Start of Nagpur Deeksha Bhumi Yatra. Raichur voice

ಸಿಂಧನೂರು: ಅ 12 ಸಂವಿದಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬೌದ್ಧ ಧರ್ಮದ ದೀಕ್ಷೆ ಪಡೆದೆ ಮಹಾರಾಷ್ಟ್ರದ ನಾಗಪುರ್ ದೀಕ್ಷ ಭೂಮಿಯಾತ್ರೆಗೆ ತಾಲೂಕಿನ ಯಾತ್ರಾತ್ರಿಗಳು ತೆರಳಲಾಯಿತು.
ನಗರದ ಪಿಡಬ್ಲ್ಯೂಡಿ ಕ್ಯಾಂಪ್ ನಲ್ಲಿರುವ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ನಂತರ ಸರ್ಕಾರದಿಂದ ಆಯೋಜನೆಗೊಂಡಿದ್ದ ರಾಜಹಂಸ ಬಸ್ನಲ್ಲಿ ಯಾತ್ರೆಗೆ ಗುರುವಾರದಂದು
ತೆರಳಿದರು.ಸಮಾಜ ಇಲಾಖೆ ಕಲ್ಯಾಣ ವತಿಯಿಂದ ಆಯೋಜಿಸುವ ನಾಗಪುರ ದೀಕ್ಷಾ ಭೂಮಿಯಾತ್ರೆಗೆ ಭೀಮಪ್ಪ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ದೀಕ್ಷಯಾತ್ರಿಗೆ ತೆರಳುವ ಯಾತ್ರಾತ್ರಿಗಳಿಗೆ ಶುಭ ಕೋರಿ ಚಾಲನೆ ನೀಡಿ ಮಾತನಾಡಿದ ಅವರು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ. ಬಿಆರ್ ಅಂಬೇಡ್ಕರ್ ದೀಕ್ಷಾ ಪಡೆದಂತಹ ಮಹಾರಾಷ್ಟ್ರದ ನಾಗಪುರದ ದೀಕ್ಷ ಭೂಮಿ ಯಾತ್ರೆಗೆ ತೆರಳುವ ಅಂಬೇಡ್ಕರ್ ಅನುವಾಯಿಗಳಿಗೆ ಅವಕಾಶ ಕಲ್ಪಿಸಿ ಸರ್ಕಾರ ಆದೇಶಿಸಿತ್ತು ಈ ಪ್ರಕಾರ ಆನ್ ಲೈನ ಅರ್ಜಿ ಆಹ್ವಾನಿಸಿದ್ದು ಈ ಪೈಕಿ ಸಿಂಧನೂರು ತಾಲೂಕಿನ ಅನುಯಾಯಿಗಳು ದೀಕ್ಷಾಭೂಮಿ ಯಾತ್ರೆಗೆ ತೆರಳಿದ್ದಾರೆ ಸರ್ಕಾರದ ವತಿಯಿಂದ ಯಾತ್ರೆಗೆ ಅನುದಾನ ನೀಡಲಾಗಿದೆ ಯಾತ್ರಾತ್ರಿಗಳು ಸುಗಮವಾಗಿ ಹೋಗಿ ದೀಕ್ಷಾ ಭೂಮಿ ದರ್ಶನ ಪಡೆದು ಸಂತೋಷದಿಂದ ವಾಪಸಾಗಿ ಎಂದು ಯಾತ್ರಾತ್ರಿಗಳನ್ನು ಸಂತೋಷದಿಂದ ಶುಭಾಶಯ ಕೋರಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಯಾತ್ರಾತ್ರಿಗಳನ್ನು ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka
