Breaking News

ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ : ಕೊಟ್ಟೂರು ತಾಲೂಕು ಅಧ್ಯಕ್ಷ ತಗ್ಗಿನಕೇರಿ ಕೊಟ್ರೇಶ್

ಕೊಟ್ಟೂರು : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರದಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಪ್ರಥಮ ತಾಲೂಕು ಸಮ್ಮೇಳನ ನಡೆಸಲಾಯಿತು.

ಜಾಹೀರಾತು

ಕೊಟ್ಟೂರು ತಾಲೂಕು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಪ್ರಥಮ ಸಮ್ಮೇಳನವನ್ನು  ಎ ಐ ಡಿ ಆರ್ ಎಂ  ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ  ಸಂತೋಷ್ ಎಚ್ ಎಂ  ರವರು ಹಲೆಗೆ ಬಾರಿಸುವ ಮೂಲಕ  ಸಮ್ಮೇಳನಕ್ಕೆ ಚಾಲನೆ ನೀಡಿದರು.

ಈ ದೇಶದಲ್ಲಿ  ಪರಿಶಿಷ್ಟ ಪಂಗಡ –  ಪರಿಶಿಷ್ಟ ಜಾತಿ  ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ.  ಈ ದೌರ್ಜನ್ಯದಿಂದ ಹೊರಬರಲು  ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಸಂಘಟನೆಯು  ನಿಮಗೆ ರಕ್ಷಣೆ ನೀಡುತ್ತದೆ. ಈ ಸಂಘಟನೆ ಉದ್ದೇಶ ಏನೆಂದರೆ ಅನ್ಯಾಯದಿಂದ ಒಳಗಾದ ಶೋಷಿತ ವರ್ಗದ ಜನರಿಗೆ  ನ್ಯಾಯ ಕೊಡಿಸುವುದು ಮತ್ತು ಅವರ ಪರವಾಗಿ ಕೆಲಸ ಮಾಡುವ ಸಂಘಟನೆ ಆಗಿದೆ. ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ   ಅತ್ಯಾಚಾರ,ಕೊಲೆ ನಡೆಯುತ್ತಿದೆ. ಹಾಗೂ ಕೊಪ್ಪಳ ಜಿಲ್ಲೆಯಲ್ಲಿ  ಕ್ಷೌರಿಕ ಅಂಗಡಿಯ ಮಾಲೀಕ  ಕಟಿಂಗ್ ಮಾಡು ಎಂದಿದ್ದಕ್ಕೆ  ಆ ದಲಿತ ಯುವಕನನ್ನು  ಹತ್ಯೆ ಮಾಡುತ್ತಾನೆ  ಇದರಿಂದ ದಲಿತರು  ಜಾಗೃತರಾಗಬೇಕು ಶಿಕ್ಷಣವಂತರಾಗಬೇಕು.

ಯಾವುದೇ ಸಮುದಾಯದ ಜನರಿಗೆ ಅನ್ಯಾಯವಾದರೆ ಅವರ ಪರವಾಗಿ  ಧ್ವನಿ ಎತ್ತುವ  ಕೆಲಸ ಎ ಐ ಡಿ ಆರ್ ಎಂ  ಸಂಘಟನೆ ಮಾಡಬೇಕು.

ಕೊಟ್ಟೂರು ತಾಲೂಕು  ಸಂಪೂರ್ಣವಾಗಿ ಸರ್ವೆ ಮಾಡಿ ನೋಡಿದರೆ  ಇನ್ನಾದರೂ ದಲಿತರಿಗೆ ವಸತಿ ವ್ಯವಸ್ಥೆ  ವಂಚಿತರಾಗಿದ್ದಾರೆ. ಮತ್ತು ಈ ಭಾಗದಲ್ಲಿ ಶೈಕ್ಷಣಿಕ ಸಮಸ್ಯೆ ಬಗ್ಗೆ ಗಮನ ಹರಿಸಬೇಕು  ಸರ್ಕಾರವು ಒಂದು ವೇಳೆ ಎಲ್ಲವನ್ನು ಖಾಸಗೀಕರಣ ಮಾಡಿದರೆ ನಾವು ಸೌಲಭ್ಯದಿಂದ ವಂಚಿತ ರಾಗಬೇಕಾಗುತ್ತದೆ. ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಚಿಂತನೆಯಾದ  ಸಾಮಾಜಿಕ ವ್ಯವಸ್ಥೆ ಹಾಗೂ ನವಾ ಸಮಾಜ ಕಟ್ಟುವ ಕೆಲಸ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಸಂಘಟನೆ ಮಾಡುತ್ತದೆ  ಎಂದು ಹೇಳಿದರು.

ನಂತರ ಕೊಟ್ಟೂರು ತಾಲೂಕು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ  ಸಂಘಟನೆಯ  ಗೌರವ ಅಧ್ಯಕ್ಷರಾಗಿ ಪೂಜಾರ್ ಅಜ್ಜಯ್ಯ, ತಾಲೂಕು ಅಧ್ಯಕ್ಷರಾಗಿ  ತೆಗ್ಗಿನಕೇರಿ ಕೊಟ್ರೇಶ್, ಉಪಾಧ್ಯಕ್ಷರಾಗಿ ಆರ್.ಪ್ರಸಾದ್, ಪ್ರಧಾನ ಕಾರ್ಯದರ್ಶಿಯಾಗಿ  ಅಂಜಿನಿ,  ಸಹ ಕಾರ್ಯದರ್ಶಿ  ತುಳುಶ್ ನಾಯಕ್, ಸಂಘಟನೆ ಕಾರ್ಯದರ್ಶಿ  ಕಿರಣ್,  ಸದಸ್ಯರಗಳಾಗಿ
ಟಿ ರಾಜಶೇಖರ್, ಕಾರ್ತಿಕ್, ಪುನೀತ್, ಸಂತೋಷ್, ರವಿ ಕೆ ನಾಗರಾಜ್, ಪಿ ಚಂದ್ರಶೇಖರ್, ಕೆ ಕೊಟ್ರೇಶ್ ಸದಸ್ಯರುಗಳಾಗಿ ಆಯ್ಕೆಗೊಂಡರು.

ದ್ವಾರಕೇಶ್ ಅವರು ಕಮಿನಿಷ್ಟ್ ಸಿದ್ದಾಂತದ ಸೊಗಸಾದ ಹಾಡುಗಳನ್ನು ಹಾಡಿದ್ದು ಕಾರ್ಯಕ್ರಮಗೆ ಮೆರುಗು ಬಂದಿತು

ಈ ಸಂದರ್ಭದಲ್ಲಿ  ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ವಿಜಯನಗರ ಜಿಲ್ಲೆಯ ಸಹ ಕಾರ್ಯದರ್ಶಿ  ಸುರೇಶ್ ಹಲಗಿ, ಕೊಟ್ಟೂರು ತಾಲೂಕು ಕಾರ್ಯದರ್ಶಿ ಕೆ ರೇಣುಕಮ್ಮ, ಪಿ ಚಂದ್ರಶೇಖರ್, ಕೆ ಕೊಟ್ರೇಶ್, ಹನುಮಕ್ಕ, ಬಿ ರೇಣುಕಮ್ಮ, ಭಜಂತ್ರಿ ಮಂಜುನಾಥ್  ಹಾಗೂ ಇತರೆ ಉಪಸ್ಥಿತರಿದ್ದರು

About Mallikarjun

Check Also

ವೈದ್ಯ ಸೇವಾರತ್ನ ಪ್ರಶಸ್ತಿ ಪುರಸ್ಕೃತರಾದ ಡಾ.ಶರಣ ಬಸವರಾಜ ದೇವರಡ್ಡಿ ಅವರಿಗೆ ವನಸಿರಿ ಫೌಂಡೇಶನ್ ವತಿಯಿಂದ ಸನ್ಮಾನ

Vaidya Sevaratna awardee Dr. Sharan Basavaraja Devaradi felicitated by Vanasiri Foundation ಇತ್ತೀಚೆಗೆ ಬೆಂಗಳೂರಿನ ನಯನ ಸಭಾಂಗಣದಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.