Farmer Anand Nayak said that the corn that came in his hand did not reach his mouth during Varana’s protest.
ಕೊಪ್ಪಳ ತಾಲೂಕಿನ ವನಬಳ್ಳಾರಿ
ಗ್ರಾಮದ ರೈತರಿಗೆ ಬಿಟ್ಟು ಬಿಡದೆ ಕಾಡಿದ ಮಳೆ ಮೂರು ತಿಂಗಳದಿಂದ ಶ್ರಮಪಟ್ಟ ಬೆಳೆಸಿದ ಮೆಕ್ಕೆ ಜೋಳದ ಬೆಳೆ ನಾಲ್ಕು ದಿನದಲ್ಲಿ ಮಣ್ಣು ಪಾಲಾಯಿತು ಎಂದು ರೈತ ಆನಂದ ನಾಯಕ ಕಣ್ಣೀರು ಹಾಕಿದರು . ಬೆಳೆದು ನಿಂತ ಮೆಕ್ಕೆಜೋಳದ ಬೆಳೆ ಮೊಳಕೆ ಹೊಡೆಯುವವರೆಗೂ ವರುಣ ಆರ್ಭಟ ನಿಲ್ಲಲಿಲ್ಲ . ವರುಣ ನಿಂತ ಮೇಲೆ ತಮ್ಮ ಜಮೀನಿನ ವೀಕ್ಷಣೆಗೆ
ಹೋದ ರೈತರ ಕಣ್ಣೀರಲ್ಲಿ ಕೈ ತೊಳೆಯುವಂತಾಯ್ತು, ಮಳೆ ಬಂದರೆ ಬೆಳೆ ಎಂದು ಕಾಯ್ದು ಕುಳಿತ ರೈತರಿಗೆ, ಬೆಳೆ ಬಂದರು ಮಳೆ ನಿಲ್ಲಲಿಲ್ಲ ಎಂದು ಕಣ್ಣೀರು ತೋಡಿಕೊಂಡರು, ನಷ್ಟವಾಗಿರುವ ಬೆಳೆ ಹಾನಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಬೇಕೆಂದು ರೈತರು ಕಾಯುವಂತಾಯಿತು. ಬಡವರ ಬಗ್ಗೆ ಕಾಳಜಿ ವಹಿಸುವ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ್ ಸರ್ಕಾರವು. ರೈತರಿಗಾದ ನಷ್ಟವನ್ನು ನೀಡಬೇಕೆಂದು ರೈತರು ಗಣಿನಾಡು ಸಂಜೆ ಪತ್ರಿಕೆಯಲ್ಲಿ ಅಳಲು ತೋಡಿಕೊಂಡರು,