Breaking News

ಕಳಪೆಕಾಮಗಾರಿಯಿಂದ ಮಹದೇವಪುರ ಕುಂಟೆ ಒಡೆದು ಊರಿಗೆ ನುಗ್ಗಿದ ನೀರು.

Due to poor workmanship, Mahadevpur rake broke and water entered the town.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಳಪೆಕಾಮಗಾರಿಯಿಂದ ಮಹದೇವಪುರ ಕುಂಟೆ ಒಡೆದು ಊರಿಗೆ ನುಗ್ಗಿದ ನೀರು.

ಗುಡೇಕೋಟೆ: ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಮಾರಿ ಗುಡ್ಡಕ್ಕೆ ಅಡ್ಡಲಾಗಿ ಕಟ್ಟಲಾಗಿದ್ದ ಕುಂಟೆ ಒಡೆದು ಮತ್ತೆ ಪ್ರವಾಹ ಉಂಟಾಗಿದೆ. ಕುಂಟೆ ಒಡೆದಿರುವುದರಿಂದ ಭಾರಿ ಪ್ರಮಾಣದಲ್ಲಿ ನೀರು ಊರಿನ ಒಳಗೆ ನುಗ್ಗಿದ್ದು,ತಗ್ಗು ಪ್ರದೇಶದ ನೂರಾರು ಮನೆಯೊಳಗೆ ನುಗ್ಗುತ್ತಿದೆ. ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಭಾರೀ ಮಳೆಗೆ ಕುಂಟೆ ಒಡೆದಿದ್ದರೂ,ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಕುಂಟೆ ಅಚ್ಚುಕಟ್ಟು ಭಾಗದಲ್ಲಿ ಸುಮಾರು 300 ಎಕರೆ ಪ್ರದೇಶದಲ್ಲಿ ಬೆಳೆಗಳಿದ್ದ ರಾಗಿ,ಜೋಳ, ಶೇಂಗಾ, ಮೆಕ್ಕೆಜೋಳಕ್ಕೆ, ಇತ್ಯಾದಿ ಬೆಳೆಗಳು ನೀರು ತುಂಬಿಕೊಂಡು ಅಪಾರ ಬೆಳೆ ಹಾನಿಯಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಕಳಪೆ ಕಾಮಗಾರಿ ಆರೋಪ:

ಕೆಲವು ವರ್ಷಗಳ ಹಿಂದೆಯಷ್ಟೇ ಕುಂಟೆ ಕಟ್ಟುವ ಕಾಮಗಾರಿ ನಡೆದಿತ್ತು. ಆದರೆ ಇಂದು ಸುರಿದ ಮಳೆಗೆ ಏಕಾಏಕಿ ಒಡೆದಿರುವುದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಲ್ಲದೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೆಗೆ ಹಾನಿ: ಗ್ರಾಮಕ್ಕೆ ನುಗ್ಗಿದ ನೀರು ರಭಸವಾಗಿ ಮನೆಗಳು ಸೇರಿದಂತೆ ದಲಿತ ಕಾಲೋನಿಗೆ ನುಗ್ಗಿದ ನೀರಿನಿಂದಾಗಿ ಮನೆಯಲ್ಲಿದ್ದ ದಿನಬಳಕೆ ವಸ್ತುಗಳು, ಬಟ್ಟೆ ಗಳು, ಪಾತ್ರೆ ಸೇರಿದಂತೆ ಮತ್ತಿತರ ವಸ್ತುಗಳು ಹಾಳಾಗಿವೆ ಎನ್ನ ಲಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ:-

ಕುಂಟೆ ಒಡೆದು ಅಪಾರ ಪ್ರಮಾಣದಲ್ಲಿ ನೀರು ಜಮೀನುಗಳಿಗೆ ಹಾಗೂ ಊರೊಳಗೆ ನುಗ್ಗಿದೆ. ಇಷ್ಟೇಲ್ಲಾ ಅನಾಹುತ ಸಂಭವಿಸಿದ್ದರು ಸಂಬಂಧಿಸಿದ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಬೇಟಿ ನೀಡಿಲ್ಲ. ಇನ್ನು ಮಳೆ ಬರುವ ಮುನ್ಸೂಚನೆ ಇದ್ದರೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಹ ಭೇಟಿ ನೀಡದೆ ಉದಾಸಿನ ಮನೋಭಾವ ತಾಳೆದಿದ್ದಾರೆ. ಎಂದು ಅಧಿಕಾರಿಗಳ ನಿರ್ಲಕ್ಷಿತನ ಹಾಗೂ ಬೇಜಾಬ್ದಾರಿ ವರ್ತನೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು.

About Mallikarjun

Check Also

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಜಿಲ್ಲಾಡಳಿತದಿಂದ ಹೆಲ್ಪ್ಲೈನ್ ಆರಂಭ

Social, educational survey: District administration launches helpline ಕೊಪ್ಪಳ ಸೆಪ್ಟೆಂಬರ್ 23 (ಕರ್ನಾಟಕ ವಾರ್ತೆ): ಸೆಪ್ಟೆಂಬರ್ 22 ರಿಂದ …

Leave a Reply

Your email address will not be published. Required fields are marked *