Daffodils College owner Lakshmi Narayana. Although a complaint was filed to file a case of caste abuse, the complaint was hesitated




ಸಿಂಧನೂರು ಅ.17 ನಗರದ ಡೆಫೊಡಿಲ್ಸ್ ಕಾಲೇಜು ಮಾಲಿಕ ಲಕ್ಷ್ಮೀ ನಾರಾಯಣ ತಮ್ಮ ಕಾಲೇಜಿನಲ್ಲಿ ವಿದ್ಯಾಭ್ಯಾಸಗೈಯುತ್ತಿದ್ದ ವಿದ್ಯಾರ್ಥಿ ತಂದೆಗೆ ಅವಾಚ್ಯವಾಗಿ ಜಾತಿ ನಿಂದನೆ ಮಾಡಿದ್ದು ಆತನ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸುವಂತೆ ದೂರು ಸಲ್ಲಿಸಿದರೂ, ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆಂದು ದೂರುದಾರ ಹನುಮಂತ ಕವಿತಾಳ ಜಿಲ್ಲಾಧಿಕಾರಿ ನಿತೀಶ್ ಕೆ ಅವರಿಗೆ ಮನವಿ ಮಾಡಿಕೊಂಡರು.
ಇಂದು ನಗರಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ನೀತಿಶ್ ಕೆ ಅವರಿಗೆ ಸರ್ಕ್ಯೂಟ್ ಹೌಸ್ ನಲ್ಲಿ ಮನವಿ ಸಲ್ಲಿಸಿದರು. ಹನುಮಂತ ತಂ ಅಮರಪ್ಪ ವ.43 ಜಾ.ಮಾದಿಗ ಇದ್ದು ನಗರದ ಹೊರ ವಲಯದಲ್ಲಿರುವ ಡೆಫೊಡಿಲ್ಸ್ ಕಾಲೇಜಿನಲ್ಲಿ ದೂರುದಾರನ ಮಗ ವಿಕಾಸ ಪಿಯುಸಿ ವ್ಯಾಸಂಗ ಮುಗಿಸಿದ್ದು ಕಾಲೇಜಿನ ಅತಿಯಾದ ಶುಲ್ಕದ ಹೊರೆಯಿಂದ ರಿಯಾಯತಿ ಮಾಡುವಂತೆ ವಿನಂತಿಸಿದಾಗ, ಆಗುವುದಿಲ್ಲ ಎಂದು ಮಾತಿಗೆ ಮಾತು ಬೆಳೆದು ಸಂಸ್ಥೆಯ ಮಾಲಿಕ ಲಕ್ಷ್ಮೀ ನಾರಾಯಣ ‘ ಲೇ ಮಾದಿಗ ಸೂಳೆ ಮಗನೆ’ ಎಂದು ನಿಂದಿಸಿ ಇನ್ನೊಂದು ಸಲ ಬಂದರೆ ಏನು ಮಾಡುತ್ತೆನೆ ನೋಡು ಎಂದು ಗದರಿಸಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರು ದಾಖಲಿಸುವಂತೆ ಅಕ್ಟೋಬರ್ 5 ರಂದು ದೂರೂ ಸಲ್ಲಿಸಿದಾಗ್ಯೂ ಇಲ್ಲಿಯವರೆಗೂ ದೂರು ದಾಖಲಿಸಿಲ್ಲ ಕೊನೆಗೆ ಅ.7 ರಂದು ಪೋಲಿಸ್ ಉಪವಿಭಾಗ ಅಧಿಕಾರಿ ಬಾಳಪ್ಪ ತಳವಾರ ಅವರಿಗೂ ಘಟನೆ ವಿವಿರ ತಿಳಿಸಿದರೂ ಇಂದಿಗೆ ಹತ್ತು ದಿನಗಳಾಗಿದೆ ಪ್ರಕರಣ ದಾಖಲಾಗಿಲ್ಲ .ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥನಿಗೆ ಶಿಕ್ಷೆ ಕೊಟ್ಟು ನ್ಯಾಯ ಒದಗಿಸಬೇಕು ಎಂದು ದೂರುದಾರ ಪತ್ರಿಕೆಗೆ ತಿಳಿಸಿದರು.