Breaking News

ಸಾರ್ವಜನಿಕರನ್ನ ದಿನನಿತ್ಯಪರದಾಡಿಸಿದರೆ ನಾನು ಸಹಿಸುವುದಿಲ್ಲ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಎನ್ ಟಿ ಶ್ರೀನಿವಾಸ್ ಶಾಸಕರು

MLA NT Srinivas has given a stern warning to the officials that I will not tolerate if the public is harassed on a daily basis.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೂಡ್ಲಿಗಿ.. ಪಟ್ಟಣದ ಆಡಳಿತ ಕಚೇರಿ ವಿಕಾಸಸೌಧದಲ್ಲಿ ಶಾಸಕರಾದ ಎನ್ ಟಿ ಶ್ರೀನಿವಾಸ್ ರವರ ಅಧ್ಯಕ್ಷತೆಯಲ್ಲಿ ಹೊಸಪೇಟೆ ಸಹಾಯಕ ಆಯುಕ್ತರಾದ ವಿವೇಕಾನಂದ ರವರ ಉಪಸ್ಥಿತಿಯಲ್ಲಿ ಅಧಿಕಾರಿಗಳ ಸಭೆ ನಡೆದಿದ್ದು ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕರು ಗ್ರಾಮೀಣ ಪ್ರದೇಶದಿಂದ ರೈತರು ಬಡವರು ಕೂಲಿಕಾರರು ತಮ್ಮ ಕೆಲಸಗಳಿಗಾಗಿ ಕಚೇರಿಗೆ ಬಂದು ತಿಂಗಳಗಟ್ಟಲೆ ಅಲೆದಾಡುತ್ತಿದ್ದು ಯಾವುದೇ ಕೆಲಸಗಳಾಗದೆ ಒಂದು ಕಡೆ ಮಧ್ಯವರ್ತಿಗಳ ಹಾವಳಿ ಇನ್ನೊಂದು ಕಡೆ ಅಧಿಕಾರಿಗಳಿಂದ ಸಾರ್ವಜನಿಕರ ಕೆಲಸ ಮಾಡಲು ಲಂಚದ ಹಾವಳಿ ನಡೆಯುತ್ತಿದ್ದು ಈಗಾಗಲೇ ಸಾರ್ವಜನಿಕರಿಂದ ಅನೇಕ ಅವಾಲುಗಳು ದೂರುಗಳು ನನ್ನ ಗಮನಕ್ಕೆ ಬಂದಿದ್ದು ಪ್ರತಿ ಇಲಾಖೆಯ ಅಧಿಕಾರಿಗಳು ಕೆಲಸ ನಿರ್ವಹಿಸದೆ ಬೇಜವಾಬ್ದಾರಿತನದಿಂದ ಸಾರ್ವಜನಿಕರನ್ನು ಪರದಾಡಿಸುತ್ತಿರುವುದು ಹೆಚ್ಚಾಗಿರುವುದು ಪ್ರತೀ ಇಲಾಖೆಯಲ್ಲಿ ಕಂಡುಬರುತ್ತಿದ್ದು ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು ಉಪ ನೊಂದಾಣೆ ಇಲಾಖೆಯಲ್ಲಿ ಫ್ಯಾನುಗಳಗಾಗಿ ಜಮೀನುಗಳ ನೋಂದಾಣಿ ಸಂದರ್ಭದಲ್ಲಿ ಮಧ್ಯವರ್ತಿಗಳ ದಲ್ಲಾಳಿತನದಿಂದ ಭೂಮಿಕ ಬಳಕೆಯಿಂದ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದ್ದು ಇನ್ನೂ ಭೂಮಾಪನ ಇಲಾಖೆಯಲ್ಲಿ ರೈತರ ಜಮೀನಿನ ಅಳತೆ ಮಾಡುವ ನೆಪದಲ್ಲಿ ಅಧಿಕಾರಿಗಳಿಂದ ಸಾಕಷ್ಟು ಹಣ ವಸೂಲಿ ಆಗುತ್ತಿದ್ದು ರೈತರು ಅನ್ಯಾಯಕ್ಕೆ ಒಳಗಾಗುತ್ತಿದ್ದು ವೃದ್ಧರು ವಿಕಲಚೇತನರು ಗೃಹಲಕ್ಷ್ಮಿ ಫಲಾನುಭಾವಿಗಳು ಮಾಸ್ಯಾಸನಕ್ಕಾಗಿ ಅಲೆದಾಟ ನಡೆಯುತ್ತಿದ್ದು ತಾಲೂಕು ಕಚೇರಿಯ ಕೆಲವು ಅಧಿಕಾರಿಗಳಿಂದ ರೈತರ ಬಡವರ ಕೆಲಸಕ್ಕಾಗಿ ಹಣ. ವಸೂಲಿ ಹೆಚ್ಚು ನಡೆಯುತ್ತಿದ್ದು ಗ್ರಾಮ ಲೆಕ್ಕಾಧಿಕಾರಿಗಳಿಂದ ಪಾಣಿ ಖಾತೆ ಬದಲಾವಣೆ ವಂಶವೃಕ್ಷ ಇನ್ನಿತರ ಕೆಲಸಕ್ಕಾಗಿ ಹಣ ಪಡೆದು ಕೆಲಸ ಮಾಡುತ್ತಿದ್ದು ಪ್ರತಿಯೊಬ್ಬ ಅಧಿಕಾರಿಗಳು ಇಂಥ ವ್ಯವಸ್ಥೆಯನ್ನು ಬದಲಿಸಿಕೊಳ್ಳದಿದ್ದರೆ ಅಂತ ಅಧಿಕಾರಿಗಳು ಶಿಕ್ಷ ಅನುಭವಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಶಾಸಕರು ಖಡಕ್ಕಾಗಿ ಎಚ್ಚರಿಸಿದರು

ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಮಾನ್ಯ ಸಹಾಯಕ ಆಯುಕ್ತರಾದ ವಿವೇಕಾನಂದ ತಹಶೀಲ್ದಾರರಾದ ಎಂ ರೇಣುಕಾ, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಕಾವಲಿ ಶಿವಪ್ಪ ನಾಯಕ ಉಪತಶೀಲ್ದಾರರಾದ ನೇತ್ರಾವತಿ, ಕಂದಾಯ ನಿರೀಕ್ಷಕರಾದ ಕುಮಾರಸ್ವಾಮಿ ಗ್ರಾಮ ಆಡಳಿತ ಅಧಿಕಾರಿಗಳು, ಪ. ಪಂ, ಅಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

About Mallikarjun

Check Also

ಪದವಿ ಶಿಕ್ಷಣ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ವೇದಿಕೆ ಮಾಡಿಕೊಳ್ಳಿ : ಡಾ.ಸೋಮರಾಜು

Make graduate education a platform for building a bright future: Dr. Somaraju ಗಂಗಾವತಿ: ಹೆಚ್.ಆರ್.ಶ್ರೀ ರಾಮುಲು …

Leave a Reply

Your email address will not be published. Required fields are marked *