State Government Employees Association Election for five years: 5 nominations submitted by high school teachers today.
ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ರಾಜ್ಯ ಸರಕಾರಿ ನೌಕರ ಸಂಘದ ನಿರ್ದೇಶಕ ಸ್ಥಾನಗಳ ಆಯ್ಕೆಗೆ ಅಕ್ಟೋಬರ್ 28 ರಂದು ಚುನಾವಣೆ ನಡೆಯಲಿದೆ ಎಂದು ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್ ಹೇಳಿದರು.
ಅವರು ಕುಕನೂರು ಪಟ್ಟಣದ ಸರಕಾರಿ ಪ್ರೌಢ ಶಾಲೆಯ ಚುನಾವಣಾ ಕೇಂದ್ರದಲ್ಲಿ ಬುಧವಾರದಂದು ರಾಜ್ಯ ಸರಕಾರಿ ನೌಕರ ಸಂಘದ ಪ್ರೌಢಶಾಲಾ ಶಿಕ್ಷಕರ ಕಾರ್ಯಕಾರಿ ಮಂಡಳಿಯಿಂದ ಚುನಾವಣೆಯ ನಾಮ ಪತ್ರ ಸಲ್ಲಿಸಿ ಮಾತನಾಡಿದರು.
2024 ರಿಂದ 29ರ ಅವಧಿಗೆ ನಡೆಯಲಿರುವ ಚುನಾವಣೆ ಇದಾಗಿದೆ, ಪ್ರೌಢ ಶಾಲಾ ವಿಭಾಗದಿಂದ ಐದು ನಾಮ ಪತ್ರಗಳು ಸಲ್ಲಿಕೆಯಾಗಿದ್ದು, ಎರಡು ನಿರ್ದೇಶಕ ಸ್ಥಾನಗಳಿಗೆ ಚುನಾವಣೆಯ ಮೂಲಕ ಆಯ್ಕೆ ನಡೆಯಲಿದೆ. ಆದ್ದರಿಂದ ಇನ್ನೂಳಿದ ಎಲ್ಲಾ ಇಲಾಖೆಯರಾಜ್ಯ ಸರಕಾರಿ ನೌಕರರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇದರಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳು ಸೇರಿ ಒಟ್ಟು 32 ನಿರ್ದೇಶಕರ ಆಯ್ಕೆ ನಂತರ ನವ್ಹೆಂಬರ್ ನಲ್ಲಿ ತಾಲೂಕಾಧ್ಯಕ್ಷ ಸ್ಥಾನಕ್ಕೆ 32 ಜನ ನಿರ್ದೇಶಕರು ಸೇರಿ ತಾಲೂಕಾಧ್ಯಕ್ಷರ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ನಂತರದಲ್ಲಿ ಚುನಾವಣಾ ಅಧಿಕಾರಿ ಬಸಪ್ಪ ತಿಮ್ಮಾಪೂರ ಮಾತನಾಡಿ, ಚುನಾವಣೆಗೆ ಸ್ಪರ್ಧಿಸುವವರು ರೂ 2ಸಾವಿರ ಠೇವಣಿಯನ್ನು ಚುನಾವಣಾಧಿಕಾರಿ ಕಚೇರಿಗೆ ಪಾವತಿಸಿ ರಸೀದಿ ಪಡೆಯಬೇಕು. 5 ವರ್ಷ ಸದಸ್ಯತ್ವ ಹೊಂದಿರುವ ನೌಕರರು ಸ್ಪರ್ಧಿಸಲು ಅರ್ಹರಾಗಿರುತ್ತಾರೆ.
ನಾಮ ಪತ್ರಕ್ಕೆ 5 ವರ್ಷದ ಸದಸ್ಯತ್ವ ಇರುವ ಸದಸ್ಯರಲ್ಲಿ ಒಬ್ಬರು ಸೂಚಕರಾಗಿ ಮತ್ತೊಬ್ಬರು ಅನುಮೋದಕರಾಗಿ ಒಬ್ಬ ಅಭ್ಯರ್ಥಿಗೆ ಮಾತ್ರ ಸಹಿ ಹಾಕಬೇಕು. ಸೂಚಕರಾಗಿ, ಅನುಮೋದಕರಾಗಿ, ಸಹಿ ಹಾಕಿದವರು ಸ್ಪರ್ಧಿಸಲು ಅವಕಾಶ ಇರುವುದಿಲ್ಲ. ಆಯಾ ಇಲಾಖೆಯ ಸದಸ್ಯರು ತಮ್ಮ ಇಲಾಖೆಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗೆ ಮಾತ್ರ ಮತದಾನ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್ ಹರ್ತಿ, ಪ್ರೌಢಶಾಲಾ ಶಿಕ್ಷಕರ ರಾಜ್ಯ ಉಪಾಧ್ಯಕ್ಷ ಜಾಕಿರ್ ಹುಸೇನ್, ತಾಲೂಕ ಅಧ್ಯಕ್ಷ ಬಸವರಾಜ್ ಮೇಟಿ, ಸುರೇಶ್ ಮಾದಿನೂರ, ಬಸವರಾಜ್ ಅಂಗಡಿ, ಶರಣಪ್ಪ ವೀರಾಪುರ, ಕಾಶಿನಾಥ ಇನ್ನು ಅನೇಕ ಶಿಕ್ಷಕರು ಇದ್ದರು.
ಒಟ್ಟಾರೇ ಚುನಾವಣಾ ಪ್ರಕ್ರಿಯೇಗಳು ತುರಿಸಿನಿಂದ ಸಾಗಿದ್ದು ಈ ಬಾರಿ ಯಾವ್ಯಾವ ಇಲಾಖೆಗಳಿಗೆ ನಿರ್ದೇಶಕ ಸ್ಥಾನಗಳು ಹಾಗೂ ಅಧ್ಯಕ್ಷ ಸ್ಥಾನ ಮುಡಿಗೇರಿಸುವರು ಕಾಯ್ದು ನೋಡಬೇಕಿದೆ.