Breaking News

ಪರಿಶಿಷ್ಟ ಜಾತಿಗಳ ವಳಮೀಸಲಾತಿ ಜಾರಿ ಮಾಡಬೇಕೆಂದು ಒಳಮೀಸಲಾತಿ ಹೋರಾಟ ಸಮಿತಿ. ಒತ್ತಾಯ

Internal Reservation Struggle Committee to enforce reservation for Scheduled Castes. compulsion

ಜಾಹೀರಾತು


ವರದಿ – ಮಂಜುನಾಥ ಕೋಳೂರು

ಕೊಪ್ಪಳ. ಅ. 21: – ಕರ್ನಾಟಕ ರಾಜ್ಯದಲ್ಲಿ ತಕ್ಷಣವೇ ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಯನ್ನು ಅಕ್ಟೋಬರ 24ನೇ ತಾರಿಖೀನ ಅಧಿವೇಶನದಲ್ಲಿ ಜಾರಿ ಮಾಡಬೇಕೆಂದು ಘನ ಸರಕಾರಕ್ಕೆ ವೈ ಜಯರಾಜ್ ವಕೀಲರು ನಗರದಲ್ಲಿ ಸೋಮುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
“ಮಾನ್ಯ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಆಗಸ್ಟ್-1, 2024 ರ ಪ್ರಕಾರ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳು ಒಳಗೊಂಡಿದ್ದು ಇರುತ್ತದೆ, ಅತ್ಯಂತ ಹಿಂದುಳಿದ ಜಾತಿಯಾದ ಮಾದಿಗ, ಮತ್ತು ಛಲುವಾದಿ ಮತ್ತು ಇವುಗಳ ಉಪಜಾತಿಗಳು ಅಸ್ಪೃಶ್ಯ ಸಮುದಾಯ ವಾಗಿರುತ್ತವೆ . ಈಗಿರುವ ಮೀಸಲಾತಿಯಲ್ಲಿ ಸದರಿ ನಮ್ಮ ಜನಾಂಗಕ್ಕೆ ಸರಿಯಾದ ರೀತಿಯ ಸೌಲಭ್ಯಗಳು ದೊರಕದೇ ಇರುವುದರಿಂದ 30 ವರ್ಷಗಳಿಂದ ನಿರಂತರವಾಗಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದು ಇರುತ್ತದೆ, ಹಲವಾರು ಜನ ಪ್ರಾಣ ತೆತ್ತಿದ್ದಾರೆ, ಎಷ್ಟೋ ಕುಟುಂಬಗಳು ತಮ್ಮ ಮಕ್ಕಳನ್ನು ಕಳೆದುಕೊಂಡಿವೆ..ಆಯಾ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ವರ್ಗೀಕರಣ ಮಾಡುವುದಾಗಿ ಮಾನ್ಯ ಎಸ್.ಎಂ.ಕೃಷ್ಣ ಮಾಜಿ ಮುಖ್ಯಮಂತ್ರಿಯವರು ಕಾಂಗ್ರೆಸ್ ಸರಕಾರದಲ್ಲಿ ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗ ರಚಿಸಿ ಸದರಿ ಆಯೋಗವು ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ರಾಜ್ಯ ಸರಕಾರಕ್ಕೆ ಸದಾಶಿವ ಆಯೋಗದ ವರದಿ ಸಲ್ಲಿಸಿ ಅವರಲ್ಲಿ ಅತ್ಯಂತ ಸರಕಾರಿ ಸೌಲಭ್ಯ ವಂಚಿತ ಸಮುದಾಯವಾದ ಮಾದಿಗರಿಗೆ /ಮಾದರ(ಅಸ್ಪೃಶ್ಯ) ಅದರ ಉಪ ಸಮುದಾಯಕ್ಕೆ ಶೇ.6 ಮತ್ತು ಚಲುವಾದಿ ಸಮುದಾಯಕ್ಕೆ ಶೇ.5 ಹಾಗೂ ಸ್ಪರ್ಶ ಸಮುದಾಯಗಳಾದ ಭೋವಿ, ಲಂಬಾಣಿ ಮುಂತಾದ ಸಮುದಾಯಗಳಿಗೆ ಶೇ.3 ಹಾಗೂ ಇನ್ನಿತರ ಅಲೆಮಾರಿ ಸಮುದಾಯಗಳಿಗೆ ಶೇ.1ನ್ನು ನಿಗದಿ ಮಾಡಿ ರಾಜ್ಯ ಸರಕಾರಕ್ಕೆ ಸದಾಶಿವ ಆಯೋಗದ ಸಮಿತಿ ವರದಿ ನೀಡಿದೆ.
ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿ ಇದೆ. ಈಗ ಭಾರತ ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿಯನ್ನು ಅಧ್ಯಯನ ಮಾಡಿ ಒಳ ಮೀಸಲಾತಿಯು ಕಾನೂನು ಬದ್ಧ ಎಂದು ಹೇಳಿ ಆದೇಶ ಹೊರಡಿಸಿ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ನೀಡಬೇಕೆಂದು ಅದೇಶಿಸಿ ಅದನ್ನು ಆಯಾ ರಾಜ್ಯ ಸರಕಾರಗಳು ಜಾರಿಗೊಳಿಸುವ ಸಂಪೂರ್ಣ ಅಧಿಕಾರ ಮತ್ತು ಜವಾಬ್ದಾರಿ ಆಯಾ ರಾಜ್ಯ ಸರ್ಕಾರಕ್ಕೆ ಇರುತ್ತದೆ ಎಂದು ಆಗಸ್ಟ್-1, 2024 ರಂದು ಆದೇಶ ನೀಡಿದೆ. ಹೀಗಿದ್ದಾಗೂ ರಾಜ್ಯದ ಕರ್ನಾಟಕ ಕಾಂಗ್ರೆಸ್ ಸರಕಾರವು ವಿಳಂಬ ನೀತಿ ಧೋರಣೆ ಅನುಸರಿಸಿ ಅಸ್ಪೃಶ್ಯ ಸಮುದಾಯಗಳಿಗೆ ವಂಚನೆ ಎಸಗುತ್ತಿದೆ. ಹಿಗಾಗಿ ಮಾನ್ಯ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ತೀರ್ಪುಗೆ ತಾವು ಗೌರವ ಕೊಟ್ಟು ಜಾರಿ ಮಾಡಬೇಕು.
ರಾಜ್ಯದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ತಕ್ಷಣವೇ ಸುಗ್ರೀವಾಜ್ಞೆಯ ಮೂಲಕ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಗೊಳಿಸಬೇಕು. ಹಾಗೂ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಯಾಗುವವರೆಗೆ ಯಾವುದೇ ನೇಮಕಾತಿಗಳನ್ನು ಮಾಡದಂತೆ ತಕ್ಷಣದಿಂದ ಸ್ಥಗಿತಗೊಳಿಸಬೇಕು. ಸುಪ್ರೀಂ ಕೋರ್ಟಿನ ಆದೇಶದ ಹೊರಡಿಸಿ ಒಂದು ತಿಂಗಳ ಗತಿಸಿದ ನಂತರ ಸಲ್ಲಿಕೆಯಾದ ಕ್ಯೂರೆಟಿವ್ ಅರ್ಜಿಯನ್ನು ಕೂಡ ವಜಾ ಗೊಳಿಸಿ ಹಿಂದಿನ ಆದೇಶ ಮತ್ತು ನಿರ್ದೇಶನ ನೀಡಿದ್ದು ಈ ಕೂಡಲೇ ಒಳ ಮೀಸಲಾತಿ ಜಾರಿಯಾಗಬೇಕೆಂದು ಒತ್ತಾಯಿಸಿದರು.ಸುದ್ದಿ ಗೋಷ್ಟಿಯಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿಯ, ಮುಖಂಡರು ವಕೀಲರುಗಳಾದ ಶಿವಾನಂದ ಹೊಸಮನಿ, D M ಪೂಜಾರ, ವೀರೇಶ್G ಕಟ್ಟಿಮನಿ, ಪ್ರಕಾಶ ಹಾದಿಮನಿ, ಸಂತೋಷ ಕವಲೂರ, ಶಿವುಕುಮಾರ ದೊಡ್ಡಮನಿ ಕುಷ್ಟಗಿ , ಮಾರುತಿ ಚಾಮಲಾಪುರ, ರಮೇಶ ಗಾಯಕವಾಡ ಕುಷ್ಟಗಿ ಮುಂತಾದ ವಕೀಲರು ಉಪಸ್ಥಿತರಿದ್ದರು.
ಬಾಕ್ಸ್.
ಕಳೆದ ಸಾಲಿನ 2023ರ ಕಾಂಗ್ರೆಸ್ ಪಕ್ಷದ ಸರಕಾರ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ತಕ್ಷಣವೇ ರಾಜ್ಯದಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಿ ಒಳಮೀಸಲಾತಿ ಜಾರಿಗೊಳಿಸಬೇಕು.
ತಕ್ಷಣವೇ ಸುಗ್ರೀವಾಜ್ಞೆಯ ಮೂಲಕ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಗೊಳಿಸಬೇಕು.
ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆಯಾಗುವವರೆಗೂ ಕರ್ನಾಟಕ ರಾಜ್ಯದ ಯಾವುದೇ ಸರಕಾರಿ ನೇಮಕಾತಿಗಳನ್ನು ತಕ್ಷಣದಿಂದ ಸ್ಥಗಿತಗೊಳಿಸಬೇಕು.
ಭಾರತ ಸರ್ವೋಚ್ಚ ನ್ಯಾಯಾಲಯ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಆದೇಶವನ್ನು ವಿರೋಧಿಸುವವರನ್ನು ನ್ಯಾಯಾಂಗ ನಿಂದನೆ ಪ್ರಕರಣದಡಿ ರಾಜ್ಯ ಸರಕಾರವೇ ಪ್ರಕರಣ ದಾಖಲಿಸಬೇಕು. ಹಾಗೂ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
ಒಳಮೀಸಲಾತಿಯ ವರದಿಯನ್ನು ಇದೇ ತಿಂಗಳ 24-10-2024 ರಂದು ನೆಡೆಯುವ ಅಧಿವೇಶನದಲ್ಲಯೇ ಯತಾವತ್ತಾಗಿ ಜಾರಿಗೊಳಿಸಬೇಕು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.