
Auto overturns on Mangalore-Kinnal road: Women seriously injured
ವರದಿ : ಪಂಚಯ್ಯ ಹಿರೇಮಠ,
ಕೊಪ್ಪಳ : ಕುಕನೂರು ತಾಲೂಕಿನ ಚಾಮಲಾಪೂರ ಮಹಿಳೆಯರು ( ತ್ರಿ ಚಕ್ರ) ವಾಹನ ಅಟೋದಲ್ಲಿ ಗುರುವಾರದಂದು ಬೆಳಗ್ಗೆ 8 ಗಂಟೆಗೆ ಕದ್ರಳ್ಳಿಯ ಮೆಣಸಿನಕಾಯಿ ಪ್ಲಾಟ್ ಗೆ ಕೆಲಸಕ್ಕೆಂದು ಹೋಗುವ ಮಾರ್ಗದ ಮಂಗಳೂರು- ಕಿನ್ನಾಳ ರಸ್ತೆ ಮಧ್ಯೆ ಅಟೋ ಪಲ್ಟಿಯಾಗಿದೆ.

ಅಟೋ ಚಾಲಕನ ನಿರ್ಲಕ್ಷ್ಯತೆಯೇ ಈ ಘಟನೆಗೆ ಕಾರಣವಾಗಿದ್ದು, ಚಾಲಕನು ಚಾಮಲಾಪೂರದವನು ಎಂದು ತಿಳಿದು ಬಂದಿದೆ.
ಅಟೋದಲ್ಲಿ ಪ್ರಯಾಣಿಸುತ್ತಿದ್ದು 13 ಜನ ಮಹಿಳೆಯರು ಗಾಯಗೊಂಡಿದ್ದು, ಸಧ್ಯ ಗಾಯಾಳುಗಳು ಜಿಲ್ಲಾಸ್ಪತ್ರೆ, ಹಾಗೂ ಕೆಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಬೇವೂರ ಠಾಣೆಯ ಪೋಲಿಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದು, ಈ ಪ್ರಕರಣ ಕುರಿತು ಇಲ್ಲಿಯವರೆಗೆ ಯಾರು ದೂರು ನೀಡದ ಹಿನ್ನೆಲೆ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
Kalyanasiri Kannada News Live 24×7 | News Karnataka
