MLA Raghavendra Hitnala performed Bhumi Puja.

ವರದಿ : ಪಂಚಯ್ಯ ಹಿರೇಮಠ,
ಕೊಪ್ಪಳ: ಸಿಎಂ ಸಿದ್ದರಾಮಯ್ಯ ತಮ್ಮ 40 ವರ್ಷದ ರಾಜಕೀಯ ಜೀವನದಲ್ಲಿ ಒಂದೂ ಕಪ್ಪು ಚುಕ್ಕೆ, ಭ್ರಷ್ಟಾಚಾರ ಇಲ್ಲದಂತೆ ಆಡಳಿತ ನೀಡಿದ್ದಾರೆ. ಈ ಸರಕಾರದ ಪೂರ್ಣಾವಧಿ ವರೆಗೂ ಅವರೇ ಸಿಎ ಆಗುವುದಲ್ಲದೇ, ಮುಂದಿನ ಅವಧಿಗೂ ಅವರೇ ಮುಖ್ಯಮಂತ್ರಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಗುಡಿಗೇರಿ, ಕವಲೂರು, ಮುರ್ಲಾಪುರ, ಘಟ್ಟರಡ್ಡಿಹಾಳ, ಬೆಳಗಟ್ಟಿ, ಹಟ್ಟಿ, ಹೈದರ್ ನಗರ, ಗ್ರಾಮದಲ್ಲಿ ಸುಮಾರು 48.18 ಕೋಟಿ ರು. ವೆಚ್ಚದಲ್ಲಿ
ಸಿದ್ದರಾಮಯ್ಯ ಈ ರಾಜ್ಯ ಕಂಡ ಧೀಮಂತ ನಾಯಕ, ಮುಡಾ ಹಗರಣದಲ್ಲಿ ಅವರದ್ದು ಯಾವುದೇ! ಪಾತ್ರ ಇಲ್ಲ, ವಿರೋಧ ಪಕ್ಷಗಳು ಅನಗತ್ಯವಾಗಿ ಅವರ ಹೆಸರು ಎಳೆದು ತಂದು, ರಾಜಕೀಯ ಮಾಡುತ್ತಿದ್ದಾರೆ. ಸಿಂಗಟಾಲೂರು ಏತ ನೀರಾವರಿ ಯೋಜನೆ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜತೆ ಮಾತನಾಡಿದ್ದೇನೆ. ಅನುದಾಮ ಮಂಜೂರು ಮಾಡುವ ಭರವಸೆ ನೀಡಿದ್ದಾರೆ. ಯೋಜನೆ ಡಾರಿಯಾದರೆ 16,523 ಪೆಕ್ಟರ್ ಪ್ರದೇಶ ನೀರಾವರಿ
ಆಗಲಿದೆ.ಈ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಎಲ್ಲ ರಸ್ತೆ ಅಭಿವೃದ್ಧಿ: ಈಬಾರಿ ಹೆಚ್ಚು ಮಳೆ ಆಗಿದ್ದರಿಂದ ಕೊಪ್ಪಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಸಾಕಷ್ಟು ರಸ್ತೆ ಹಾಳಾಗಿವೆ. ಹದಗೆಟ್ಟ ಎಲ್ಲ ಗ್ರಾಮೀಣ ರಸ್ತೆಗೆ ಅನುದಾನ ಮಿಸಲಿಟ್ಟು, ಅಭಿವೃದ್ಧಿ ಮಾಡುತ್ತೇನೆ. ಬಹು ದಿನಗಳ ಬೇಡಿಕೆ ಆಗಿದ್ದ ಕವಲೂರು ಬನ್ನಿಕೊಪ್ಪ ರಸ್ತೆಯನ್ನು 7.50 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಈ ರಸ್ತೆಯ ಜತೆಗೆ 3.50 ಕೋಟಿ ವೆಚ್ಚದ ಕವಲೂರು -ಘಟ್ಟರೆಡ್ಡಿಹಾಳ, 2.19 ಕೋಟಿ ರು. ವೆಚ್ಚದಲ್ಲಿ ಕಡಬೂರು ಮುರ್ಲಾಪುರ, ಹೈದರ್ ನಗರ – ಹಟ್ಟಿ -ಕಣ್ಣಾಪುದ ರಸ್ತೆ 5 ಕೋಟಿ ರು. ವೆಚ್ಚದಲ್ಲಿ ಹಾಗೂ ಗುಡುಗೇರಿ ಮಾರ್ಗವಾಗಿ ಕವಲೂರು ಬನ್ನಿಕೊಪ್ಪ ರಸ್ತೆ 2.25 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಎಲ್ಲ ಕಡೆ ಒಂದೇ ಬಾರಿಗೆ ಕೆಲಸ ಶುರುವಾಗಲಿದೆ. ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಮಾಜಿ ಸಂಸದ ಕರಡಿ ಸಂಗಣ್ಣ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಎಸ್. ಬಿ.ನಾಗರಳ್ಳಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ರೆಡ್ಡಿ ಗಲಿಬಿ, ಭರಮಪ್ಪ ಹಟ್ಟಿ ಗ್ಯಾರಂಟಿ ಅಧ್ಯಕ್ಷ ಬಾಲಚಂದ್ರನ್ ಮುನಿರಬಾದ್, ವೆಂಕನಗೌಡ ಹಿರೇಗೌಡ್ರು, ಭೀಮಣ್ಣ ಬೋಚನಹಳ್ಳಿ, ತೋಟಪ್ಪ ಸಿಂಟ, ಮುತ್ತಣ್ಣ ಕವಲೂರು, ಗುರುಬಸವರಾಜ, ಶಿವಕುಮಾರ್ ಶೆಟ್ಟರ್, ಹನುಮೇಶ ಹೊಸಳ್ಳಿ, ತೋಟಪ್ಪ ಹಟ್ಟಿ, ಡಿವೈಎಸ್ಪಿ ಮುತ್ತಣ್ಣ, ಸಿಪಿಐ ಸುರೇಶ ದೊಡ್ಡಮನಿ, ತಹಸೀಲ್ದಾರ್ ವಿಠ್ಠಲ್ ಚೌಗಲ್, ತಾಪಂ ಇಒ ದುಂಡಪ್ಪ ತುರಾದಿ, ಮಲ್ಲು ಪೂಜಾರ, ಮಹಾಂತೇಶ ಕವಲೂರು, ದೇವಪ್ಪ ಹಳ್ಳಿ, ನಜೀರ ಅಳವಂಡಿ, ಸುರೇಶ ದಾಸರೆಡ್ಡಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟನ್ ಇನ್ನಿತರರು ಇದ್ದರು.
ಕೆರೆ ತುಂಬುವ ಯೋಜನೆ ಅಡಿಗಲ್ಲು,,
ಸಿಂಗಟಾಲೂರು ಏತ ನೀರಿವರಿ ಯೋಜನೆಯಡಿ 22.18 ಕೋಟಿ ವೆಚ್ಚದಲ್ಲಿ 16 ಕೆರೆ ತುಂಬುವ ಯೋಜನೆಗೆ ಶಾಸಕ ಕೆ. ಅಡಿಗಟ್ಟು ನೆರಬೇರಿಸಿದರು. ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ಕವಲೂರು ಗ್ರಾಮದ 3 ಕೆರೆ,ಮುರ್ಲಾಪೂರ 1. ಘಟ್ಟರಡ್ಡಿ ಹಾಳ1, ಬೆಳಗಟ್ಟಿಯ 1, ಹಟ್ಟಿಯ 1, ಅಳವಂಡಿಯ 2 ಕೆರೆ, ಹಾಗೂ ಬೇಟಗೇರಿ 1 ಕೆರೆ,ಹಿರೇಸಿಂದೋಗಿ 1 ಕೆರೆ, ಕೋಳೂರು ಹಾಗೂ ಹಂದ್ರಾಳ ಕೆರೆಗಳನ್ನು ಈ ಯೋಜನೆಡಿಯಲ್ಲಿ ತುಂಬಿಸಲಾಗುವುದು ಎಂದು ತಿಳಿಸಿದರು.