Kittura Chennamma was the first brave woman who rebelled against the British: Soma Shekar Gowda.

ಕೊಪ್ಪಳ : ಭಾರತ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಮಾತನಾಡುವಾಗ ಚೆನ್ನಮ್ಮಾ ಜೀಯವರನ್ನು ಸ್ಮರಿಸುವುದು ಅತ್ಯ- ಅಗತ್ಯವಾಗಿದೆ ಎಂದು ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಹೇಳಿದರು.
ಅವರು ಯಲಬುರ್ಗಾ ಪಟ್ಟಣದಲ್ಲಿ ತಾಲೂಕು ಆಡಳಿತ ತಾಲೂಕ ಪಂಚಾಯತ ಹಾಗೂ ಪಟ್ಟಣ ಪಂಚಾಯತ ಯಲಬುರ್ಗಾ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವೀರ ರಾಣಿ ಕಿತ್ತೂರ ಚೆನ್ನಮ್ಮ ಜಯಂತೋತ್ಸವ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ದೇಶದ ಸ್ವಾತಂತ್ರ್ಯದಲ್ಲಿ ಬ್ರಿಟಿಷರ ವಿರುದ್ದ ದಂಗೆ ಎದ್ದು ಹೋರಾಟ ಮಾಡಿದ ಮೊಟ್ಟ ಮೊದಲ ಮಹಿಳೆಯಾಗಿದ್ದರು. ಅವರ ಜೊತೆಯಲ್ಲಿ ಸಂಗೋಳ್ಳಿ ರಾಯಣ್ಣನವರನ್ನು ಸ್ಮರಿಸಬೇಕಿದೆ. ಇವರ ಶೌರ್ಯ, ಸಾಹಸವನ್ನು ಹಾಗೂ ಅವರ ದೇಶ ಪ್ರೇಮ, ತತ್ವಾದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಬದುಕು ಸಾಗಿಸಬೇಕು ಎಂದು ಹೇಳಿದರು.
ನಂತರದಲ್ಲಿ ಪ್ರಾಸ್ತಾವಿಕವಾಗಿ ವೀರಣ್ಣ ಹುಬ್ಬಳ್ಳಿ ಮಾತನಾಡಿ ಎಲ್ಲಾ ಸಮಾಜಕ್ಕೂ ವೀರರಾಣಿ ಕಿತ್ತೂರು ಚೆನ್ನಮ್ಮಾ ಜೀ ಬೇಕೆ ಬೇಕು, ಅವರ ಕೇವಲ ಜಾತಿ, ಮತಗಳಿಗೆ ಸಿಮೀತರಾಗಿದ್ದವರಲ್ಲಾ, ಕನ್ನಡ ನಾಡಿನ ವೀರ ಮಹಿಳೆಯರಲ್ಲಿ ಚೆನ್ನಮ್ಮಾ ಜೀ ಅಗ್ರ ಪಂಕ್ತಿಗೆ ಸೇರಿದವರಾಗಿದ್ದರು ಎಂದರು.
ನಂತರದಲ್ಲಿ ಸಿ. ಎಚ್ ಪೋಲಿಸ್ ಪಾಟೀಲ್ ಮಾತನಾಡಿ ಚೆನ್ನಮ್ಮಾ ಜೀ, ಹಾಗೂ ಸಂಗೋಳ್ಳಿ ರಾಯಣ್ಣ ಇವರನ್ನು ನೆನೆಯಲು ಜಯಂತಿಯೇ ಬೇಕಿಲ್ಲಾ ಏಕೆಂದರೆ ಅವರು ಪ್ರಾತಃ ಸ್ಮರಣೀಯರಾಗಿದ್ದು ದೇಶದ ಸ್ವಾತಂತ್ರ್ಯ ಸಂಗ್ರಾಮ ಚಳುವಳಿಯಲ್ಲಿನ ಪ್ರತಿಯೊಬ್ಬ ಮಹನೀಯರನ್ನು ನೆನೆಯಲೆಬೇಕಾದದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಸಾಧಕ ಮಹನೀಯರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ಕುಂಭ ಹೊತ್ತ ನೂರಾರು ಮಹಿಳೆಯರ ಹಾಗೂ ವಿವಿಧ ವಾಧ್ಯ ಮೇಳಗಳೊಂದಿಗೆ ವೀರ ರಾಣಿ ಚೆನ್ನಮ್ಮನವರ ಭಾವ ಚಿತ್ರ ಮೆರವಣಿಗೆ ಜರುಗಿತು.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಉಳ್ಳಾಗಡ್ಡಿ, ಜಿಲ್ಲಾಧ್ಯಕ್ಷ ಕಳಕನಗೌಡ ಕಲ್ಲೂರ, ವೀರಪ್ಪ ಹೊರಪೇಟೆ ಗ್ರೇಡ್ 2 ತಹಶೀಲ್ದಾರ, ವೀರಣ್ಣ ಅಣ್ಣಿಗೇರಿ, ಶರಣಪ್ಪ ವೀರಾಪೂರ, ಬಸಲಿಂಗಪ್ಪ ಭೂತೆ, ಸಿ. ಎಚ್ ಪೋಲಿಸ್ ಪಾಟೀಲ್, ಬಸನಗೌಡ ತೊಂಡಿಹಾಳ, ರಾಜು ಪಲ್ಲೇದ, ಬಸವರಾಜ ಗುಳಗುಳಿ, ಸುರೇಶಗೌಡ ಶಿವನಗೌಡ್ರ, ಪ್ರಕಾಶ ಬೇಲೇರಿ, ಶ್ರೀ ಪಾದಪ್ಪ ಅಧಿಕಾರಿ, ಬಿ. ಎಮ್ ಶಿರೂರ, ವೀರನಗೌಡ್ರ ಬನ್ನಪ್ಪಗೌಡ್ರ ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತ ಅಧ್ಯಕ್ಷ ಅಂದಾನಯ್ಯ ಕಳ್ಳಿಮಠ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಬೇಲೇರಿ ಹಾಗೂ ಪಟ್ಟಣ ಪಂಚಾಯತಿ ಸದಸ್ಯರು ಸೇರಿದಂತೆ ವಿವಿಧ ಸಮಾಜದ ಮುಖಂಡರು ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು.