A 10-day entrepreneurship development program was launched at a government first class college in the city
ಚಿಕ್ಕ-ಚಿಕ್ಕ ಉದ್ಯಮಗಳನ್ನು ಪ್ರಾರಂಭ ಮಾಡಿ; ಜಿ.ಯು.ಹುಡೇದ್
ರಾಯಚೂರು,ಅ.17,():- ಚಿಕ್ಕ-ಚಿಕ್ಕ ಉದ್ಯಮಗಳನ್ನು ಪ್ರಾರಂಭ ಮಾಡಿ ಅವುಗಳನ್ನು ಸರಿಯಾಗಿ ನಡೆಸಿಕೊಂಡು ಹೋಗಿ ಮುಂದೆ ದೊಡ್ಡ ಉದ್ಯಮಗಳನ್ನಾಗಿ ಮಾಡಲು ಮುಖ್ಯವಾಗಿ ಉದ್ಯಮಶೀಲರು ಮನಸ್ಸು ಮಾಡಬೇಕು ಎಂದು ಸಿಡಾಕ್ ಜಂಟಿ ನಿರ್ದೇಶಕರಾದ ಜಿ.ಯು.ಹುಡೇದ್ ಅವರು ಹೇಳಿದರು.
ಅವರು ಅ.17ರ ಗುರುವಾರ ದಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶಿಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆ.ಎಸ್.ಡಿ.ಸಿ), ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ರಾಯಚೂರು ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಭಾವಿ ಉದ್ಯಮಶೀಲರುಗಳಿಗೆ ಹಮ್ಮಿಕೊಂಡಿದ್ದ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ ಬಗ್ಗೆ ವಿವರಿಸುತ್ತಾ, ಯಾವುದೇ ವ್ಯಾಪಾರೋದ್ಯಮಗಳನ್ನು ಪ್ರಾರಂಭಿಸಲು ಮಾನಸಿಕ ಸಿದ್ಧತೆಯನ್ನು ಮಾಡಿಕೊಂಡು ಯಶಸ್ವಿ ಉದ್ಯಮಶೀಲರ ಗುಣಲಕ್ಷಣಗಳನ್ನು ಮುಖ್ಯವಾಗಿ ಅಳವಡಿಕೊಳ್ಳುವ ಬಗ್ಗೆ ಆಟ ಮತ್ತು ಚಟುವಟಿಕೆಗಳ ಮುಖಾಂತರ ತರಬೇತಿ ನೀಡಲಾಗುವುದು ಎಚಿದರು.
ತರಬೇತಿ ಕಾರ್ಯಕ್ರಮದಲ್ಲಿ ಸ್ವಯಂ ಉದ್ಯಮಗಳ ಬಗ್ಗೆ ಮಾಹಿತಿ, ಉದ್ಯಮಶೀಲತೆ, ಯಶಸ್ವಿ ಉದ್ಯಮಶೀಲರ ಗುಣಲಕ್ಷಣಗಳು, ನಾಯಕತ್ವದ ಗುಣಲಕ್ಷಣಗಳು, ಉದ್ಯಮವನ್ನು ಆಯ್ಕೆ ಮಾಡುವ ವಿಧಾನ, ವ್ಯಾಪಾರೋದ್ಯಮಗಳ ಅವಕಾಶಗಳು, ಉದ್ಯಮಗಳನ್ನು ಪ್ರಾರಂಭಿಸುವ ಹಂತಗಳು, ಸ್ವಯಂ ಉದ್ಯೋಗಕ್ಕೆ ಇರುವ ಸರ್ಕಾರದ ಯೋಜನೆಗಳು, ಬ್ಯಾಂಕ್ ವ್ಯವಹಾರ ಮಾಡುವ ಬಗ್ಗೆ, ಸಾಲ ಮತ್ತು ಹಣಕಾಸು ಮತ್ತು ಹಣಕಾಸೇತರ ಸೌಲಭ್ಯಗಳ ಬಗ್ಗೆ, ಲೆಕ್ಕ ಪತ್ರ ನಿರ್ವಹಣೆ, ಯೋಜನಾ ವರದಿ ತಯಾರಿಕೆ, ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವಲ್ಲಿ ಸಹಾಯ ನೀಡುವದು ಹಾಗೂ ಈಗಾಗಲೇ ಸಿಡಾಕ್ ಮುಖಾಂತರ ತರಬೇತಿ ಪಡೆದು ಉದ್ಯಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವ ಉದ್ಯಮಶೀಲರ ಅನುಭವ ಹಂಚಿಕೆ ಮತ್ತು ಸಂಬAಧಪಟ್ಟ ಇತ್ಯಾದಿ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ, ಇಲಾಖೆ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳಿಂದ ಉಪನ್ಯಾಸ ಅಥವಾ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಖಾದಿ ಗ್ರಾಮೋದ್ಯೋಗಾಧಿಕಾರಿ ರಾಯಣ್ಣ ಕೆ., ಅವರು ಮಾತನಾಡಿ, ಮನುಷ್ಯರಲ್ಲಿ ಎರಡು ಗುಣಗಳಿರುತ್ತವೆ. ಅದರಲ್ಲಿ ಸಕಾರಾತ್ಮಕ ಗುಣ ಮತ್ತು ನಕಾರಾತ್ಮಕ ಗುಣ ಇರುತ್ತವೆ, ನಾವು ಸಕರಾತ್ಮಕ ಗುಣವನ್ನು ಅಳವಡಿಸಿಕೊಂಡು ಆತ್ಮ ವಿಶ್ವಾದಿಂದ ಉದ್ಯಮಗಳನ್ನು ಪ್ರಾರಂಭಿಸಿದಲ್ಲಿ ಯಶಸ್ವಿಯಾಗಲು ಸಾಧ್ಯವಿದೆ. ಹಾಗೂ ಸ್ವಯಂ ಉದ್ಯಮಗಳನ್ನು ಪ್ರಾರಂಭಿಸಲು ಸರ್ಕಾರದ ಇಲಾಖೆಯಲ್ಲಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲ್ಭೆಜು ಉಪನ್ಯಾಸಕರಾದ ರವಿಕುಮಾರ, ಡೇ-ನಲ್ಮ್ಭಿಯಾನ ವ್ಯವಸ್ಥಾಪಕರಾದ ಸುರೇಶ, ಸಂಪನ್ಮೂಲ ವ್ಯಕ್ತಿಗಳಾದ ಮನೋಹರ, ಮೌನೇಶ, ರಸೂಲ್ ಸಾಬ್, ತರಬೇತಿ ಅಧಿಕಾರಿ ನಾಗರಾಜ ಕೆ., ಕುಮಾರಿ ಶಾಂತ, ಶಿಬಿರಾರ್ಥಿಗಳಾದ ಸಿದ್ದಮ್ಮ ಮತ್ತು ಕಾವ್ಯಶ್ರೀ ಪ್ರಾರ್ಥನೆ ನೆರವೇರಿಸಿದರು. ತರಬೇತಿಗೆ 55 ಅಭ್ಯರ್ಥಿಗಳು ಹಾಜರಿದ್ದರು.