Festival of Bala Devi on Gajalakshmi
ಕಲ್ಮಠದ ವತಿಯಿಂದ ನಡೆದ ಭಾವೈಕ್ಯತೆಯ ದಸರಾ ಮಹೋತ್ಸವ
ಮಾನ್ವಿ: ಪಟ್ಟಣದ ಮುಕ್ತಗುಚ್ಚ ಬೃಹನ್ಮಠ ಕಲ್ಮಠದ ವತಿಯಿಂದ ನಡೆದ ಭಾವೈಕ್ಯತೆಯ ದಸರಾ ಮಹೋತ್ಸವ ಅಂಗವಾಗಿ ನಾಡದೇವತೆ ರಜತ ಶ್ರೀ ಭುವನೇಶ್ವರಿ ಮೂರ್ತಿಯ ಮೆರವಣಿಗೆ ಹಾಗೂ ಗಜಲಕ್ಷ್ಮೀಯ ಮೇಲೆ ಬಾಲ ದೇವಿಯರ ಉತ್ಸವಕ್ಕೆ ನಿಲೋಗಲ್ಲೆ ಮಠದ ಡಾ.ಶ್ರೀ ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿ ಆರ್ಶಿವಾಚನ ನೀಡಿ ಪಟ್ಟಣದ ಮುಕ್ತಗುಚ್ಚ ಬೃಹನ್ಮಠ ಕಲ್ಮಠವು ಭಾವೈಕ್ಯತೆಯ ಮಠವಾಗಿದ್ದು ಪ್ರತಿವರ್ಷ ದಸರಾ ಹಬ್ಬದ ಅಂಗವಾಗಿ ಶ್ರೀಮಠದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಾಡದೇವತೆ ರಜತ ಶ್ರೀ ಭುವನೇಶ್ವರಿ ಮೂರ್ತಿಯ ಮೆರವಣಿಗೆ ಹಾಗೂ ಗಜಲಕ್ಷ್ಮೀಯ ಮೇಲೆ ಬಾಲ ದೇವಿಯರ ಉತ್ಸವವನ್ನು ಅದ್ದೂರಿಯಾಗಿ ನಡೆಸಿಕೊಂಡು ಬರುವ ಮೂಲಕ ಪಟ್ಟಣದಲ್ಲಿ ಸೌಹಾರ್ದತೆಯನ್ನು ಮೂಡಿಸುತ್ತ ಬಂದಿದೆ ಎಂದು ತಿಳಿಸಿದರು.
ಕಲ್ಮಠದಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾವಿರಾರು ಮಹಿಳೆಯರು ಕಳಸ ಕುಂಬವನ್ನು ಹೋತ್ತು ಮೆರವಣಿಗೆಯಲ್ಲಿ ಭಾಗವಹಿಸಿದರು. ಮೆರವಣಿಗೆಯಲ್ಲಿ ಸರ್ವಧರ್ಮಗಳ ಮಹಾನಿಯರ ಸ್ಥಾಬ್ದ ಚಿತ್ರಗಳ ಪ್ರದರ್ಶನ ನಡೆಯಿತು, ಕೋಲಾಟ,ನಂದಿಧ್ವಜ ಕುಣಿತ, ಡೊಳ್ಳು ಕುಣಿತ ಸೇರಿದಂತೆ ಜನಪದ ಕಲಾ ಪ್ರಕಾರಗಳ ಕಲಾವಿದರು ತಮ್ಮ ಕಲೆಗಳನ್ನು ಪ್ರದರ್ಶಿಸಿದರು.
ಬಿಚ್ಚಾಲಿ ಸಂಸ್ಥಾನ ಮಠದ ಗಜಲಕ್ಷ್ಮೀಯ ಮೇಲೆ ಬಾಲದೇವಿಯರ ವೇಷ ಹಾಕಿದ ಬಾಲ ಮುತೈದೆಯರು ಮೆರವಣಿಗೆಯಲ್ಲಿ ಭಾಗವಹಿಸಿದರು. ವಿಶ್ವ ಚೇತನ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿವಿಧ ದೇವತೆಗಳ ವೇಷವನ್ನು ಹಾಕಿಕೊಂಡು ಭಾಗವಹಿಸಿದರು.
ಮೆರವಣಿಗೆಯು ಕಲ್ಮಠದಿಂದ ಹೊರಾಟು ಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತಹಸೀಲ್ದಾರ್ ಕಚೇರಿ, ಬಸ್ ನಿಲ್ದಾಣ, ಬಸವವೃತ್ತ, ಡಾ.ಬಿ.ಆರ್.ಅಂಬೇಡ್ಕಾರ್ ವೃತ್ತ ಕೋನಾಪುರ ಪೇಟೆ ಟಿಪ್ಪು ಸುಲ್ತಾನ ವೃತ್ತದ ಮೂಲಕ ಮರಳಿ ಕಲ್ಮಠದ ವರೆಗೆ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಾಹಾಸ್ವಾಮಿಗಳು, ನಿಲೋಗ್ಗಲ್ ಬೃಹನ್ಮಠದ ಶ್ರೀ ಅಭಿನವ ಶಾಂತ ಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು, ಮುಸ್ಲಿಂ ಧರ್ಮಗುರು ಸೈಯಾದ್ ಸಜ್ಜದ್ ಮತವಾಲೆ, ಅರಳಹಳ್ಳಿಯ ಶ್ರೀ ಶರಣಬಸವ ದೇವರು, ಹಚ್ಚೊಳ್ಳಿ ಮುತ್ತಿನ ಪೆಂಡೆ ಮಠದ ಶ್ರೀ ರುದ್ರಮುನೀ ಸ್ವಾಮಿಗಳು ಸೇರಿದಂತೆ ಜೆ.ಡಿ,ಎಸ್.ರಾಜ್ಯ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾದ ರಾಜಾ ರಾಮಚಂದ್ರನಾಯಕ,ಗುಮ್ಮ ಬಸವರಾಜ ಸೇರಿದಂತೆ ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದರು.