Kudligi: Madugamma Ganga Puja by Villagers to Kodibidda Lake
ಕೂಡ್ಲಿಗಿ : ಕೂಡ್ಲಿಗಿ ತಾಲೂಕಿನಾಧ್ಯಂತ ಕಳೆದ ವಾರದಿಂದ ಸುರಿದ ಮಳೆಗೆ ಬಹುತೇಕ ಹಲವಾರು ಗ್ರಾಮಗಳಲ್ಲಿ ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿಬಿದ್ದು ತುಂಬಿಹರಿಯುತ್ತಿವೆ.ಅದರಲ್ಲಿ ಕೂಡ್ಲಿಗಿಯ ದೊಡ್ಡಕೆರೆ ಸಹ ಕೋಡಿಬಿದ್ದು ರೈತರ ಮೊಗದಲ್ಲಿ ಸಂತಸ ಮೂಡಿದ್ದು, ಜಾನುವಾರುಗಳಿಗೆ ಈ ವರ್ಷ ನೀರಿನ ಹಾಗೂ ಮೇವಿನ ಕೊರತೆ ನೀಗಿಸಿದೆ.
ಸಂಪ್ರದಾಯದಂತೆ ಶುಕ್ರವಾರ ಕೂಡ್ಲಿಗಿ ಪಟ್ಟಣದ ಸಕಲ ದೈವಸ್ಥರು ಸೇರಿ ಕೋಡಿಬಿದ್ದ ಕೆರೆಗೆ ಗಂಗಪೂಜೆ ನೆರವೇರಿಸಿದರು. ಬೆಳಿಗ್ಗೆ 11ಗಂಟೆಗೆ ಗ್ರಾಮ ದೇವತೆ ಶ್ರೀ ಊರಮ್ಮದೇವಿ ದೇವಸ್ಥಾನದಲ್ಲಿ ಮೊದಲು ಪೂಜೆ ನೆರವೇರಿಸಿ ನಂತರ ಗ್ರಾಮಸ್ಥರು ಮಹಿಳೆಯರು ಭಕ್ತಿಭಾವದಿಂದ ವಾದ್ಯಮೇಳಗಳೊಂದಿಗೆ ಕೆರೆಗೆ ತೆರಳಿ ಪೂಜೆ ಸಲ್ಲಿಸಿದರು.
ಕೂಡ್ಲಿಗಿ ಜೋಯಿಸರಾದ ಶ್ರೀ ಹಯವದನ ಆಚಾರ್ ಇವರ ಪೌರೋಹಿತ್ಯದಲ್ಲಿ, ಹಿರೇಮಠದ ಚಿದಾನಂದಸ್ವಾಮಿಯವರ ಸಾನಿಧ್ಯದಲ್ಲಿ ಚೌಡಪ್ಪ ಪೂಜಾರ್ ಇವರಿಂದ ಪೂಜಾ ವಿಧಿವಿಧಾನಗಳು ಜರುಗಿದವು.
ಈ ಸಂದರ್ಭದಲ್ಲಿ ಕೂಡ್ಲಿಗಿ ಪಟ್ಟಣದ ಯುವಕರು ಮಹಿಳೆಯರು ಮಕ್ಕಳು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.