Breaking News

ಎರಡು ತಿಂಗಳ ಅನಾಥ ಮಗುವನ್ನು ರಕ್ಷಿಸಿ ನಿಯಮಾನುಸಾರ ಇಲಾಖೆಗೆ ಒಪ್ಪಿಸಿದ ಕಾರುಣ್ಯಾಶ್ರಮ.

Karunyashram rescued a two-month-old orphan and handed it over to the department as per rules.

ಜಾಹೀರಾತು

ಸಿಂಧನೂರು ಆ 18- ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ಆಶ್ರಮದ ಮುಂಭಾಗದಲ್ಲಿ ಅನಾಮಧೇಯ ಮಗು ಪತ್ತೆಯಾಗಿತ್ತು. ಆ ಮಗುವನ್ನು ಆಶ್ರಮದ ಸಿಬ್ಬಂದಿಗಳು ಆ ಮಗುವಿನ ಅನಾರೋಗ್ಯ ಸ್ಥಿತಿಯನ್ನು ಕಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸಿಂಧನೂರಿನ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರ ಮುಖಾಂತರ ಕರ್ನಾಟಕ ಸರ್ಕಾರದ ಮಕ್ಕಳ ರಕ್ಷಣಾ ನಿರ್ದೇಶನಾಲಯ ಸರ್ಕಾರಿ ವಿಶೇಷ ದತ್ತು ಸಂಸ್ಥೆ ರಾಯಚೂರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಆಶ್ರಮದ ಆಡಳಿತಾಧಿಕಾರಿ ಡಾ. ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ. ನಮ್ಮ ಕಾರುಣ್ಯ ಆಶ್ರಮವು ಬರೀ ವೃದ್ಧಾಶ್ರಮ ನಡೆಸುವುದಲ್ಲದೆ ಅದೆಷ್ಟೋ ನೊಂದ ಜೀವಿಗಳ ನಾಡಿ ಮಿಡಿತವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ನ ಅಶೋಕ ನಲ್ಲ ಹಾಗೂ ಜೀವಸ್ಪಂದನಾ ಚಾರಿಟೇಬಲ್ ಟ್ರಸ್ಟ್ ನ ಅವಿನಾಶ ದೇಶಪಾಂಡೆ ವನಸಿರಿ ಫೌಂಡೇಶನ್ ಅಮರೇಗೌಡ ಮಲ್ಲಾಪುರ ಇವರುಗಳ ಜೊತೆಗೂಡಿ ಈ ಮಗುವನ್ನು ರಕ್ಷಿಸಿದೆವು. .ಈ ಮಗುವಿನ ರಕ್ಷಣೆಯಲ್ಲಿ ಹಲವಾರು ಹೋರಾಟಗಾರರು ಸಂಘ ಸಂಘಟನೆಗಳು ನಮಗೆ ನೀಡಿರುವ ಸಹಾಯ ಸಹಕಾರಕ್ಕೆ ಇದೆ. ಎರಡು ತಿಂಗಳುಗಳ ಮಗು ಈ ರೀತಿ ಅನಾಥ- “ವಾಗಿ ನಮ್ಮ ಆಶ್ರಮದಲ್ಲಿ ಇದ್ದಂತಹ ದಿನಗಳನ್ನು ಮರೆಯಲಾಗುತ್ತಿಲ್ಲ ಆದರೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶ ವ್ಯಕ್ತಿತ್ವವನ್ನು
ನಾವೆಲ್ಲರೂ ಮೈಗೂಡಿಸಿಕೊಂಡು. ಸಂವಿಧಾನಾತ್ಮಕವಾದ ಕಾನೂನನ್ನು ಪಾಲಿಸುತ್ತಿದ್ದೇವೆ ಎನ್ನುವ ಆತ್ಮತೃಪ್ತಿ ನಮ್ಮೆಲ್ಲರಿಗಿದೆ ಎಂದರು.

ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾ- ರಿಗಳ ಕಾರ್ಯಾಲಯದ ಹಿರಿಯ ಮೇಲ್ವಿಚಾರಕರಾದ ರೇಣುಕಾ ಮಡಿವಾಳ, ಮಕ್ಕಳ ರಕ್ಷಣೆ ನಿರ್ದೇಶನಾಲಯದ ಶಿಲ್ಪಾ, ಸಿಬ್ಬಂದಿಗಳಾದ ಸುನಿತಾ, ರಜಿಯಾ, ಗುರುರಾಜ ಮುಕ್ಕುಂದಾ,ಶರಣಮ್ಮ, ಮರಿಯಪ್ಪ ಅನೇಕರು ಉಪಸ್ಥಿತರಿದ್ದರು.

About Mallikarjun

Check Also

ಮಂಗಳೂರು- ಕಿನ್ನಾಳ ರಸ್ತೆಯಲ್ಲಿ ಅಟೋ ಪಲ್ಟಿ : ಮಹಿಳೆಯರ ಕೈ ಕಾಲುಗಳಿಗೆ ಗಂಭೀರ ಗಾಯ,,

Auto overturns on Mangalore-Kinnal road: Women seriously injured ವರದಿ : ಪಂಚಯ್ಯ ಹಿರೇಮಠ, ಕೊಪ್ಪಳ : ಕುಕನೂರು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.