Breaking News

ಆನೆಗೊಂದಿ ಸ್ವಚ್ಛ ಗ್ರಾಮಕ್ಕೆಸಹಕರಿ-ಸಿಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಹೇಳಿಕೆ

A statement by Rahul Ratnam Pandey, CEO of Anegondi Swachh Gram – CGP



ಜಾಹೀರಾತು

ಆನೆಗೊಂದಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

ಗಂಗಾವತಿ : ತಾಲೂಕಿನ ಆನೆಗೊಂದಿ ಗ್ರಾಪಂ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ, ಕಸ ವಿಂಗಡಣೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ, ಸ್ವಚ್ಛ ಗ್ರಾಮವಾಗಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನ್ಯ ರಾಹುಲ್ ರತ್ನಂ ಪಾಂಡೆಯ ಅವರು ಹೇಳಿದರು.

ತಾಲೂಕಿನ ಆನೆಗೊಂದಿ ಗ್ರಾಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಎಸ್ ಡಬ್ಲ್ಯುಎಂ ಘಟಕವನ್ನು ಗ್ರಾಮ ಪಂಚಾಯತ್ ಹಾಗೂ ಸ್ವಸಹಾಯ ಸಂಘದವರು ನಿರ್ವಹಣೆ ಮಾಡುತ್ತಾರೆ ಇದಕ್ಕೆ ಸಾಹಸ ಸಂಸ್ಥೆ ಅವರು ಸಹಕಾರ ನೀಡಬೇಕು. ಇದಕ್ಕೆ ಸಂಬಂಧಿಸಿದ ಕಾನೂನು ನಿಯಮಗಳನ್ನು ಪಾಲಿಸಿ ಗ್ರಾಪಂ ಅವರು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಸ್ವಸಹಾಯ ಸಂಘದವರು ಮನೆ ಮನೆಗೆ ತೆರಳಿ ಒಣ ಮತ್ತು ಹಸಿ ಕಸ ಸಂಗ್ರಹಿಸಬೇಕು. ಈ ಬಗ್ಗೆ ಶಾಲಾ ಮಕ್ಕಳಿಗೆ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು.

ಸ್ವಚ್ಛ ಸಂಕೀರ್ಣ ಘಟಕದ ಬಳಿ ಮೂಲಸೌಲಭ್ಯಗಳಾದ ನೀರು, ಶೌಚಾಲಯ, ಸಂಪೂರ್ಣ ಕಾಂಪೌಂಡ್ ನಿರ್ಮಾಣ ಹಾಗೂ ವಿದ್ಯುತ್ ಸಂಪರ್ಕ ಸೌಲಭ್ಯ ಒದಗಿಸಬೇಕು ಎಂದು ತಾಲೂಕು ಅನುಷ್ಠಾನ ಅಧಿಕಾರಿಗಳು ಹಾಗೂ ಗ್ರಾಪಂ ಅಧಿಕಾರಿಗಳಿಗೆ ಜಿಪಂ ಸಿಇಒ ಅವರು ನಿರ್ದೇಶನ ನೀಡಿದರು.

ಆನೆಗೊಂದಿ ಭಾಗದ ಪ್ರವಾಸಿ ಸ್ಥಳಗಳಲ್ಲಿ ಕಸದತೊಟ್ಟಿ ಅಳವಡಿಸಬೇಕು. ಕಸ ಸಂಗ್ರಹಣೆಗೆ ಬೇಕಾದ ಅಗತ್ಯ ಸಾಮಗ್ರಿಗಳ ಖರೀದಿಸಬೇಕು. ಜೊತೆಗೆ ಕಸ ಸಂಗ್ರಹಣೆಗೆ ಟ್ರ್ಯಾಕ್ಟರ್ ಖರೀದಿಸುವ ಬಗ್ಗೆ ಚರ್ಚಿಸಲಾಯಿತು. ಗ್ರಾಮದ ಸಮಸ್ಯೆಗಳ ಬಗ್ಗೆ ಗ್ರಾಪಂ ಸದಸ್ಯರು ಸಭೆಯಲ್ಲಿ ಜಿಪಂ ಸಿಇಓ ಅವರ ಗಮನಕ್ಕೆ ತಂದರು.

ಎಸ್ ಡಬ್ಲ್ಯುಎಂ ಘಟಕ ವೀಕ್ಷಣೆ : ಆನೆಗೊಂದಿ ಗ್ರಾಪಂ ವ್ಯಾಪ್ತಿಯ ಕಡೇಬಾಗಿಲು ಗ್ರಾಮದ ಹೊರ ವಲಯದಲ್ಲಿರುವ ಸ್ವಚ್ಛ ಸಂಕೀರ್ಣ (ಎಸ್ ಡಬ್ಲ್ಯುಎಂ) ಘಟಕ ಸ್ಥಳಕ್ಕೆ ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಜವಂಶಸ್ಥರಾದ ರತ್ನಶ್ರೀ ರಾಯಲು, ಶ್ರೀಕೃಷ್ಣದೇವರಾಯ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ, ಪಿಆರ್ ಡಿ ಎಇಇ ವಿಜಯಕುಮಾರ್, ಸಿಡಿಪಿಓ ಜಯಶ್ರೀ, ಹವಮಾನ ಇಲಾಖೆ ಅಧೀಕ್ಷಕರಾದ ಸುರೇಂದ್ರ, ಪುರಾತತ್ವವಿಧರಾದ ಧನಂಜಯ್, ಗ್ರಾಪಂ ಪಿಡಿಓ ಕೃಷ್ಣಪ್ಪ, ಗ್ರಾಪಂ ಅಧ್ಯಕ್ಷರಾದ ಶ್ರೀಮತಿ ಕೆ.ಮಹಾದೇವಿ, ಸಾಹಸ ಸಂಸ್ಥೆಯ ಶ್ರೀ ಮೇಶಾಕ್ ರಾಜ್, ಗ್ರಾಪಂ ಸರ್ವ ಸದಸ್ಯರು, ನರೇಗಾ ಸಿಬ್ಬಂದಿಗಳು, ಆರ್ ಜಿಪಿಆರ್ ಫೆಲೋ, ಗ್ರಾಮದ ಮುಖಂಡರು ಇದ್ದರು.

About Mallikarjun

Check Also

ಎರಡು ತಿಂಗಳ ಅನಾಥ ಮಗುವನ್ನು ರಕ್ಷಿಸಿ ನಿಯಮಾನುಸಾರ ಇಲಾಖೆಗೆ ಒಪ್ಪಿಸಿದ ಕಾರುಣ್ಯಾಶ್ರಮ.

Karunyashram rescued a two-month-old orphan and handed it over to the department as per rules. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.