Compulsory installation of fire-fighting equipment in commercial shops and offices: Rangappa
ಮಾನ್ವಿ: ನಗರದ ಸರಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯ ಆವರಣದಲ್ಲಿ ಐ.ಟಿ.ಐ.ಕಾಲೇಜಿನ ವಿದ್ಯಾರ್ಥಿಗಳಿಗೆ ಅಗ್ನಿ ದುರಂತ ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಗ್ನಿಶಾಮಕ ಇಲಾಖೆ ವತಿಯಿಂದ ನಡೆದ ಒಂದು ದಿನದ ಬೆಂಕಿ ಅಪಘಾತ ಅರಿವು ಮೂಡಿಸಲು ಇಲ್ಲಿನ ಅಗ್ನಿ ಶಾಮಕ ಸಿಬ್ಬಂದಿ ತುರ್ತು ನಿರ್ಗಮನ ಅಣಕು ಪ್ರದರ್ಶನ ಎನ್ನುವ ಶೀರ್ಷಿಕೆಯಡಿ ಅಗ್ನಿ ಅನಾಹುತಗಳ ಪ್ರಾತ್ಯಕ್ಷಿಕೆ ಪ್ರದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ನಂತರದಲ್ಲಿ ಅಗ್ನಿಶಾಮಕಠಾಣಾಧಿಕಾರಿ ರಂಗಪ್ಪ ಮಾತನಾಡಿ ಬೆಂಕಿ ಹೊತ್ತಿದ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು. ಸ್ವಂತಿಕೆಯಿಂದ, ಜಾಣತನದಿಂದ ಹೇಗೆ ತಪ್ಪಿಸಿಕೊಳ್ಳಬೇಕು. ಜೊತೆಗೆ ಇತರರು ಅವಘಡದಲ್ಲಿ ಸಿಲುಕಿದಾಗ ಅವರನ್ನು ಹೇಗೆ ಪಾರು ಮಾಡಬೇಕು. ಅಲ್ಲದೇ, ಮುಂಜಾಗ್ರತಾ ಕ್ರಮವಾಗಿ ಪರಿಕರಗಳ ಸಂರಕ್ಷಣೆ ಮತ್ತು ಅವಶೇಷಗಳ ಉಳಿವುಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂಬ ವಿಷಯಗಳನ್ನು ಹಾಗೂ ಅಗ್ನಿ ದುರಂತಗಳು ಅನೇಕ ವಿಧಗಳಿಂದ ಸಂಭವಿಸಬಹುದಾಗಿದ್ದು ಅನಿಲ,ಪೆಟ್ರೋಲಿಯಂ ,ರಾಸಾಯನಿಕ, ವಿದ್ಯುತ್ ಸೇರಿದಂತೆ ವಿವಿಧ ಕಾರಣಗಳಿಂದ ಅಗ್ನಿ ಅನಾಹುತ ಸಂಭವಿಸಿದಾಗ ಬೇರೆ ,ಬೇರೆ ವಿಧಾನಗಳಿಂದ ಅಗ್ನಿ ಅನಾಹುತಗಳನ್ನು ನಿಯಂತ್ರಿಸಲಾಗುತ್ತದೆ. ಅಗ್ನಿ ಅನಾಹುತ ಸಂಭವಿಸಿದ ಕೂಡಲೇ ಅಗ್ನಿಶಾಮಕ ಠಾಣೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದಲ್ಲಿ ಕೂಡಲೇ ಅಗ್ನಿಶಾಮಕ ವಾಹನದೊಂದಿಗೆ ನಮ್ಮ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅಗ್ನಿಅನಾಹುತಗಳನ್ನು ಹಾಗೂ ಜೀವಹಾನಿಯಾಗುವುದನ್ನು ತಡೆಯುವುದಕ್ಕೆ ಕ್ರಮ ಕೈಗೊಳ್ಳುತ್ತಾರೆ. ಪ್ರತಿಯೊಂದು ವಾಣಿಜ್ಯಮಳಿಗೆ,ಕಚೇರಿಗಳಲ್ಲಿ ಕಡ್ಡಾಯವಾಗಿ ಅಗ್ನಿನಿಯಂತ್ರಕ ಸಾಧನಗಳನ್ನು ಅಳವಡಿಸುವುದರಿಂದ ಬೆಂಕಿ ಹೆಚ್ಚು ಪ್ರದೇಶಗಳಿಗೆ ಹರಡುವುದನ್ನು ತಡೆಯುವುದಕ್ಕೆ ಸಾಧ್ಯವಾಗುತ್ತದೆ . ಬೇಸಿಗೆಯಲ್ಲಿ ಹೆಚ್ಚಾಗಿ ಮೇವಿನ ಬಣವೇ, ಗುಡಿಸಲು, ಹತ್ತಿ ದಾಸ್ತನು ಕೋಣೆಗಳಲ್ಲಿ ಬೆಂಕಿ ಅನಾಹುತ ಸಂಭವಿಸುವುದರಿಂದ ಹೆಚ್ಚಿನ ಜಾಗ್ರತೆ ವಹಿಸಿದಲ್ಲಿ ಹೆಚ್ಚಿನ ಅನಾಹುತಗಳು ಸಂಭವಿಸದಂತೆ ತಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಗ್ನಿಶಾಮಕ ಸಿಬ್ಬಂದಿಗಳು ಆಗ್ನಿಶಾಮಕ ವಾಹನದ ಮೂಲಕ ಅಗ್ನಿಅನಾಹುತ ಸಂಭವಿಸಿದಾಗ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಪ್ರಯೋಗಿಕವಾಗಿ ತಿಳಿಸಿಕೊಟ್ಟರು.
ಅಗ್ನಿಶಾಮಕ ಸಹಾಯಕಠಾಣಾಧಿಕಾರಿ ಹಾಜೀಮಿಯಾ , ಸರಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಎಸ್.ಎಂ.ಪಾಷಾ,ತರಬೇತಿದರಾರದ ವೀರೇಶ, ಬಸವರಾಜ ನಸ್ಲಾಪೂರ್, ವಿರೇಂದ್ರ, ಪ್ರಶಾಂತ, ಸುನಿತಾ ಸೇರಿದಂತೆ ಐ.ಟಿ.ಐ.ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಇದ್ದರು.