Breaking News

ನಾಮ ಕೇ ವಾಸ್ತೆ ನಮ್ಮೂರಲ್ಲೂ ವಿದ್ಯುತ್ ಕಂಬಗಳು,,,

Naam Ke Vaste Electric Poles in all our three,,,

ಜಾಹೀರಾತು

ವರದಿ : ಪಂಚಯ್ಯ ಹಿರೇಮಠ,

ಕೊಪ್ಪಳ : ಕುಕನೂರು ಪಟ್ಟಣದ ವೀರಭದ್ರಪ್ಪ ವೃತ್ತದಿಂದ ಗುದ್ನೇಪ್ಪನ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಿದ್ಯುತ್ ಕಂಬಗಳುಂಟು ಆದರೇ ದೀಪಗಳು ಉರಿಯುವದಿಲ್ಲಾ.

ನಮ್ಮೂರಲ್ಲಿ ಹೈ ಮಾಸ್ಟ್ ದೀಪಗಳು ಇವೆ ಎಂದು ಬೀಗಲು ಮಾತ್ರ ಇವೆಯೇ ಎಂಬುದು ತಿಳಿಯುತ್ತಿಲ್ಲಾ.

ಸುಮಾರು ಎರಡು ಮೂರು ತಿಂಗಳುಗಳಿಂದ ವೀರಭದ್ರಪ್ಪ ವೃತ್ತದಿಂದ ಆರ್ಯರ್ ಮಿಲ್ ವೃತ್ತದವರೆಗೆ ಒಂದು ಬದಿಯಲ್ಲಿ ಮಾತ್ರ ಸಾಯಂಕಾಲ ವಿದ್ಯುತ್ ದೀಪ ಹೊತ್ತುತ್ತವೆ ಇನ್ನೊಂದು ಬದಿಯಲ್ಲಿ ಕಂಬಗಳು ಮಾತ್ರ ಗೋಚರಿಸುತ್ತವೆ. ಅದರಲ್ಲಿ ಬೆಳಕು ಮಾತ್ರ ಕಣ್ಮರೆಯಾಗಿವೆ.

ಈ ಕುರಿತು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳನ್ನು ಒಂದು ತಿಂಗಳ ಹಿಂದೆ ವಿಚಾರಿಸಲಾಗಿ ವಿದ್ಯುತ್ ಕಂಬಗಳು ಬಹಳ ಎತ್ತರವಿದ್ದು ಬಲ್ಪಗಳನ್ನು ಹಾಕಿಸಲು ವಾಹನ ವ್ಯವಸ್ಥೆ ಇಲ್ಲಾ ಕೊಪ್ಪಳದಿಂದ ಕರೆಯಿಸಿ ಹಾಕಿಸುವ ವ್ಯವಸ್ಥೆ ಮಾಡಿಸುತ್ತೇವೆ ಎಂದು ಸಬೂಬು ಹೇಳಿದ್ದರು.

ಆದರೆ ಹೇಳಿ ಒಂದು ತಿಂಗಳು ಗತಿಸಿದರು ಇಲ್ಲಿಯವರೆಗೆ ಅದರ ಗೋಜಿಗೆ ಹೋಗಿಲ್ಲಾ. ಈ ರೀತಿಯಾಗಿ ಒಂದು ಬದಿ ಬೆಳಕು ಒಂದು ಬದಿ ಕತ್ತಲು ಇರುವದರಿಂದ ಪಟ್ಟಣಗಳಲ್ಲಿ ಆಗಾಗ ಕಳ್ಳತನ ನಡೆಯುತ್ತಿವೆ ಎಂದು ನಾಗರಿಕರು ಆರೋಪಿಸಿದರು.

ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಈಗಿರುವ ವಿದ್ಯುತ್ ದೀಪಗಳ ನಿರ್ವಹಣೆಯನ್ನೇ ಪಟ್ಟಣ ಪಂಚಾಯತಿಯವರು ಸಮರ್ಪಕ ನಿರ್ವಹಣೆ ಮಾಡುತ್ತಿಲ್ಲಾ ಎಂದು ಆರೋಪಿಸಿದರು.

ಪಟ್ಟಣ ಪಂಚಾಯತಿಯಿಂದ ವಿವಿಧೆಡೆ 1400 ನೂತನ ವಿದ್ಯುತ್ ಕಂಬಗಳನ್ನುಅಳವಡಿಸುವಂತೆ ಶಾಸಕರ ಸೂಚನೆ

ಮೊನ್ನೆ ಪಟ್ಟಣ ಪಂಚಾಯತಿ ಕಾರ್ಯಕ್ರಮ ಒಂದರಲ್ಲಿ ಪಟ್ಟಣ ಪಂಚಾಯತಿಯಿಂದ ವಿವಿಧೆಡೆಗಳಲ್ಲಿ 1400 ವಿದ್ಯುತ್ ಕಂಬಗಳನ್ನು ಅಳವಡಿಸುವಂತೆ ಶಾಸಕ ಬಸವರಾಜ ರಾಯರಡ್ಡಿಯವರು ಹೇಳಿದ್ದರು. ಆದರೆ ಇರುವ ವಿದ್ಯುತ್ ಕಂಬಗಳೇ ನಿರ್ವಹಣೆ ಕಾಣದೇ ಇರುವಾಗ ಹೊಸ ಕಂಬಗಳಿಗೂ ಇದೇ ಸ್ಥಿತಿಯಾಗಬಹುದು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿರುವುದು ಕೇಳಿ ಬಂದಿತು.

ಇನ್ನೂ ಮೇಲಾದರೂ ಪಟ್ಟಣ ಪಂಚಾಯತಿ ಅಧಿಕಾರಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ಕಂಬಗಳಿಗೆ ಬೆಳಕು ನೀಡುವ ವ್ಯವಸ್ಥೆಯನ್ನು ಕಲ್ಪಿಸಲಿ ಎನ್ನುವದು ಪ್ರಜ್ಞಾವಂತರ ಅಂಬೋಣ,,,

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.