ನಾಮ ಕೇ ವಾಸ್ತೆ ನಮ್ಮೂರಲ್ಲೂ ವಿದ್ಯುತ್ ಕಂಬಗಳು



Kalyana Siri Phala Shruti, double sided electric lamp lit today,,


ವರದಿ : ಪಂಚಯ್ಯ ಹಿರೇಮಠ,
ಕೊಪ್ಪಳ : ಕುಕನೂರು ಪಟ್ಟಣದ ವೀರಭದ್ರಪ್ಪ ವೃತ್ತದಿಂದ ಗುದ್ನೇಪ್ಪನ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಿದ್ಯುತ್ ಕಂಬಗಳುಂಟು ಆದರೇ ದೀಪಗಳು ಉರಿಯುವದಿಲ್ಲಾ ಎಂಬ ಶಿರ್ಷಿಕೆಯಡಿ ಸೋಮವಾರ ಪ್ರಕಟವಾದ ವರದಿಯಿಂದ ಫಲಶ್ರುತಿ ಲಭಿಸಿದೆ.

ಸುಮಾರು ತಿಂಗಳುಗಳಿಂದ ಒಂದೇ ಬದಿಗೆ ಹೊತ್ತಿ ಉರಿಯುತ್ತಿದ್ದ ಕಂಬಗಳಲ್ಲಿ ಬೆಳಕು ಇಂದು ಎರಡು ಬದಿಗಳಲ್ಲಿರುವ ವಿದ್ಯುತ್ ಕಂಬಗಳಿಂದ ಬೆಳಕು ಹೊಮ್ಮುತ್ತಿದ್ದು ಸಾರ್ವಜನಿಕರು ಫುಲ್ ಖುಷ್ ಆಗಿದ್ದಾರೆ.
ಸುಮಾರು ತಿಂಗಳುಗಳಿಂದ ಅರ್ಧಂ ಬರ್ಧ ಕತ್ತಲೆಯಲ್ಲಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ಎರಡು ಕಣ್ಣು ಬಂದಷ್ಟು ಸಂತೋಷವಾಗಿದ್ದು, ಮುಂದೆ ದೀಪಾವಳಿ ಹಬ್ಬ ಇರುವದರಿಂದ ಈ ಬೆಳಕಿನ ಜೊತೆಯಲ್ಲಿ ಹಬ್ಬವನ್ನು ಸಂಭ್ರಮಿಸೋಣವೆಂದು ಮಾತನಾಡಿಕೊಳ್ಳುತ್ತಿದ್ದರು.

ನಮ್ಮ ಕಲ್ಯಾಣ ಸಿರಿಯಲ್ಲಿ ಪ್ರಕಟಿಸಿದ ಒಂದು ವಾರದೊಳಗೆ ವಿದ್ಯುತ್ ಕಂಬಗಳಲ್ಲಿ ದೀಪ ಅಳವಡಿಸಿದ್ದಕ್ಕಾಗಿ ಕುಕನೂರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಪಟ್ಟಣದ ನಾಗರಿಕರು ಈ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.