Breaking News

ಒಂದೇ ವಾರದಲ್ಲಿ : ಕಳ್ಳತನ ಪ್ರಕರಣ ಭೇದಿಸಿದ ಕೊಪ್ಪಳ ಜಿಲ್ಲಾ ಪೊಲೀಸರು

In one week: Koppal district police cracked a theft case

ಜಾಹೀರಾತು

ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯ ಯಲಬುರ್ಗಾ ಪಟ್ಟಣ ಸೇರಿ ಇತರಡೆ ನಡೆದಿದ್ದ ಸ್ವತ್ತಿನ ಪ್ರಕರಣ ದಾಖಲಾಗಿ ಒಂದೇ ವಾರದಲ್ಲಿ ಆರೋಪಿತನನ್ನು ಮತ್ತು ಕಳ್ಳತನವಾದ ಬಂಗಾರದ ಆಭರಣಗಳನ್ನು ಪತ್ತೆ ಮಾಡಿ, ಸ್ವತ್ತಿನ ಪ್ರಕರಣವನ್ನು ಭೇದಿಸಿದ ಪೊಲೀಸರು, ಇಬ್ಬರು ಆರೋಪಿತರನ್ನು ಬಂಧಿಸಿ ಅವರಿಂದ 16,90,000-00 ಹಣ ಸೇರಿ ಒಟ್ಟು 30,62,800-00 ರೂ. ಬೆಲೆ ಬಾಳುವ ಬಂಗಾರದ ಸಾಮಾನುಗಳನ್ನು ಜಪ್ತಿ ಮಾಡಿದ್ದಾರೆ.

ನಗರದ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಳ್ಳತನ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ ಅವರು, ಯಲಬುರ್ಗಾ ಪಟ್ಟಣದ ರಾಮನಗರದಲ್ಲಿ ಅ.৪ ರಂದು ಯಾರೋ ಕಳ್ಳರು ಮನೆಯ ಬಾಗಿಲದ ಬೀಗ ಮುರಿದು ಮನೆಯಲ್ಲಿದ್ದ ಒಟ್ಟು 160 ಗ್ರಾಂ ತೂಕದ ಬಂಗಾರದ ಬಿಸ್ಕಿಟ್ ಗಟ್ಟಿ ಹಾಗೂ ಆಭರಣಗಳನ್ನು 2 19,50,000-00 2. 2 ಕಳ್ಳತನ ಮಾಡಿಕೊಂಡು ಹೋಗಿದ್ದರೆ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ-142/2024 ಕಲಂ 331(3), 331(4), 305 ಬಿ.ಎನ್.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು ಎಂದರು.

ಪ್ರಕರಣದ ಪತ್ತೆ ಕುರಿತು ರಚಿಸಿದ ತಂಡದಲ್ಲಿನ ಅಧಿಕಾರಿ ಹಾಗೂ ಸಿಬ್ಬಂಧಿಯವರು ಕಾರ್ಯಪ್ರವೃತ್ತರಾಗಿ ಮಾಹಿತಿಯನ್ನು ಸಂಗ್ರಹಿಸಿ ಬೀರಪ್ಪ ಬೀರಲಿಂಗ ದೇವಿಕೇರಿ ವ.30 ವರ್ಷ ಹಾಗೂ ನಾಗಪ್ಪ ನಾಗರಾಜ ಹಣಜಗಿ ಇಬ್ಬರೂ ಸಾ: ಕೆಂಭಾವಿ ತಾ: ಸುರುಪೂರ ಜಿ: ಯಾದಗಿರಿ. ಇವರನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆಪಾದಿತರು ಇನ್ನೊಬ್ಬ ಆರೋಪಿತನೊಂದಿಗೆ ಸೇರಿಕೊಂಡು ಕಳ್ಳತನ

ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಪ್ರಕರಣದ ಪತ್ತೆ ಕುರಿತು ಎ.ಎಸ್.ಪಿ ಹೇಮಂತ್ ಕುಮಾರ್ ಆರ್ ಡಿಎಸ್‌ಪಿ ಮುತ್ತಣ್ಣ ಸರವಗೋಳ ರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಬೆರಳು ಮುದ್ರೆ ಘಟಕದ ಪಿ.ಐ, ಚಂದ್ರಪ್ಪ, ನೇತೃತ್ವದಲ್ಲಿ ಪಿ.ಎಸ್.ಐ ಗಳಾದ ವಿಜಯ ಪ್ರತಾಪ್‌ ಯಲಬುರ್ಗಾ, ಗುರುರಾಜ ಕುಕನೂರ ಪ್ರಶಾಂತ, ಬೇವೂರ, ಪಿ.ಎಸ್.ಐ(ತನಿಖೆ) ಗುಲಾಮ್ ಆಹ್ಮದ, ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ. ವೆಂಕಟೇಶ, ದೇವೆಂದ್ರಪ್ಪ, ಮಹಿಬೂಬ, ಮಹಾಂತೇಶ, ಹನುಮಂತಪ್ಪ, ಮಹಾಂತಗೌಡ, ಬಕ್ಷಿದಸಾಬ್, ಬಸಯ್ಯ, ಸದ್ದಾಮ್, ವಿನೋದ, ಹನಮಂತಪ್ಪ, ಹನುಮಂತ, ಗವಿಸಿದ್ದರೆಡ್ಡಿ, ಸಂತೋಷ, ಹನುಮಂತ ಬೆರಳು ಮುದ್ರೆ ಘಟಕ, ತಾಂತ್ರಿಕ ವಿಭಾಗದ ಪ್ರಸಾದ, ಮಂಜುನಾಥ, ಶ್ವಾನದಳ ವಿಭಾಗದ ಮರಿಯಪ್ಪ, ನಾಗರಾಜ ರವರನ್ನೊಳಗೊಂಡ ಒಂದು ವಿಶೇಷ ‘ ಪತ್ತೆ ತಂಡವನ್ನು ರಚನೆ ಮಾಡಲಾಗಿತ್ತು.

ಸ್ವತ್ತಿನ ಪ್ರಕರಣ ದಾಖಲಾಗಿ ಒಂದೇ ವಾರದಲ್ಲಿ ಆರೋಪಿತನನ್ನು ಮತ್ತು ಕಳ್ಳತನವಾದ ಬಂಗಾರದ ಆಭರಣಗಳನ್ನು ಪತ್ತೆ ಮಾಡಿ, ಸ್ವತ್ತಿನ ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ: ರಾಮ್ ಎಲ್. ಅರಸಿದ್ದಿ, ಅವರು ಪ್ರಶಂಸನೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.

ಆರೋಪಿತರು ಯಲಬುರ್ಗಾ ಠಾಣಾ ಗುನ್ನೆ ನಂ-105/2024 ದಲ್ಲಿ ಮುದೋಳ ಸಿಮಾದಲ್ಲಿಯ ಬಾರ್ ಅಂಗಡಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಸದರಿ ಆರೋಪಿತರಿಬ್ಬರಿಂದ ಮೂರು ಪ್ರಕರಣದಲ್ಲಿ ಕಳ್ಳತನವಾದ ಒಟ್ಟು 182.2 ಗ್ರಾಂ ಬಂಗಾರದ ಆಭರಣಗಳು, ಒಟ್ಟು ಅಂ.ಕಿ.ರೂ-13,66,500-00 ಬೆಲೆಬಾಳುವುಗಳನ್ನು ಹಾಗೂ 90 ಗ್ರಾಂ ಬೆಳ್ಳಿಯ ಆಭರಣಗಳು ಆಂ.ಕಿ ರೂ.-6,300-00 ರೂ ಬೆಲೆಬಾಳುವುಗಳನ್ನು ಹಾಗೂ ನಗದು ಹಣ 16,90,000-00 ರೂಗಳನ್ನು ಹೀಗೆ ಒಟ್ಟು 30,62,800-00 ರೂ. ಬೆಲೆ ಬಾಳುವ ಮುದ್ದೆಮಾಲುಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಂದು ಸ್ಕ್ರೂಡ್ರೖವರ್‌ನ್ನು ವಶಪಡಿಸಿಕೊಂಡು ಆಪಾದಿತರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲಾಗಿರುತ್ತದೆ.

ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪ್ರಕರಣದ 3ನೇ ಆರೋಪಿಯ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಡಾ. ರಾಮ್. ಎಲ್ ಅರಸಿದ್ದಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ತಿಳಿಸಿದರು.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.