MLA who performed 2 crore Bhumi Puja under Pragati Colony Yojana -Dr. Srinivas. N. T




ಕಾನ ಹೊಸಹಳ್ಳಿ :- ಹೋಬಳಿ ವ್ಯಾಪ್ತಿಯಲ್ಲಿ ಇಮ್ಮಡಾಪುರ, ಕಾ ನಹೊಸಹಳ್ಳಿ, ಚಿಕ್ಕಕುಂಬಳಕುಂಟೆ, ಹಿರೇಕುಂಬಳಕುಂಟೆ ಗ್ರಾಮಗಳಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಶುಕ್ರವಾರದಂದು ಪ್ರಗತಿ ಕಾಲೋನಿ ಯೋಜನೆ ಅಡಿಯಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡುತ್ತಾ, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಾನು ಬಂದಿರುವೆ. ಪ್ರಾಮಾಣಿಕವಾಗಿ ಶ್ರಮವಹಿಸಿ ಕೆಲಸ ಮಾಡುತ್ತೇನೆ ಎಂದೂ ತಿಳಿಸಿದರು. ಆದ್ದರಿಂದ ಗುತ್ತಿಗೆದಾರರು ಮತ್ತು ಗ್ರಾಮಗಳ ಅಭಿವೃದ್ಧಿ ವಿಷಯದಲ್ಲಿ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದೂ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಕೆಎಂ ಶಶಿಧರ ಸ್ವಾಮಿ,ವಿರೇಶಸ್ವಾಮಿ, ವೆಂಕಟೇಶ ಕೆ, ಸಂಗಣ್ಣ ಎಸ್, ರಾಘವೇಂದ್ರ ಎಂ, ನಾಗೇಂದ್ರಪ್ಪ ಎಂ, ಪ್ರಭಾಕರ್ ಕೆ, ಗೋಪಾಲಪ್ಪ ಬಿ, ಚೇತನ್, ಬೋರಣ್ಣ, ಪೊಟೋ ಸಿದ್ದಲಿಂಗಪ್ಪ, ಮಂಜುನಾಥ, ದುಗ್ಗಪ್ಪ, ನಾಗರಾಜ ಏ.ಕೆ, ಖಲಂದರ, ಆಂಜನೇಯ ,ಉಮೇಶಪ್ಪ, ಮನೋಜ್, ವೀರಭದ್ರಪ್ಪ, ಮಲ್ಲಿಕಾರ್ಜುನ, ಹರೀಶ್,ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಸ್ಥರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು.