Breaking News

ತುಂಬಿ ಹರಿದ ಚಿನ್ನ ಹಗರಿ ನದಿಗೆ ಬಾಗಿನ ಅರ್ಪಿಸಿದ ಗ್ರಾಮಸ್ಥರು

The villagers offered a bowl to the overflowing golden Hagari river

ಜಾಹೀರಾತು

ಕಾನ ಹೊಸಹಳ್ಳಿ: ಸತತವಾಗಿ ಸುರಿದ ಮಳೆಯಿಂದಾಗಿ ಮೂರು-ನಾಲ್ಕು ಬಾರಿ ತುಂಬಿ ಹರಿದ ಚಿನ್ನ ಹಗರಿ ನದಿಗೆ ಹೂಡೇ.ಗ್ರಾ‌.ಪಂ ಅಧ್ಯಕ್ಷ ರಾಮಚಂದ್ರಪ್ಪ ನೇತೃತ್ವದಲ್ಲಿ ಕುಟುಂಬಸ್ಥರು ಹಾಗೂ ಊರಿನ ಮುಖಂಡರು, ಗ್ರಾಮಸ್ಥರು ಬಾಗಿನ ಅರ್ಪಿಸಿದರು.
ಕಾನ ಹೊಸಹಳ್ಳಿ ಹೋಬಳಿಯ ಹೂಡೇಂ ಗ್ರಾಮದಲ್ಲಿ ಹರಿಯುತ್ತಿರುವ ಗಡಿ ಗ್ರಾಮಗಳ ಜೀವನಾಡಿಯಾಗಿರುವ ಚಿನ್ನ ಹಗರಿ ಉಪನದಿ ಮಳೆಯಿಲದ ಸುಮಾರು ವರ್ಷಗಳಿಂದ ಬತ್ತಿ ಹೋಗಿತು ಈ ವರ್ಷವೂ ಉತ್ತಮ ಮಳೆಯಿಂದ ಮೂರ್ನಾಲ್ಕು ಬಾರಿ ಚಿನ್ನ ಹಗರಿ ನಂದಿ ತುಂಬಿದೇ. ಚಿತ್ರದುರ್ಗ, ದಾವಣಗೆರೆ, ಜಗಲೂರು, ಚಳ್ಳಕೆರೆ, ಕೂಡ್ಲಿಗಿ ತಾಲೂಕಿನ ಮೂಲಕ ಹರಿಯುವ ಚಿನ್ನ ಹಗರಿ (ಜಿನಗಿಹಳ್ಳವು) ಸಾಂಸ್ಕೃತಿಕವಾಗಿ ಮಹತ್ವ ಪಡೆದಿದೆ. ಇದನ್ನು ಚಿನ್ನಹಗರಿ, ಚಿಕ್ಕಹಗರಿ, ಸಣ್ಣ ಹಗರಿ, ಜಿನಗಿಹಳ್ಳ ಎಂದು ನಾನಾ ರೀತಿಯಲ್ಲಿ ಕರೆಯುವುದುಂಟು. ಸುಮಾರು 300 ಕಿ.ಮೀ ದೂರ ಹರಿಯುವ ನದಿಯಾಗಿದೆ. ಈ ನದಿಯು ಆಂಧ್ರಪ್ರದೇಶಕ್ಕೆ ಹರಿದು ಹೋಗುತ್ತದೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಮಚಂದ್ರಪ್ಪ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು ಗಡಿ ಗ್ರಾಮಗಳ ಜೀವನಾಡಿಯಾಗಿರುವ ಚಿನ್ನ ಹಗರಿ ಹಳ್ಳವು ಸತತ ಮೂರು ನಾಲ್ಕು ಬಾರಿ ಭರ್ತಿಯಾಗಿ ಹರಿಯುತ್ತಿರುವುದು ಗ್ರಾಮದ ರೈತರು ಸೇರಿದಂತೆ ಎಲ್ಲಾಜನರಿಗೂ ಸಂತಸ ತಂದಿದೆ. ಜಲಸಮೃದ್ಧಿ ಗ್ರಾಮದ ಜನರ ಹಲವು ರೀತಿಯ ಭವನೆಗಳನ್ನು ದೂರ ಮಾಡಿದೆ. ಈ ಹಿನ್ನೆಲೆಯಲ್ಲಿ ನದಿಗೆ ಬಾಗಿನ ಅರ್ಪಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಜರಗು ಬೋರಯ್ಯ, ಪರುವಯ್ಯ, ಬಗಲರ್ ಪಾಪಣ್ಣ, ಜಿ ಬೋಸಯ್ಯ, ಗ್ರಾ.ಪಂ ಸದಸ್ಯರಾದ ಸುಂದರಮ್ಮ ಮಲ್ಲಿಕಾರ್ಜುನ, ಶಶಿಕಲಾ ಜಯಣ್ಣ, ಹಾಗೂ ಮಲ್ಲಿಕಾರ್ಜುನ ರೆಡ್ಡಿ, ಬಂಗಾರಯ್ಯ, ಸಣ್ಣ ಈರಣ್ಣ, ಹೂಡೇಂ ಶ್ರೀ ಸಿದ್ದೇಶ್ವರ ಮಠದ ಹಿರಿಯ ಅರ್ಚಕರಾದ ಸಿದ್ದಲಿಂಗ ಸ್ವಾಮಿ, ಸುರೇಶ್ ಸೇರಿದಂತೆ ಮಹಿಳೆಯರು, ಮಕ್ಕಳು, ಸಾರ್ವಜನಿಕರು ಉಪಸ್ಥಿತರಿದ್ದರು

About Mallikarjun

Check Also

ಜ್ಞಾನಾಕ್ಷಿರಾಜರಾಜೇಶ್ವರಿ ಮ್ಯೂಸಿಕ್ ವಿಡಿಯೋ ಆಲ್ಬಮ್ ಶೀರ್ಷಿಕೆ ಅನಾವರಣ

Gnanakshi Rajarajeshwari Music Video Album Title Unveiled ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನ, ಶ್ರೀ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.