Farmers are protesting against the construction of quadruple road in Kapagal Circle

ಮಾನ್ವಿ: ತಾಲೂಕಿನ ಕಪಗಲ್ ವೃತ್ತದಲ್ಲಿ ಚತುಷ್ಪತ ರಸ್ತೆ ನಿರ್ಮಾಣ ಕಾಮಗಾರಿಯನ್ನು ತಡೆದು ಸೋಮವಾರ ಕಪಗಲ್ ಗ್ರಾಮದ ರೈತರು ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಸಹಾಯಕ ಆಯುಕ್ತರಾದ ಗಜನಾನ ಬಾಲೆ ಯವರಿಗೆ ರೈತ ಮುಖಂಡರಾದ ರಾಮೇಶನಾಯಕ ಮಾತನಾಡಿ ರೈತರು ಬೆಳೆ ಹಾಕಿರುವ ಜಮೀನಿನಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತಿರುವುದರಿಂದ ರೈತರು ಸಾವಿರಾರು ರೂ ಖರ್ಚು ಮಾಡಿ ಬೆಳೆದಿರುವ ಬೆಳೆ ಹಾಳಗುತ್ತಿದೆ ಹಾಗೂ ರಸ್ತೆಗೆ ಎಷ್ಟು ಭೂಮಿ ಹೋಗುತ್ತದೆ ಎನ್ನುವ ಕುರಿತು ನಿಖರವಾಗಿ ಇನ್ನೂ ಕೂಡ ಅಳತೆ ಮಾಡದೆ

ಇರುವುದರಿಂದ ರೈತರಲ್ಲಿ ಗೊಂದಾಲವಾಗುತ್ತಿರುವುದರಿಂದ ಕೂಡಲೇ ಕಲ್ಮಲದಿಂದ ಮಾನ್ವಿ ತಾಲೂಕಿನ ವರೆಗೆ ರಸ್ತೆ ಹಾದುಹೋಗುವ ರೈತರ ಭೂಮಿಯನ್ನು ಸರಕಾರದಿಂದ ಆಳತೆ ಮಾಡಿಸಿ ಗಡಿ ಗುರುತು ಮಾಡಿಕೊಡಬೇಕು, ಬೆಳೆ ನಷ್ಟವಾದ ರೈತರಿಗೆ ಬೆಳೆ ಪರಿಹಾರ ನೀಡಬೇಕು .ಭೂಮಿಯನ್ನು ಕಳೆದುಕೊಂಡ ರೈತರಿಗೆ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲದೆ ಇರುವುದರಿಂದ ರೈತರಿಗೆ ಕೂಡಲೆ ಸೂಕ್ತವಾದ ಪರಿಹಾರ ನೀಡಬೇಕು ಅಲ್ಲಿಯವರೆಗೆ ರಸ್ತೆ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಹಾಯಕ ಆಯುಕ್ತರಾದ ಗಜನಾನ ಬಾಲೆ ರಸ್ತೆ ನಿರ್ಮಾಣಕ್ಕೆ ಭೂಮಿಯನ್ನು ಕಳೆದುಕೊಂಡಿರುವ ರೈತರಿಗೆ ಸರಕಾರದಿಂದ ಅಗತ್ಯವಾಗಿ ಸೂಕ್ತ ಪರಿಹಾರ ವಿತರಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಹಾಗೂ ರಸ್ತೆ ನಿರ್ಮಾಣ ಕಾಮಗಾರಿಯಿಂದ ರೈತರ ಬೆಳೆ ನಷ್ಟವಾಗುತ್ತಿರುವುದರ ಕುರಿತು ಪರಿಶಿಲನೆ ನಡೆಸಿ ಅಗತ್ಯವಾದ ಬೆಳೆನಷ್ಟ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಅದ್ದರಿಂದ ರೈತರು ರಸ್ತೆ ನಿರ್ಮಾಣ ಕಾಮಗಾರಿಗೆ ತಡೆ ಉಂಟುಮಾಡದಂತೆ ಮನವೋಲಿಸಿ ರೈತರೊಂದಿಗೆ ಚರ್ಚೆ ನಡೆಸಿದರು.
ತಹಸೀಲ್ದಾರ್ ರಾಜು ಪಿರಂಗಿ, ಸಿಂಧನೂರು ಡಿ.ವೈ.ಎಸ್.ಪಿ. ಬಿ.ಎಸ್.ತಳವಾರ, ಪಿ.ಐ.ವೀರಭದ್ರಯ್ಯ ಹಿರೇಮಠ, ಕಂದಾಯ ನಿರೀಕ್ಷಕರಾದ ಚರಣಸಿಂಗ್, ರೈತ ಮುಖಂಡರಾದ ಮುಸ್ತಾಪಾ ಸಾಹುಕರ್, ಹನುಮಂತರಾಯ ವಕೀಲರು, ಕೃಷ್ಣನಾಯಕ, ಲಕ್ಷ್ಮೀಕಾಂತ ಬೊಮ್ಮನಾಳ್, ಸುರೇಶಗೌಡ, ಕಪಗಲ್, ಕೆ.ಯಲ್ಲಯ್ಯನಾಯಕ, ಆಂಜಿನಯ್ಯಯಾದವ್, ಚಂದಪ್ಪನಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು,ವಿವಿಧ ಗ್ರಾಮಗಳ ರೈತರು ಇದ್ದರು.