A grand welcome to the Jyoti Rath Yatra of the 87th All India Kannada Literary Conference

ಸಿಂಧನೂರು: ಅ 18 ಮಂಡ್ಯ ಜಿಲ್ಲೆಯಲ್ಲಿ ನಡೆಯುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಜನರಲ್ಲಿ ಜಾಗೃತಿ, ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ‘ಕನ್ನಡ ಜ್ಯೋತಿ ರಥ ಯಾತ್ರೆ’ಗೆ ಶುಕ್ರವಾರದಂದು ಸಿಂಧನೂರು ನಗರದಲ್ಲಿ ಭರ್ಜರಿ ಸಂಭ್ರಮದೊಂದಿಗೆ ಸ್ವಾಗತಿಸಲಾಯಿತು.

ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಂಗವಾಗಿ ಸಿಂಧನೂರಿಗೆ ಆಗಮಿಸಿದ ಸಮ್ಮೇಳನ ಜ್ಯೋತಿ ಯಾತ್ರೆಗೆ ತಾಲುಕಾಕಸಾಪ ಮತ್ತು ಕನ್ನಡಪರ ಸಂಘಟನೆಗಳು ಹಾಗೂ ತಾಲುಕಾ ಆಡಳಿತ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಆಗಮಿಸಿದ ಜ್ಯೋತಿ ಯಾತ್ರೆ ನಗರದ ಪ್ರಮುಖ ರಸ್ತೆಗಳ ಮುಖಾಂತರ ಭವ್ಯ ಮೇರವಣಿಗೆ ನಡೆಯಿತು, ಈ ಜ್ಯೋತಿ ಮೇರವಣಿಗೆಯಲ್ಲಿ ತಹಿಸಲ್ದಾರರಾದ ಅರುಣ್ ಎಚ್ ದೇಸಾಯಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ,ನಗರಸಭೆ ಪೌರಾಯುಕ್ತರಾದ ಮಂಜುನಾಥ ಗುಂಡೂರ್, ಶಿಶು ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಲಿಂಗನಗೌಡ, ಚಂದ್ರಶೇಖರ್ ಹಿರೇಮಠ, ವೀರೇಶ್ ಗೋನ್ವಾರ್, ಹುಸೇನಪ್ಪ ಅಮರಪುರ್, ಶಿವನಗೌಡ ಗೊರೆಬಾಳ್,
ತಾಲುಕಾ ಕಸಾಪ ಅಧ್ಯಕ್ಷರಾದ ಹಂಪಯ್ಯ ಸ್ವಾಮಿ ಹಿರೇಮಠ, ಕರವೇ ಜಿಲ್ಲಾಧ್ಯಕ್ಷರಾದ ಗಂಗಣ್ಣ ಡಿಶ್, ತಾಲೂಕಾಧ್ಯಕ್ಷ ಲಕ್ಷ್ಮಣ್ ಭೋವಿ, ಲಕ್ಷ್ಮಿ ಪತ್ತಾರ, ಕರವೇ (ಶಿವರಾಮೇ ಗೌಡ ಬಣ) ತಾಲೂಕ ಅಧ್ಯಕ್ಷ ಸುರೇಶ ಗೊಬ್ಬರಕಲ್,ಸೇರಿದಂತೆ ಅನೆಕ ಗಣ್ಯರು ಹಿರಿಯರು ಕಸಾಪ ಅಭಿಮಾನಿಗಳು ಕನ್ನಡಪರ ಸಂಘಟನೆಗಳ ಮುಖಂಡರು ಅಂಗನವಾಡಿ ಕಾರ್ಯಕರ್ತರು ಪಾಲ್ಗೊಂಡಿದ್ದರು.