Breaking News

ಗುಡೇಕೋಟೆ ಬೆಟ್ಟದ ಮಧ್ಯೆ ಜಲವೈಭವ: ಕೈ ಬೀಸಿ ಕರೆಯುತ್ತಿದೆ ಮಿನಿ ಫಾಲ್ಸ್

Water splendor in the midst of Gudekote Hill: Mini Falls beckons

ಜಾಹೀರಾತು

ವರದಿ: ನಾಗರಹುಣಸೆ ದುರುಗೇಶ್

ಗುಡೇಕೋಟೆ: ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ವರುಣನ ಆರ್ಭಟದಿಂದ ಕೆರೆ ಕಟ್ಟೆಗಳು ಮೈತುಂಬಿ ಒಂದು ಕಡೆಗೆ ಕಣ್ಣಿಗೆ ತಂಪು ಹಾಗೂ ಕಿವಿಗೆ ಇಂಪು ಮೂಡಿಸುವ ಕಿರುಜಲಪಾತದ ವೈಭವ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ. ಬೆಟ್ಟ ಬಂಡೆಗಳ ಮೇಲಿಂದ ಸುರಿಯುವ ನೀರಿಗೆ ಮೈಯೊಡ್ಡಿ ಸುಮಧುರ ಅನುಭವ ಪಡೆಯುತ್ತಿದ್ದಾರೆ ನೂರಾರು ಜನರು. ಸಂಗೀತದ ಅಲೆಯಿರುವ, ಝುಳುಝುಳು ಹರಿಯುವ, ಧುಮ್ಮಿಕ್ಕಿ ಬರುವ ನೀರನ್ನು ಕಂಡು ಈಗ ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಬೆಟ್ಟದ ಬಂಡೆ ಗುಂಡುಗಳ ಮಧ್ಯೆ ಜಲವೈಭವ ಎಲ್ಲರನ್ನು ಸೆಳೆಯುತ್ತಿದ್ದು ಜನರು ಪುಲ್ ಮೋಜು ಮಸ್ತಿ ಮಾಡುತ್ತಿದ್ದಾರೆ.

ಬೆಟ್ಟದ ಬಂಡೆಗಳ ಮಧ್ಯೆ ಸೀಳಿಕೊಂಡು ಬೋರ್ಗರೆಯುತ್ತಿರುವ ಜಲಧಾರೆ. ತಕಥೈ ತಕಥೈ ಎಂದು ಎತ್ತರದಿಂದ ಬೀಳುವ ನೀರಿನ ನರ್ತನ. ದುಮ್ಮಿಕ್ಕುವ ಮಿನಿ ವಾಟರ್ ಫಾಲ್ಸ್ ಗೆ ಮೈಯೊಡ್ಡಿ ಕೇಕೆ ಹಾಕಿ ಸಂಭ್ರಮಿಸುತ್ತಿರುವ ಯುವಕರು, ಯುವತಿಯರು. ಹೌದು, ಇದು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆಯಿಂದ ಹಾನಗಲ್ ಮಾರ್ಗವಾಗಿ 5 ಕಿಲೋಮೀಟರ್ ಕ್ರಮಿಸಿದರೆ ಎಡಭಾಗಕ್ಕೆ ಕಾಡಿನ ಸುತ್ತ ಮುತ್ತ ಗುಡ್ಡಗಳ ನಡುವೆ ಸಿಗುವ ಸ್ವರ್ಗದ ಚಿಲುಮೆ ಈ ಚೆಕ್ಕೆಮಂಡಿ ಮಿನಿ ವಾಟರ್ ಪಾಲ್ಸ್, ಇದನ್ನು ಈ ಭಾಗದಲ್ಲಿ ಸನ್ಯಾಸಪ್ಪನ ಕೆರೆ ಅಂತ ಕೂಡ ಕರೆಯುತ್ತಾರೆ. ಕೆರೆ ಕೋಡಿ ಬಿದ್ದ ಕಾರಣ ಎತ್ತರದ ಗುಂಡು ಬಂಡೆಯಿಂದ ಬೀಳುವ ಈ ಕಿರುಜಲಪಾತದ ವೈಭವ ಜೋಗ ಜಲಪಾತ,

ಗೋಕಾಕ್ ಪಾಲ್ಸ್ ಗಿಂತ ತಾನೇನು ಕಡಿಮೆ ಎನ್ನುವಂತೆ ನೃತ್ಯಗೈಯುತ್ತಿದೆ. ಸದ್ಯ ಜನರನ್ನು ಕೈ ಮಾಡಿ ಕರೆಯುತ್ತಿದೆ. ಕರಡಿದಾಮ ಗುಡೇಕೋಟೆ ಗ್ರಾಮಕ್ಕೆ ಹೊಂದಿಕೊಂಡ ಬೆಟ್ಟದ ಬಂಡೆಗಳ ನಡುವೆ ಈಗ ಧುಮ್ಮಿಕ್ಕಿ ಹರಿಯುವ ವಾಟರ್ ಫಾಲ್ಸ್ ನ ಕಲರವ ನಾದನಿನಾದ ಎಲ್ಲರನ್ನು ಆಕರ್ಷಿಸುತ್ತಿದೆ.

ವೀಕೆಂಡ್‌ನಲ್ಲಿ ಜಲಧಾರೆ ವೀಕ್ಷಣೆಗೆ ಬರುವವರ ಸಂಖ್ಯೆ ಹೆಚ್ಚಳ ಮಿಂದೇಳುತ್ತಾ ಹರ್ಷಪಡುತ್ತಿರುವ ಪ್ರವಾಸಿಗರು
ಸುಮಾರು ಎಂಟರಿಂದ ಹತ್ತು ಅಡಿ ಎತ್ತರದಿಂದ ಬೀಳುವ ನೀರನ್ನು ವೀಕ್ಷಿಸಲು ಯುವಕರು, ಮಹಿಳೆಯರು, ಕಾಲೇಜ್ ವಿದ್ಯಾರ್ಥಿಗಳು ತಂಡೋಪತಂಡವಾಗಿ ಬರುತ್ತಿದ್ದಾರೆ. ಬಂಡೆಕಲ್ಲುಗಳ ಮಧ್ಯದಲ್ಲಿನ ಜಲಧಾರೆಯನ್ನು ಕಂಡು ಅದರಲ್ಲಿ ಮಿಂದೇಳುತ್ತಾ ಹರ್ಷಪಡುತ್ತಿದ್ದಾರೆ. ಪ್ರತಿದಿನವೂ ಇಲ್ಲಿ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಇನ್ನು ವೀಕೆಂಡ್ ಸಂದರ್ಭದಲ್ಲಿ ಜಲಧಾರೆ ವೀಕ್ಷಣೆಗೆ ಬರುವವರ ಸಂಖ್ಯೆ ಇನ್ನು ಹೆಚ್ಚಾಗಿರುತ್ತದೆ. ಜಲಪಾತ ವೀಕ್ಷಿಸಲು ಬಹಳ ಸಂತೋಷ ಆಗಿದೆ. ಎಲ್ಲರೂ ಬಂದೂ ಎಂಜಾಯ್ ಮಾಡುತ್ತಿದ್ದಾರೆ..

ವರುಣನ ಆರ್ಭಟ ಜೋರು
ನೀರಲ್ಲಿ ಕುಣಿದು ಕುಪ್ಪಳಿಸ್ತಾರೆ ಯುವಕರು

ಈ ಸನ್ಯಾಸಪ್ಪನ ಕೆರೆ ತುಂಬಿದರೆ ಸಾಕು ಈ ವರ್ಷ ವರುಣನ ಆರ್ಭಟ ಜೋರಾಗಿದ್ದರಿಂದ ಚೆಕ್ಕೆಮಂಡಿ ಪಾಲ್ಸ್ ಅಬ್ಬರವೂ ಜೋರಾಗಿರುತ್ತದೆ. ಕಳೆದ ಒಂದು ವಾರದಿಂದ ಮಿನಿ ಜಲಪಾತ ವೀಕ್ಷಣೆಗೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.ಕೂಡ್ಲಿಗಿ, ಮೊಳಕಾಲ್ಮೂರು, ಗುಡೇಕೋಟೆ,ರಾಂಪುರ,ಸೇರಿದಂತೆ ವಿವಿಧ ಕಡೆಯಿಂದ ಸಾವಿರಾರು ಜನ ದಿನಾಲು ಈ ಮಿನಿ ಜಲಪಾತದ ಸುಂದರ ದೃಶ್ಯವನ್ನು ಸವಿಯೋಕೆ ಬರುತ್ತಾರೆ. ಜಲಪಾತ ನೋಡೋಕೆ ಹೋದರೆ ಸುಮ್ಮನೆ ಇರೋಕೆ ಮನಸ್ಸೇ ಆಗೋದಿಲ್ಲ, ಅಲ್ಲಿ ಸುರಿಯುತ್ತಿರುವ ಜಲಧಾರೆಯಲ್ಲಿ ಮಿಂದೇಳಬೇಕು ಮನಬಂದಂತೆ ಕೂಗಾಡಿ ಹರ್ಷಪಡಬೇಕೆಂಬ ಭಾವನೆ ಎಲ್ಲರಲ್ಲೂ ಮೂಡುತ್ತೆ. ಅದರಂತೆ ಜಲಪಾತ ವೀಕ್ಷಣೆಗೆ ಬಂದ ಎಲ್ಲರೂ ನೀರಲ್ಲಿ ನೆನೆದು ಸಂಭ್ರಮಪಡ್ತಾರೆ. ಯುವಕರಂತೂ ನೀರಲ್ಲಿ ಕುಣಿದು ಕುಪ್ಪಳಿಸ್ತಾರೆ.

ಈ ಸನ್ಯಾಸಪ್ಪನ ಕೆರೆ ಪ್ರವಾಸಿಗರ ಪಿಕ್ ನಿಕ್ ಸ್ಪಾಟ್

ಮನಸ್ಸಿಗೆ ಆಹ್ಲಾದ ನೀಡುವ ಸನ್ಯಾಸಪ್ಪನ ಕೆರೆಯ ಮಿನಿ ಜಲಪಾತ
ಒಟ್ಟಾರೆ ಕಣ್ಣಿಗೆ ಮುದ ನೀಡುವ ಮೈಗೆ ತಂಪು ಕೊಡುವ ಈ ವಾಟರ್ ಫಾಲ್ಸ್ ಪ್ರವಾಸಿಗರ ಪಿಕ್ ನಿಕ್ ಸ್ಪಾಟ್ ಆಗಿದೆ. ಪಾಲ್ಸ್ ನ ಸೌಂದರ್ಯ ಕಣ್ತುಂಬಿಕೊಳ್ಳಬೇಕೆಂದರೆ ಮಳೆ ಕಡಿಮೆ ಆಗುವಷ್ಟರಲ್ಲಿ ನೀವೊಂದು ಸಲ ಇಲ್ಲಿಗೆ ಬರಬಹುದು. ಪ್ರಕೃತಿ ಸೌಂದರ್ಯ, ಹಾಲುನೊರೆಯ ಜಲಪಾತ ಖಂಡಿತ ನಿಮ್ಮ ಮನಸ್ಸಿಗೆ ಆಹ್ಲಾದವನ್ನು ನೀಡುತ್ತೆ. ಈ ಫಾಲ್ಸ್ ಗೆ ಭಾನುವಾರ ಸಾಕಷ್ಟು ಜನ ಸೇರಿ ಜಲಕ್ರೀಡೆ ಆಡುತ್ತಿದ್ದಾರೆ. ಕಳೆದು ನಾಲ್ಕೈದು ದಿನಗಳಿಂದ ಈ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದರಿಂದಾಗಿ ಮಿನಿ ಫಾಲ್ಸ್ ನೀರು ಹೆಚ್ಚಿದೆ. ಅದೇ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಊರುಗಳಿಂದ ಜನರು ಮಿನಿ ಫಾಲ್ಸ್ ಗೆ ಬರಲಾರಂಭಿಸಿದ್ದಾರೆ.

About Mallikarjun

Check Also

ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಿ,ಶಿರಸ್ತೇದಾರ ರವಿಕುಮಾರ್ ನಾಯಕವಾಡಿ ಸಲಹೆ

Include the name in the voter list, Chief Ravikumar suggested ಜಿಎಚ್ ಎನ್ ಕಾಲೇಜಿನಲ್ಲಿ ಮತದಾರ ಪಟ್ಟಿಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.