Registration stalled in Kudligi: Public panic
ಕೊಟ್ಟೂರು : ಏಕಾಏಕಿ ನೋಂದಣಿ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೂಡ್ಲಿಗಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಜರುಗಿದೆ. ಇಲ್ಲಿನ ನೋಂದಣಿ ಮತ್ತು ಮುದ್ರಾಂಕ ಕಚೇರಿಗೆ ಎಂದಿನಂತೆ ಸೋಮವಾರದಂದು ನಾಗರೀಕರು ತಮ್ಮ ಕೆಲಸಗಳಿಗಾಗಿ ಆಗಮಿಸಿದ್ದರು. ಆದರೆ 12 ಗಂಟೆಯ ನಂತರ ಏಕಾಏಕಿ ಮೂರು ದಿವಸ ಯಾವುದೇ ನೋಂದಣಿ ಕಾರ್ಯಗಳು ಮುಷ್ಕರದ ಹಿನ್ನೆಲೆ ಇರುವುದಿಲ್ಲ ಎಂದು ತಿಳಿಸಿದ ಕೂಡಲೇ ಸಾರ್ವಜನಿಕರು ಕಂಗಾಲಾಗಿ ಯಾವುದೇ ಸರ್ಕಾರಿ ಆದೇಶವಿಲ್ಲದೆ ನೀವು ಮುಷ್ಕರ ನಡೆಸಿದರೆ ನಮ್ಮ ಪಾಡೇನು ಎಂದು ಪ್ರಶ್ನಿಸಿದಾಗ ಯಾವುದೇ ಲಿಖಿತ ಉತ್ತರ ನೀಡದೇ ಇರುವುದು ಕಂಡುಬಂದಿತು.
ಸಾರ್ವಜನಿಕರು ಜನರ ಸಮಸ್ಯೆಗಳಿಗೆ ಪಟ್ಟು ಹಿಡಿದು ನಿಂತಾಗ ಉಪನೋ oದನಾಧಿಕಾರಿ ವೈಶಾಲಿ ಯವರು ಪತ್ರಿಕೆಗೆ ಮಾಹಿತಿ ನೀಡಿ ಇತ್ತೀಚೆಗೆ ದಾಖಲಾತಿಗಳು ಫೋರ್ಜರಿ ಆಗುತ್ತಿರುವ ಹಿನ್ನೆಲೆ, ಹಾಗೂ ಇ. ಖಾತ ತಂತ್ರಾಂಶದಲ್ಲಿ ಬದಲಾವಣೆ ಮಾಡಬೇಕಾಗಿರುವುದರಿಂದ ಮತ್ತು ರಾಜ್ಯದ ಎಲ್ಲಾ ಉಪನೋ oದನಾಧಿಕಾರಿ ಕಚೇರಿ ಅಧಿಕಾರಿಗಳಿಗೆ ಯಾವುದೇ ಆಸ್ತಿಗಳು ನೋಂದಣಿಯಾದರು ಅಧಿಕಾರಿಗಳು ನೇರ ಹೊಣೆ ಎಂಬ ಆದೇಶದ ಹಿನ್ನೆಲೆಯಲ್ಲಿ ಎಲ್ಲಾ ಕಚೇರಿಗಳಲ್ಲಿ ಮುಷ್ಕರ ದ ನೋಟಿಸ್ ನೀಡಿದ್ದಾರೆ. ಎಂಬ ಉತ್ತರ ಸಿಕ್ಕಿತು. ಆದರೆ ಏಕಾಏಕಿ ಕಾರ್ಯ ಸ್ಥಗಿತಕ್ಕೆ ಜನರು ಪರದಾಡಬೇಕಾಯಿತು. ಬಂದ ಜನರು ಬಂದ ದಾರಿಗೆ ಸುಂಕವಿಲ್ಲ ಎಂದು ಹೊರಟರು ಸಾರ್ವಜನಿಕರಾದ ಆನಂದ,ಟಿ ಕೊಟ್ರೇಶ್,ಶ್ರೀನಿವಾಸ್, ಪತ್ರಿಕೆಗೆ ತಿಳಿಸಿದರು
ಬಾಕ್ಸ್ ಸುದ್ದಿ :
ಕೂಡ್ಲಿಗಿ ಉಪನೊಂದಣಾದಿಕಾರಿ ಕಾರ್ಯಾಲಯದಲ್ಲಿ ನೋಂದಣಿ ಕಾರ್ಯ ಸ್ಥಗಿತ ಗೊಂಡಿರುವುದು ಸಂಬಂದ ಪಟ್ಟ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರೆ ಕ್ಯಾರೇ ಅನ್ನದೆ ಬೆಳಗಿನಿಂದಲೇ ರಿಜಿಸ್ಟ್ರೇಷನ್ ಗೆ ಬಂದು ಜನ ಕಾಯುತ್ತಿದ್ದಾರೆ ಸರಿಯಾದ ಮಾಹಿತಿ ಕೊಡದೆ ಜನಗಳು ಅಲೆದಾಡುವ ಸ್ಥಿತಿ ಕಂಡು ಬಂದಿತು ಎಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಕೊಟ್ಟೂರು ತಾಲೂಕು ಸಮಿತಿ ಕಾರ್ಯದರ್ಶಿ ಅಂಜಿನಿ ಹೇಳುತ್ತಿದ್ದಾರೆ.