Shifting of BEO office to Town Hall: Rayardi Notice,,,
ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಯಲಬುರ್ಗಾ ಪಟ್ಟಣದ ತೋಪಿನ ತಿಮ್ಮಪ್ಪ ದೇವಸ್ಥಾನ ಹತ್ತಿರದಲ್ಲಿರುವ ಕನಕ ಪುರಭವನಕ್ಕೆ ಬಿಇಓ ಕಛೇರಿ ಸ್ಥಳಾಂತರವಾಗಿದ್ದು ಹೀಗಾಗಿ ಭವನದ ದುರಸ್ತಿ, ಮೂಲ ಸೌಕರ್ಯ ಒದಗಿಸುವ ಕಾರ್ಯದ ಸಿದ್ದತೆ ನಡೆದಿದೆ.
ಈ ಹಿಂದೆ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರಡ್ಡಿ ಅವರು 2017-18ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನದಡಿ ಸುಮಾರು 1ಕೋಟಿ ರೂಗಳ ವೆಚ್ಚದಲ್ಲಿ ಕನಕ ಪುರ ಭವನವನ್ನು ನಿರ್ಮಾಣ ಮಾಡಿಸಿದ್ದರು. ಆದರೆ ಅದು ಉದ್ಘಾಟನೆಗೊಂಡು ಐದಾರು ವರ್ಷ ಗತೀಸಿದರು ಭವನ ಬಳಕೆಯಾಗಿಲ್ಲವಾದುದನ್ನು ಗಮನಿಸಿದ ಶಾಸಕರು ತಾತ್ಕಾಲಿಕವಾಗಿ ಬಿಇಓ ಕಛೇರಿ ಪ್ರಾರಂಭ ಮಾಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಟ್ಟಡಕ್ಕೆ ಎರಡು ಕೋಟಿ : ನೂತನವಾಗಿ ಕಾರ್ಯಾಲಯ ನಿರ್ಮಾಣಕ್ಕೆ ಶಾಸಕ ಬಸರಾಜ ರಾಯರಡ್ಡಿ ಅವರು ಪ್ರಯತ್ನ ಫಲದಿಂದ ರಾಜ್ಯ ಸರ್ಕಾರದಿಂದ ಒಟ್ಟು ಎರಡು ಕೋಟಿ ರೂ. ಗಳ ಅನುದಾನ ತಂದಿದ್ದು ಶೀಘ್ರದಲ್ಲೇ ಇಲಾಖೆಯ ಕಛೇರಿಯ ನಿರ್ಮಾಣವಾಗುವವರೆಗೂ ಕಟ್ಟಡ ಕಟ್ಟಡ ಕನಕ ಪುರಭವನದಲ್ಲಿ ಇಲಾಖೆ ಕಛೇರಿ ನಡೆಯಲಿದೆ.
ಭವನದ ಸ್ವಚ್ಛತೆ ಕಾರ್ಯ : ಪಟ್ಟಣದ ಕನಕ ಪುರಭವನದ ಸುತ್ತಮುತ್ತಲು ಗಿಡ ಗಂಟೆಗಳು ಬೆಳೆದಿದ್ದು ಶಾಸಕರ ಸೂಚನೆ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪ.ಪಂ ಮುಖ್ಯಾಧಿಕಾರಿ ನಾಗೇಶ ಅವರು ಸಿಬ್ಬಂದಿಗಳ ಮೂಲಕ ಗಿಡಗಂಟೆಗಳನ್ನು ತೆರವು ಮಾಡಿ, ಸ್ವಚ್ಛತೆ ಮಾಡಿದರು.
ಪುರಭವನದಲ್ಲಿ ಶಿಕ್ಷಣ ಇಲಾಖೆ ಕಾರ್ಯಾರಂಭ : ಇದೇ ಅ 23 ರಂದು ಶಿಕ್ಷಣ ಇಲಾಖೆ ಕಾರ್ಯಾರಂಭ ಮಾಡಲಿದೆ.