Ambedkar’s contribution to social development is immense: Yallappa Hirebadaradinni.




ಮಾನ್ವಿ : ಸಮಾನತೆಯ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪಣತೊಡಬೇಕು ಎಂದು ಹಿರಿಯ ವಕೀಲರಾದ ಯಲ್ಲಪ್ಪ ಹಿರೇಬಾದರದಿನ್ನಿ ಹೇಳಿದರು.
ತಾಲೂಕಿನ ಜಾಗೀರ್ಪನ್ನೂರ್ ಗ್ರಾಮದ ಸಂತ ರಾಯಪ್ಪ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಮಹಿಳೆಯರಿಗೆ ಮತ್ತು ಕಾರ್ಮಿಕರಿಗೆ ಡಾ, ಬಿ.ಆರ್ ಅಂಬೇಡ್ಕರ್ ಅವರ ಕೊಡುಗೆಗಳ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ಸಂವಿಧಾನ ಪೀಠಿಕೆಯನ್ನು ಭೋದಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಅಂಬೇಡ್ಕರ್ ಅವರು ನವ ಭಾರತ ನಿರ್ಮಾಣಕ್ಕೆ ಬೆಳಕು ಚೆಲ್ಲಿದ ಸೂರ್ಯ. ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ನೀಡಿದ್ದಲ್ಲದೆ ಒಬ್ಬ ನ್ಯಾಯವಾದಿ, ಆರ್ಥಿಕ ತಜ್ಞ, ರಾಜಕೀಯ ಹಾಗೂ ಸಾಮಾಜಿಕ ಸುಧಾರಕರಾಗಿ ಗುರುತಿಸಿಕೊಂಡಿದ್ದರು. ದೇಶದಲ್ಲಿ ದಲಿತ, ಬೌದ್ಧ ಚಳವಳಿ ಮತ್ತು ಮಹಿಳೆಯರ, ಕಾರ್ಮಿಕರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿ, ಹೋರಾಟಗಾರರಿಗೆ ಸ್ಫೂರ್ತಿಯ ಚಿಲುಮೆಯಾಗಿ ಉಳಿದಿದ್ದಾರೆ. ಸಂವಿಧಾನ ಪೂರ್ವದಲ್ಲಿ ಮಹಿಳೆಯರಿಗೆ ಮನೆಯಿಂದ , ವಿದ್ಯೆ ಕಲಿಯುವ ಮತ್ತು ದೇವರನ್ನು ಆರಾಧಿಸುವ ಸ್ವತಂತ್ರ ಇರಲಿಲ್ಲ ವಿದ್ಯಾ ಕಲಿಯುವ ಹಕ್ಕನ್ನು ಒದಗಿಸಿದ್ದು ಶ್ರೀಮತ್ರಿ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾಪುಲೆಯವರು ಅವರು ತಮ್ಮ ಕಷ್ಟದ ಜೀವನದ ನಡುವೆ ಹಿರಿಯ ವರ್ಗದವರಿಂದ ಅವಮಾನಗಳನ್ನು ಅನುಭವಿಸಿದರು ಕೂಡ ತಮ್ಮ ಹಠವನ್ನು ಬಿಡದೆ ಮಹಿಳೆಯರಿಗೆ ಶಿಕ್ಷಣದ ಅಭಿರುಚಿಯನ್ನು . ನಂತರ ಅಂಬೇಡ್ಕರ್ ಅವರು ಮಹಿಳೆಯರಿಗೆ ವೋಟ್ ಹಕ್ಕನ್ನು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದರು ಎಂದರು. ಕಾರ್ಮಿಕ ವರ್ಗದವರಿಗಾಗಿ ಅವರ ಕೆಲಸದ ಸಮಯವನ್ನು ನಿಗದಿಗೊಳಿಸಿ ಕೆಲಸಕ್ಕೆ ತಕ್ಕಂತೆ ವೇತನವನ್ನು ಕೂಡ ನೀಡುವಂತೆ ಹಾಗೂ ಅವರಿಗೆ ಅವರ ಸ್ವತಂತ್ರತೆಯನ್ನು ನೀಡುವುದರ ಕುರಿತಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಲೊಯೋಲ ಸಮಾಜ ಸೇವಾ ಕೇಂದ್ರದ ನಿರ್ದೇಶಕರಾದ ಪಾ.ಡಾನ್ ಲೋಬೋ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಲೊಯೋಲ ಸಂಸ್ಥೆಗಳು , ಆರೋಗ್ಯ ಮತ್ತು ಸಮಾಜ ಸೇವಾ ಕಾರ್ಯಗಳಲ್ಲಿಯೂ ಕೂಡ ಕಾರ್ಯನಿರ್ವಹಿಸುತ್ತಿದೆ ಇದರ ಅಡಿಯಲ್ಲಿ ಮಹಿಳೆಯರಿಗೆ ಜಾಗೃತಿ , ಅರಿವು , ಹಾಗೂ ಜೀವನೋಪಾಯ ಕಾರ್ಯಕ್ರಮಗಳನ್ನು ಕೂಡ ನಡೆಸುತ್ತಿರುವ ಬಗ್ಗೆ ತಮ್ಮ ಪ್ರ ಸ್ತಾವಿಕ ನುಡಿಗಳಲ್ಲಿ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಜಾಗೀರ್ದಾರ್ ಧಣಿ, ಲೊಯೋಲ ಆರೋಗ್ಯ ಕೇಂದ್ರದ ಮುಖ್ಯಸ್ಥರಾದ ಸಿಸ್ಟರ್ ಲೀನಾ ಪಾಯಸ್, ಪಾದರ್ ರಾಯಪ್ಪ ಹಾಗೂ ಸ್ವ-ಸಹಾಯ ಸಂಘದ ಮಹಿಳೆಯರು ಹಿರಿಯರು ಮತ್ತು ಯುವಕ ಯುವತಿಯರು ಈ ಮಾಹಿತಿ ಶಿಬಿರದಲ್ಲಿ ಭಾಗವಹಿಸಿದ್ದರು.