಮತ್ತು ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಹಾಲಪೂರ ಹೋಬಳಿ ವ್ಯಾಪ್ತಿಯ ಆನೇಕ ರೈತರು ಹಾಜರಿದ್ದರು.

About Mallikarjun

Check Also

whatsapp image 2025 11 14 at 5.38.16 pm

ಬಲ್ಡೋಟ ಸ್ಥಾಪನೆ ನಿಲ್ಲಿಸಿ, ರೈತರ ಭೂಮಿ ಮರಳಿಸಲಿ: ಕೆ.ಬಿ. ಗೋನಾಳ

ಬಲ್ಡೋಟ ಸ್ಥಾಪನೆ ನಿಲ್ಲಿಸಿ, ರೈತರ ಭೂಮಿ ಮರಳಿಸಲಿ: ಕೆ.ಬಿ. ಗೋನಾಳ Stop the establishment of Baldota and return …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.