Sports inspiration from desi games…G.Krishnamurthy
ಗುಡೇಕೋಟೆ: ದೇಸಿ ಆಟಗಳಿಂದ ದೇಹದ ಸ್ವಾಸ್ಥ್ಯ ಗಟ್ಟಿಮುಟ್ಟಾಗಿರುತ್ತದೆ ಎಂದು ಪ್ರಾದೇಶಿಕ ನಿರ್ದೇಶಕರು, ಕೇಂದ್ರೀಯ ಅಂತರ್ಜಲ ಮಂಡಳಿ(ತೆಲಂಗಾಣಾ, ಆಂದ್ರಪ್ರದೇಶ)ಜಲಶಕ್ತಿ ಮಂತ್ರಾಲಯ, ಭಾರತ ಸರ್ಕಾರ ಹೈದರಬಾದ್‌ನ ಜಿ. ಕೃಷ್ಣಮೂರ್ತಿ ಇವರು ಅಭಿಪ್ರಾಯಪಟ್ಟರು.
ಕೂಡ್ಲಿಗಿ ತಾಲೂಕಿನ ಗಂಡಬೊಮ್ಮನಹಳ್ಳಿಯ ಜಿ. ಕೃಷ್ಣಮೂರ್ತಿ ಗೆಳೆಯರ ಚಾರಿಟಬಲ್ ಟ್ರಸ್ಟ್ ನಿಂದ ಜಿಲ್ಲಾ ಮಟ್ಟದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಯುವಕರು ಸದಾ ಕ್ರೀಯಾಶೀಲತೆಯಿಂದ ಇರಬೇಕಾದರೆ, ದೇಸಿ ಆಟಗಳಲ್ಲಿ ಪಾಲ್ಗೊಳ್ಳಬೇಕು, ಇದರಿಂದ ದೇಹವು ಸದಾ ಚಟುವಟಿಕೆಯಿಂದ ಇರುಲು ಸಾಧ್ಯವಾಗುತ್ತದೆ ಎಂದರು. ಕ್ರೀಡೆಗಳಿಂದ ಪರಸ್ಪರ ಸ್ನೇಹ, ಪ್ರೀತಿ, ವಿಶ್ವಾಸಗಳಿಂದ ವೃದ್ಧಿಯಾಗಬೇಕು. ಇತರರಿಗೆ ಮಾದರಿಯಾಗುವಂತೆ ಕ್ರೀಡೆಗಳನ್ನು ಸಂಘಟಿಸುವ ಅಗತ್ಯವನ್ನು ಆಯೋಜಕರು ಅರಿಯಬೇಕು. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಂದ, ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಅನೇಕ ತಂಡಗಳು ಬಂದಿರುತ್ತವೆ. ಆಟಗಾರರನ್ನು ಗೌರವಾಧರಗಳೊಂದಿಗೆ ಬರಮಾಡಿಕೊಂಡು, ಇಲ್ಲಿನ ಜನ, ಜೀವನ, ಸಂಸ್ಕೃತಿಯನ್ನು ಅವರಿಗೂ ತಿಳಿಯುವಂತಾಗಬೇಕು. ಇದರಿಂದ ಪಟ್ಟಣ ಮತ್ತು ಹಳ್ಳಿಗಳ ಸಾಮರಾಸ್ಯ ಜೀವನ ವೃದ್ಧಿಯಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಗ್ರಾಮೀಣ ಪ್ರದೇಶದ ಯುವಕರು ದೇಸಿ ಕ್ರೀಡೆಯಾದ ಕಬ್ಬಡಿ ಆಟವನ್ನು ಪ್ರದರ್ಶಿಸುವ ಆವಕಾಶ ನಿಮ್ಮದಾಗುತ್ತದೆ ಎಂದರು. ಸಣ್ಣ, ಪುಟ್ಟ ತಪ್ಪುಗಳಿದ್ದರೆ, ಅದನ್ನು ದೊಡ್ಡದು ಮಾಡಿಕೊಂಡು ರಂಪಾಟಮಾಡುವುದು ಬದಲಾಗಬೇಕು. ಸದಾ ಕ್ರೀಡಾ ಸ್ಪೂರ್ತಿಯಿಂದ ಪ್ರತಿಯೊಬ್ಬರು ಮೆರೆಯಬೇಕು. ಇಂದಿನ ಪೀಳಿಗೆಯನ್ನು ನೋಡಿ ಅನುಸರಿಸುವಂತಾಗಬೇಕು ಎಂದು ಟಿ. ಕೃಷ್ಣಮೂರ್ತಿ ನೆರದಿರುವ ಕ್ರೀಡಾಪಟುಗಳಿಗೆ ಮನವರಿಕೆ ಮಾಡಿದರು. ಕಬ್ಬಡಿ ಪಂದ್ಯಾವಳಿ ನಡೆಯಲು ಸಹಕಾರ ನೀಡಿದ ಸಮವಸ್ತ್ರ ದಾನಿಗಳಿಗೆ, ಟ್ರೋಪಿಗಳ ಪ್ರಾಯೋಜಕರಿಗೆ, ಭೂ ದಾನಿಗಳಿಗೆ, ಗುಡೇಕೋಟೆಯ ಆರಕ್ಷಕ ಸಿಬ್ಬಂದಿ ವರ್ಗದವರಿಗೆ ನೆನಪಿನ ಕಾಣಿಕೆಯನ್ನು ನೀಡುವುದರ ಮೂಲಕ ಗೌರವಿಸಲಾಯಿತು. ಪ್ರಥಮ ಬಹುಮಾನ ೨೦,೦೦೧ ದ್ವಿತೀಯ ಬಹುಮಾನ ೧೦,೦೦೦, ತೃತೀಯ ಬಹುಮಾನ ೫೦೦೦ ಮತ್ತು ಆಕರ್ಷಕ ಟ್ರೋಫಿಯನ್ನು ಗೆದ್ದ ತಂಡಗಳಿಗೆ ಮಂಗಳವಾರ ಸಂಜೆ ವಿತರಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದರು.