Breaking News

ಸಿಡಿಲು ಬಡಿತ 20 ಕುರಿಗಳು ಸಾವು

Lightning strike kills 20 sheep

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾನ ಹೊಸಹಳ್ಳಿ :- ಸಮೀಪದ ಜುಮ್ಮೋಬನಹಳ್ಳಿ ಗ್ರಾಮದಲ್ಲಿ ಸೋಮವಾರ ಮಧ್ಯಾನ 3:30ಕ್ಕೆ ಗುಡುಗು ಮಿಂಚು ಮಿಶ್ರಿತ ಮಳೆಯಾಗಿದ್ದು, ಅಲ್ಲದೆ ಭಾರಿ ಪ್ರಮಾಣದ ಸಿಡಿಲು ಬಡಿದ ಪರಿಣಾಮ 20 ಕುರಿಗಳು ಬಲಿಯಾದ ಘಟನೆ ಜರುಗಿದೆ. ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಮೇಲು ಹೋಗಿದ್ದಾಗ ಗುಡುಗು, ಮಿಂಚು, ಮಿಶ್ರಿತ ಮಳೆಯಾಗಿದ್ದು, ಕುರಿಗಳು ಗಿಡಗಳ ಕೆಳಗಡೆ ನಿಂತಿದರಿಂದ ಭಾರಿ ಪ್ರಮಾಣದ ಸಿಡಿಲು ಬಡಿದ ಪರಿಣಾಮ ಸಣ್ಣ ಓಬಯ್ಯರ ಬಡಕಯ್ಯ, ಜಿ ಬಡಕಯ್ಯ, ಬಿ ಬೋರಯ್ಯ ಇವರ ಮೂವರಿಗೆ ಸೇರಿದ 20 ಕುರಿಗಳಿಗೆ ಸಿಡಿಲಿನ ಹೊಡೆತಕ್ಕೆ ಮೃತ ಪಟ್ಟಿದ್ದಾವೆ, ಅಂದಾಜು 1 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಕುರಿಗಾಯಿಗರಿಗೆ ಸೂಕ್ತ ಪರಿಹಾರವನ್ನು ತಾಲೂಕು ಆಡಳಿತ ಕಲ್ಪಿಸಬೇಕೆಂದು ಇಲ್ಲಿನ ಮುಖಂಡರು ರೈತರು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಪಶು ವೈದಧಿಕಾರಿಗಳು, ಹೊಸಹಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

About Mallikarjun

Check Also

ವಾಲ್ಮೀಕಿ ಸಮಾಜದ ಪೂರ್ವಭಾವಿ ಸಭೆ, ದಿ, 25.09.25 ರಂದು  ಬೃಹತ್ ಪ್ರತಿಭಟನೆ ನೆಡೆಸಲು ತೀರ್ಮಾನ.

Valmiki Samaj's preliminary meeting, The, decided to hold a massive protest on 25.09.25. ಗಂಗಾವತಿ. ನಗರಸಭೆ …

Leave a Reply

Your email address will not be published. Required fields are marked *