Condolences to the Gudekote deceased farmer’s family MLA Dr. NT Srinivas.
ಗುಡೇಕೋಟೆ:- ಕೂಡ್ಲಿಗಿ ತಾಲೂಕು ಗುಡೇಕೋಟೆ ಗ್ರಾಮದ ರೈತ ಎಂ.ಚಂದ್ರಪ್ಪ ಎಂಬುವವರು ಕಳೆದ ಗುರುವಾರ ಸಂಜೆ 4 ಗಂಟೆ ಸಮಯದಲ್ಲಿ ಹೊಲದಲ್ಲಿ ಧನಗಳಿಗೆ ಹುಲ್ಲು ಕೊಯ್ಯುವಾಗ ವಿಷಜಂತು ಹಾವೊಂದು ಕಚ್ಚಿ ಸಾವಿಗೀಡಾಗಿದ್ದರು. ಮೃತ ಬಡರೈತ ಕುಟುಂಬಕ್ಕೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ||.ಎನ್.ಟಿ.ಶ್ರೀನಿವಾಸ್ ರವರು ತಮ್ಮ ನಿವಾಸದಲ್ಲಿ ಕುಟುಂಬದವರಿಗೆ ಸಾಂತ್ವನ ಹೇಳಿ ಆರ್ಥಿಕ ಸಹಾಯ ಮಾಡಿದರು.
ಶಾಸಕ ಡಾ||ಎನ್ ಟಿ ಶ್ರೀನಿವಾಸ್ ಮಾತನಾಡಿ, ಈ ಘಟನೆ ನಮಗೆ ಜೀರ್ಣಿಸಲು ಆಗುವುದಿಲ್ಲ. ಭಗವಂತ ಮೃತರ ಕುಟುಂಬಗಳಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಕುಟುಂಬದ ಉಳಿದ ಸದಸ್ಯರಿಗೆ ದೈರ್ಯ ತುಂಬಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಸಹಾಯ ಮಾಡಬಹುದು. ಆದರೆ ಸಮಾಧಾನ ಮಾಡುವುದು ಕಷ್ಟ. ಈ ದುರ್ಘಟನೆಯ ನೆನಪು ಸದಾ ಕಾಡುತ್ತಿರುತ್ತದೆ. ಅದನ್ನು ಗೆಲ್ಲುವ ಶಕ್ತಿ ದೇವರು ಕುಟುಂಬಕ್ಕೆ ಕೊಡಲಿ. ಘಟನೆ ಸುದ್ದಿ ಕೇಳಿ ನನಗೆ ಬಹಳ ದುಃಖವಾಯಿತು. ಕುಟುಂಬದ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಅವರ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗುಡೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್ ಕೃಷ್ಣ, ಮೃತ ಸಹೋದರ ಪಾಲಯ್ಯ, ಕಾಂಗ್ರೆಸ್ ಮುಖಂಡ ಪೇಂಟ್ ತಿಪ್ಪೇಸ್ವಾಮಿ, ವಾಟಾಳ್ ನಾಗರಾಜ್,ಮೊಟುಪಾಲಯ್ಯನವರ್ ರಾಜಣ್ಣ, ಶ್ರೀನಿವಾಸ್, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.