Inspection of District Assistant Commissioner’s visit to Government Public Hospital
ಮಾನ್ವಿ: ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಸಹಾಯಕ ಆಯುಕ್ತರಾದ ಗಜನಾನ ಬಾಲೆ ಭೇಟಿ ನೀಡಿ ಆಸ್ಪತ್ರೆಯಲ್ಲಿನ ವಿವಿಧ ವಾರ್ಡಗಳಿಗೆ ಹಾಗೂ ಡಯಾಲಿಸಿ ಕೇಂದ್ರ .ಆಕ್ಸಿಜನ್ ಘಟಕ ,ಶುದ್ದಕುಡಿಯುವ ನೀರಿನ ಘಟಕ, ಸೇರಿದಂತೆ ವಿವಿಧ ವಿಭಾಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಪುರಸಭೆ ಮುಖ್ಯಾಧಿಕಾರಿ ಗಂಗಾಧರ ರವರಿಗೆ ಆಸ್ಪತ್ರೆಗೆ ಪುರಸಭೆಯಿಂದ ಕುಡಿಯುವ ನೀರಿನ ಸಂಪರ್ಕ ನೀಡದೆ ಇರುವುದರಿಂದ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರ,ಶುದ್ದ ಕುಡಿಯುವ ನೀರಿನ ಕೇಂದ್ರಗಳು ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಾಗದೆ ಇರುವುದರಿಂದ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ತೊಂದರೆಯಾಗುತ್ತಿದೆ ಆರೋಗ್ಯ ಕ್ಷೇತ್ರವನ್ನು ಅದ್ಯತೆಯಾಗಿ ಪರಿಗಣಿಸಿ ಕೂಡಲೇ ಮುಖ್ಯರಸ್ತೆಯಿಂದ ಪುರಸಭೆ ಪೈಪ್ ಲೈನ್ ಮೂಲಕ ಆಸ್ಪತ್ರೆಗೆ ನೀರಿನ ಸಂಪರ್ಕ ನೀಡುವುದಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ನಂತರಸರಕಾರಿ ಸಾರ್ವಜನಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಿದರು ಆಸ್ಪತ್ರೆ ಸುತ್ತಮುತ್ತ ಇರುವ ಡಬ್ಬಿ ಅಂಗಡಿಗಳನ್ನು ನಿರುಪಯುಕ್ತವಾದ ವಸ್ತುಗಳನ್ನು ತೆರವುಗೊಳಿಸಿ ಅಂಬ್ಯಲೇನ್ಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಆಸ್ಪತ್ರೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುವಂತೆ ಸೂಚಿಸಿದರು.
ತಾ.ಆರೋಗ್ಯಧಿಕಾರಿ ಡಾ.ಶರಣಬಸವ ಪಾಟೀಲ್ ಹಾಗೂ ವೈದ್ಯಾಧಿಕಾರಿ ಡಾ.ಶರಣಪ್ಪ ಜಿಲ್ಲಾ ಸಹಾಯಕ ಆಯುಕ್ತರಿಗೆ ಅಗತ್ಯವಾದ ಮಾಹಿತಿ ನೀಡಿದರು
ತಹಸೀಲ್ದಾರ್ ರಾಜುಪಿರಂಗಿ, ಕಂದಾಯಧಿಕಾರಿ ಚರಣಸಿಂಗ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.