Ex-Minister B. Sreeramulu who inspected the filled pit: People’s lives are chaotic

ಗುಡೇಕೋಟೆ: ಕೂಡ್ಲಿಗಿ ತಾಲೂಕು ವ್ಯಾಪ್ತಿಯ ಅಪ್ಪಯ್ಯನಹಳ್ಳಿ ಮಳೆ ಸುರಿದ ಪರಿಣಾಮ ಕೋಟೆಗುಡ್ಡದ ಮಾರಿಕಾಂಬಾ ದೇವಿಯ ಕೆರೆಯು ಸಂಪೂರ್ಣ ಭರ್ತಿಯಾಗಿ ಮಳೆಯ ನೀರಿನ ಕೋಡಿ ಹರಿಯುತ್ತಿದೆ.ಕೆರೆ ಭರ್ತಿಯಾಗಿ ನೀರಿನ ಕೋಡಿ ಬಿದ್ದು, ಹೆಚ್ಚುವರಿ ನೀರು ಹೊರ ಹೋಗುತ್ತಿದೆ. ಇದರಿಂದಾಗಿ ರಾಜ್ಯ ಹೆದ್ದಾರಿ ಕೂಡ್ಲಿಗಿ ರಾಂಪುರ ಸಂಪರ್ಕ ರಸ್ತೆ ಸಂಪೂರ್ಣ ಬಂದ್ ಆಗಿದ್ದು ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಹೆಚ್ಚಾಗಿ ನೀರು ರಸ್ತೆಯ ಮೇಲೆಲ್ಲ ಹರಿದಿದ್ದರಿಂದ ವಾಹನ ಸಂಚಾರಕ್ಕೂ ಅಡತಡೆ ಉಂಟಾಗಿದೆ.ಸ್ಥಳಕ್ಕೆ ಭೇಟಿ ನೀಡಿ ಬಳ್ಳಾರಿ ಮಾಜಿ ಸಚಿವ ಬಿ.ಶ್ರೀರಾಮುಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತೀ ತುರ್ತಾಗಿ ಈ ಮಹಾಮಳೆಯಿಂದ ರಾಜ್ಯದಲ್ಲಿ ಹಾನಿಯಾದ ಕುಟುಂಬಗಳ ಸಮೀಕ್ಷೆ ಕಾರ್ಯ ನಡೆಸಿ ಅಗತ್ಯ ಪರಿಹಾರ ಒದಗಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
Kalyanasiri Kannada News Live 24×7 | News Karnataka
