Breaking News

ಶಿಗೇಹುಣ್ಣಿಮೆ:ಮಹಿಳೆಯರಿಂದ ತುಂಬಿದ ಬಸ್ ನಿಲ್ದಾಣ-ವರದಾನವಾದ ರಾಜ್ಯಸರಕಾರದಯೋಜನೆಗಳು.

Shigehunnime: Bus stand full of women – state government projects a boon

ಜಾಹೀರಾತು

ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ರಾಜ್ಯ ಸರಕಾರ ಮಹಿಳೆಯರ ಸಂಚಾರಕ್ಕಾಗಿ ಶಕ್ತಿ ಯೋಜನೆಯಡಿಯಲ್ಲಿ ಉಚಿತ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿದ್ದು ಇಂದು ಗುರುವಾರ ಸಿಗೇಹುಣ್ಣಿಮೆ ನಿಮಿತ್ತ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಂಡರು.

ಇನ್ನೂ ಈ ಶಕ್ತಿ ಯೋಜನೆ ಕೇಲವೊಂದಿಷ್ಟು ಮಹಿಳೆಯರಿಗೆ ವರದಾನವಾದರೇ ಇನ್ನೂ ಕೆಲವು ಮಹಿಳೆಯರಿಗೆ ಪುಣ್ಯ ಕ್ಷೇತ್ರಗಳ ದರ್ಶನಗಳಿಗೆ ರಾಜ್ಯ ಸರಕಾರ ನೀಡಿದ ವರವಾಗಿ ಪರಿಣಮಿಸಿದೆ.

ಈ ಯೋಜನೆಯಡಿ ಪ್ರತಿ ದಿನ ನೂರಾರು ದಿನಗೂಲಿ ಕಾರ್ಮಿಕರು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರಿಗೆ ಬರುವ ಸಂಬಳದಿಂದ ಇಂದಿನ ದುಬಾರಿ ಕಾಲದಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟ ಸಾಧ್ಯವಾಗಿತ್ತು.

ಈ ಯೋಜನೆ ಪ್ರಾರಂಭಗೊಂಡು ಸುಮಾರು ಎರಡು ವರ್ಷಗಳು ಗತಿಸುವ ಹಂತದಲ್ಲಿ ನೂರಾರು ಮಹಿಳೆಯರು ಉಚಿತ ಬಸ್ ಸೌಲಭ್ಯ ಬಳಸಿ, ಉಳಿತಾಯದ ಹಣದಲ್ಲಿ ತಮ್ಮ ಹಲವಾರು ಸಂಕಷ್ಟಗಳನ್ನು ಪರಿಹರಿಸಿಕೊಳ್ಳಲು ಮುಂದಾಗಿದ್ದಾರೆ.

ಆದರೆ ಈ ಉಚಿತ ಪ್ರಯಾಣ ಕೆಲವರಿಗೆ ವರದಾನವಾದರೇ ಇನ್ನೂ ಕೆಲವರು ಸುಖಾ ಸುಮ್ಮನೆ ಸಂಚರಿಸುತ್ತಾರೆ. ಇದರಿಂದ ದೂರದ ಸ್ಥಳಗಳಿಗೆ ಪ್ರಯಾಣಿಸಲು ವಾಹನಗಳಲ್ಲಿ ಆಸನಗಳು ದೊರೆಯದೇ ಫಜೀತಿಗೆ ಸಿಲುಕುವಂತಾದ ಪ್ರಸಂಗಗಳು ಕೂಡಾ ಜರುಗಿವೆ. ಜೊತೆಗೆ ಮಹಿಳೆಯರು ಜುಟ್ಟು ಹಿಡಿದು ಹೊಡೆದಾಡಿದ ಸನ್ನಿವೇಶಗಳು ನಡೆದಿವೆ ಎಂದು ಪ್ರಯಾಣಿಕರು ಆರೋಪಿಸಿದರು.

ಶಕ್ತಿಯೋಜನೆಯೊಂದೆ ಮಹಿಳೆಯರಿಗೆ ವರದಾನವಾಗದೇ ಗೃಹಲಕ್ಷ್ಮೀ ಯೋಜನೆಯು ಸಹ ಸಾಕಷ್ಟು ಮಹಿಳೆಯರ ಪಾಲಿನ ಕಾಮದೇನುವಾಗಿದೆ.

ಇನ್ನೂ ವೃದ್ದ ದಂಪತಿಗಳಿದ್ದವರಿಗೆ ಮಕ್ಕಳಿಂದ ದೂರ ಉಳಿದವರು, ಯಾರು ಇಲ್ಲದ ಅನಾಥ ವೃದ್ದರಿಗೆ ಒಂದೊತ್ತಿನ ಆಹಾರಕ್ಕೆ, ಆಸ್ಪತ್ರೆಗೆ ತುಂಬಾ ಅನೂಕೂಲವಾಗಿದೆ.

ಗೃಹಲಕ್ಷ್ಮೀ ಯೋಜನೆಯಡಿ ಹಲವಾರು ಬಡ ಕುಟುಂಬಗಳ ವಿದ್ಯಾರ್ಥಿಗಳ ತಾಯಂದಿರು ತಮ್ಮ ಮಕ್ಕಳ ವ್ಯಾಸಾಂಗಕ್ಕೆ ಇದೇ ಹಣವನ್ನು ವಿನಿಯೋಗಿಸಿ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹಾಗೂ ಇದಲ್ಲದೇ ರಾಜ್ಯದಲ್ಲಿ ಮಹಿಳೆಯೊಬ್ಬರೂ ಗ್ರಂಥಾಲಯ ನಿರ್ಮಿಸಿದ್ದು, ಕುಕನೂರು ತಾಲೂಕಿನಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಗ್ರಾಮದ ಪ್ರತಿಯೊಬ್ಬ ಮಹಿಳೆಯರು ತಮ್ಮ ಹಣ ನೀಡಿದ್ದು, ಮಗನಿಗೆ ಹೊಸ ದ್ವೀಚಕ್ರ ವಾಹನ ಕೊಡಿಸಿದ್ದು ಹೀಗೆ ಸಿದ್ರಾಮಯ್ಯ ನೇತೃತ್ವದ ಸರಕಾರ ಹಲವಾರು ಜನಪರ ಯೋಜನೆಗಳು ರಾಜ್ಯದ ಜನತೆಗೆ ಅನೂಕೂಲ ಕಲ್ಪಿಸಿದ್ದಂತು ಸತ್ಯ.

ಪ್ರಜ್ಞಾವಂತರ ಅಭಿಪ್ರಾಯ : ಸರಕಾರ ಇಂತಹ ಯೋಜನೆಗಳುನ್ನು ರೂಪಿಸುವ ಮೊದಲು ಅದಕ್ಕೆ ಕೇಲವೊಂದಿಷ್ಟು ನಿಯಮಗಳನ್ನು ಪಾಲಿಸುವುದು ಒಳ್ಳೆಯದು. ನಿಜವಾದ ಬಡ ಕುಟುಂಬಗಳಿಗೆ ಸರಕಾರದ ಯೋಜನೆಗಳು ಸಮರ್ಪಕವಾಗಿ ಮುಟ್ಟಿಸಲು ಹಾಗೂ ಆಯ್ಕೆಯನ್ನು ಮಾಡಿ ಜಾರಿಗೊಳಿಸಲು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ನಿಜವಾದ ಬಡ ಕುಟುಂಬಗಳನ್ನು ಪರಿಶೀಲಿಸಿ ಅವರಿಗೆ ಸರಕಾರದ ಯೋಜನೆಗಳನ್ನು ಮುಟ್ಟಿಸುವಲ್ಲಿ ಮುಂದಾಗಬೇಕು.

ರಾಜ್ಯದ ಎಲ್ಲಾ ಜನರಿಗೆ ಈ ಸೌಲಭ್ಯಗಳನ್ನು ಒದಗಿಸುವದರಿಂದ ಉಳ್ಳವರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎನ್ನುವುದು ಇನ್ನೊಂದೆಡೆ ಆರೋಪವಾಗಿದೆ. ನಿಜವಾದ ಬಡ ಪಲಾನುಭವಿಗಳು ಇಂತಹ ಯೋಜನೆಗಳಿಂದ ವಂಚಿತರಾಗದೇ ಬಡವರಿಗೆ ಮಾತ್ರ ಸರಕಾರ ಯೋಜನೆಗಳನ್ನು ರೂಪಿಸಿದಾಗ ಮಾತ್ರ ಸರಕಾರಕ್ಕೆ ಹೊರೆ ಕಡಿಮೆಯಾಗಲು ಸಾಧ್ಯವಾಗುತ್ತದೆ.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.