Protect yourself:

ಹಬ್ಬದ ಋತುವಿನಲ್ಲಿ ಡಿಜಿಟಲ್ ಪಾವತಿ ವಂಚನೆಯನ್ನು ತಡೆಗಟ್ಟಲು ಗ್ರಾಹಕರಿಗೆ ʻ ನ್ಯಾಷನಲ್ ಪೇಮೆಂಟ್ ಕಾರ್ಪರೇಷನ್ ಆಫ್ ಇಂಡಿಯಾʼದಿಂದ (ಎನ್‌ಪಿಸಿಐ) ಮಹತ್ವದ ಸಲಹೆಗಳು
ಹಬ್ಬದ ಋತುವು ಶಾಪಿಂಗ್ ಭರಾಟೆಗೆ ಸಾಕ್ಷಿಯಾಗುತ್ತದೆ. ಈ ಸಂದರ್ಭದಲ್ಲಿ, ಬಹುತೇಕ ಗ್ರಾಹಕರು ಪ್ರಮುಖ ಸುರಕ್ಷತಾ ಅಭ್ಯಾಸಗಳನ್ನು ಕಡೆಗಣಿಸುತ್ತಾರೆ, ಇದರ ಪರಿಣಾಮವಾಗಿ ಆರ್ಥಿಕ ನಷ್ಟ ಮತ್ತು ಭಾವನಾತ್ಮಕ ತೊಂದರೆ ಅನುಭವಿಸಬೇಕಾಗುತ್ತದೆ. ಹಬ್ಬದ ಋತುವನ್ನು ಹೆಚ್ಚು ಸುರಕ್ಷಿತವಾಗಿ ಮುನ್ನಡೆಸಲು ಮತ್ತು ಗ್ರಾಹಕರ ಅವರ ಅನುಭವವನ್ನು ಆನಂದಮಯ ಆಗಿಸಲು ಖರೀದಿದಾರರಿಗೆ ರಾಷ್ಟ್ರೀಯ ಪಾವತಿ ಪ್ರಾಧಿಕಾರ (ಎನ್‌ಸಿಪಿಐ) ಮಹತ್ವದ ಸಲಹೆ ಸೂಚನೆಗಳನ್ನು ಹಂಚಿಕೊಂಡಿದೆ.
• ಮಿಂಚಿನ ಕೊಡುಗೆಗಳು (ಫ್ಲಾಶಿ ಆಫರ್ಸ್) ಮತ್ತು ರಿಯಾಯಿತಿಗಳು ಖರೀದಿ ಪ್ರಚೋದನೆಗೆ ಕಾರಣವಾಗಬಹುದು. ಅವುಗಳನ್ನು ಪಡೆಯುವ ಅವಸರದಲ್ಲಿ, ನೀವು ಅಂತಹ ವೇದಿಕೆಯ ಕಾನೂನು ಬದ್ಧತೆಯನ್ನು ಕಡೆಗಣಿಸಬಹುದು. ಅಪರಿಚಿತ ಮಾರಾಟಗಾರರು ಮತ್ತು ವಿಶ್ವಾಸಾರ್ಹವಲ್ಲದ ವ್ಯವಹಾರಗಳ ಬಗ್ಗೆ ಸಾಕಷ್ಟು ಸಂಶೋಧನೆ ಮಾಡುವುದನ್ನು ಮರೆಯಬೇಡಿ.
• ಕೊಡುಗೆಗಳಿಗೆ ಸೈನ್ ಅಪ್ ಮಾಡುವಾಗ, ಅಗತ್ಯವಿಲ್ಲದ ಅತಿಯಾದ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಏಕೆಂದರೆ ಇದು ಡೇಟಾ ಕಳ್ಳತನದ ಅಪಾಯವನ್ನು ಹೆಚ್ಚಿಸುತ್ತದೆ
• ಖರೀದಿಗಳನ್ನು ಮಾಡಲು ಶಾಪಿಂಗ್ ಮಾಲ್ಗಳಲ್ಲಿ ತೆರೆದ ವೈ-ಫೈ ಸಂಪರ್ಕಗಳಂತಹ ಅಸುರಕ್ಷಿತ ನೆಟ್ ವರ್ಕ್ಗಳನ್ನು ಬಳಸಬೇಡಿ. ಇದು ನಿಮ್ಮ ಹಣಕಾಸು ಮಾಹಿತಿಯನ್ನು ಹ್ಯಾಕರ್ಗಳಿಗೆ ಬಹಿರಂಗಪಡಿಸಬಹುದು.
• ಹಬ್ಬದ ಋತುವಿನಲ್ಲಿ, ಪದೇಪದೆ ಶಾಪಿಂಗ್ ಮಾಡುವುದು ಹೆಚ್ಚಾದಂತೆ, ಗ್ರಾಹಕರು ತಾವು ಏನು ಆರ್ಡರ್ ಮಾಡಿದ್ದೆವು ಎಂಬ ನಿಗಾ ಕಳೆದುಕೊಳ್ಳುತ್ತಾರೆ, ಇದರಿಂದಾಗಿ ಅವರು ʻಫಿಶಿಂಗ್ʼ ಹಗರಣಗಳಿಗೆ ಗುರಿಯಾಗುತ್ತಾರೆ. ನಕಲಿ ಡೆಲಿವರಿ ನೋಟಿಫಿಕೇಷನ್‌ಗಳನ್ನು ತಪ್ಪಿಸಲು ಪಾವತಿ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೊದಲು ಯಾವಾಗಲೂ ಎರಡು ಬಾರಿ ಪರಿಶೀಲಿಸಿ.
• ನಿಮ್ಮ ಖಾತೆಗಳಿಗೆ ಸರಳ ಅಥವಾ ಡೀಫಾಲ್ಟ್ ಪಾಸ್ವರ್ಡ್ ಗಳನ್ನು ಬಳಸುವುದನ್ನು ತಪ್ಪಿಸಿ. ಇದು ನಿಮ್ಮನ್ನು ಹ್ಯಾಕರ್ಗಳಿಗೆ ಸುಲಭ ತುತ್ತಾಗಿಸುತ್ತದೆ. ಜೊತೆಗೆ, ಭದ್ರತೆಯನ್ನು ಹೆಚ್ಚಿಸಲು ಪ್ರತಿ ಖಾತೆಗೆ ಬಲವಾದ, ಅನನ್ಯ ಪಾಸ್ ವರ್ಡ್ಗಳನ್ನು ಸೃಷ್ಟಿಸಿ.